ಕೊರಿಯಾ:ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ ಕಿಡಂಬಿ ಶ್ರೀಕಾಂತ್ ಹಾಗೂ ಸೌರಭ್ ವರ್ಮಾ ಎರಡನೇ ಸುತ್ತು ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬುಧವಾರ ನಡೆದ ಪಂದ್ಯದಲ್ಲಿ ಶ್ರೀಕಾಂತ್ 21-18, 21-7 ರಲ್ಲಿ ಹಾಂಗ್‌ಕಾಂಗ್‌ನ ವಾಂಗ್ ವಿಂಗ್ ಕಿ ವಿನ್ಸೆಂಟ್ ಅವರನ್ನು ಮಣಿಸಿ ಎರಡನೇ ಸುತ್ತು ಪ್ರವೇಶಿಸಿದ್ದಾರೆ.
ಹಾಂಗ್‌ಕಾಂಗ್ ಓಪನ್ ಟೂರ್ನಿಯಲ್ಲಿ ತಮ್ಮ ಎಂದಿನ ಲಯಕ್ಕೆ ಮರಳಿದ್ದ ಕಿಡಂಬಿ ಶ್ರೀಕಾಂತ್ ಸೆಮಿಫೈನಲ್ನಲ್ಲಿ ರೋಚಕ ಸೋಲು ಕಂಡಿದ್ದರು. ಇದೀಗ ಕೊರಿಯಾ ಮಾಸ್ಟರ್ನಲ್ಲೂ ಅದೇ ಪ್ರದರ್ಶನ ತೋರುವ ಉತ್ಸಾಹದಲ್ಲಿರುವ ಅವರು ಮುನ್ನುಗ್ಗುತ್ತಿದ್ದಾರೆ.
ಜಪಾನ್ನ ಕುಜುಮಾಸ ಸಕಾಯ್ ಗಾಯದಿಂದ ಹಿಂದೆ ಸರಿದಿದ್ದರಿಂದ ಭಾರತದ ಸಮೀರ್ ವರ್ಮಾ ಎರಡನೇ ಸುತ್ತಿಗೆ ಸುಲಭವಾಗಿ ಎಂಟ್ರಿ ಪಡೆದಿದ್ದಾರೆ. ಈ ವೇಳೆ ಸೌರಭ್ ಸಕಾಯ್ ವಿರುದ್ಧ 11-8ರಲ್ಲಿ ಲೀಡ್ ಪಡೆದಿದ್ದರು.
ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ಸೌರಭ್ ವರ್ಮಾ ಮೊದಲ ಸುತ್ತಿನ ಪಂದ್ಯದಲ್ಲೇ ಕೊರಿಯಾದ ಕಿಮ್ ಡಾಂಘನ್ ವಿರುದ್ಧ 21-13, 12-21,13-21 ರಿಂದ ಸೋಲು ಕಂಡರು.