ಇಂಚಿಯಾನ್: ಕೊರಿಯಾ ಓಪನ್ನಲ್ಲಿ ಭಾರತಕ್ಕೆ ಪ್ರಶಸ್ತಿ ನಿರೀಕ್ಷೆ ಮೂಡಿಸಿದ್ದ ಏಕೈಕ ಆಟಗಾರ ಪರುಪಳ್ಳಿ ಕಶ್ಯಪ್ ಸೆಮಿಫೈನಲ್ನಲ್ಲಿ ಜಪಾನ್ನ ಕೆಂಟೊ ಮೊಮೊಟ ವಿರುದ್ಧ ಸೋಲು ಕಂಡಿದ್ದಾರೆ.
ಕೊರಿಯಾ ಓಪನ್: ಸೆಮಿಫೈನಲ್ನಲ್ಲಿ ಮುಗ್ಗರಿಸಿದ ಕಶ್ಯಪ್, ಬರಿಗೈಯಲ್ಲಿ ವಾಪಸಾದ ಭಾರತ! - ಬ್ಯಾಡ್ಮಿಂಟನ್ ಸುದ್ದಿ
ಕೊರಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಭಾರತದ ಹಿರಿಯ ಅನುಭವಿ ಶಟ್ಲರ್ ಪರುಪ್ಪಳ್ಳಿ ಕಶ್ಯಪ್ ಸೆಮಿಫೈನಲ್ನಲ್ಲಿ ಸೋಲು ಕಾಣುವ ಮೂಲಕ ಭಾರತದ ಏಕೈಕ ಪ್ರಶಸ್ತಿ ಭರವಸೆಗೆ ನಿರಾಸೆ ಮೂಡಿಸಿದ್ದಾರೆ.
![ಕೊರಿಯಾ ಓಪನ್: ಸೆಮಿಫೈನಲ್ನಲ್ಲಿ ಮುಗ್ಗರಿಸಿದ ಕಶ್ಯಪ್, ಬರಿಗೈಯಲ್ಲಿ ವಾಪಸಾದ ಭಾರತ!](https://etvbharatimages.akamaized.net/etvbharat/prod-images/768-512-4584261-287-4584261-1569677476918.jpg)
ಕೊರಿಯಾ ಓಪನ್ನಲ್ಲಿ ಪ್ರಶಸ್ತಿ ತಂದು ಕೊಡುವ ಆಟಗಾರರಾದ ಪಿ.ವಿ.ಸಿಂಧು, ಸೈನಾ ನೆಹ್ವಾಲ್ ಹಾಗೂ ಸಾಯಿ ಪ್ರಣೀತ್ ಆರಂಭದಲ್ಲೇ ಸೋಲನುಭವಿಸಿದ್ದರು. ಆದರೆ ಕಶ್ಯಪ್ ಮಾತ್ರ ಅಚ್ಚರಿಯ ಜಯ ಸಾಧಿಸಿ ಸೆಮಿಫೈನಲ್ಗೆ ಎಂಟ್ರಿ ಕೊಟ್ಟು ಪ್ರಶಸ್ತಿ ಆಸೆ ಹುಟ್ಟಿಸಿದ್ದರು.
ಆದರೆ ವಿಶ್ವದ ನಂಬರ್ ಒನ್ ಅಟಗಾರನಾದ ಜಪಾನ್ ಕೆಂಟೊ ಮೊಮೊಟಾ ವಿರುದ್ಧ 13-21, 15-21ರ ನೇರ ಸೆಟ್ಗಳಲ್ಲಿ ಸೋಲುವ ಮೂಲಕ ಟೂರ್ನಿಯಿಂದ ಹೊರಬಿದ್ದರು. ಇವರ ಸೋಲಿನ ಮೂಲಕ ಕೊರಿಯಾ ಓಪನ್ನಲ್ಲಿ ಭಾರತದ ಸವಾಲು ಕೂಡ ಪ್ರಶಸ್ತಿ ರಹಿತವಾಗಿ ಅಂತ್ಯಗೊಂಡಿತು. ಕೊರಿಯಾ ಓಪನ್ 2019 ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಭಾರತದ ಹಿರಿಯ ಅನುಭವಿ ಶಟ್ಲರ್ ಪಟು ಪರುಪ್ಪಳ್ಳಿ ಕಶ್ಯಪ್ ಸೆಮಿಫೈನಲ್ ಹಂತದಿಂದ ಹೊರಬಿದ್ದಿದ್ದಾರೆ. ಇದರಿಂದಾಗಿ ಪ್ರಶಸ್ತಿ ಕನಸು ಭಗ್ನಗೊಂಡಿದೆ.