ಬ್ಯಾಂಕಾಂಕ್:ಭಾರತದ ಪುರಷರ ಬ್ಯಾಡ್ಮಿಂಟನ್ನ ಸ್ಟಾರ್ ಆಟಗಾರ ಕಿಡಂಬಿ ಶ್ರೀಕಾಂತ್ ಬುಧವಾರ ಥಾಯ್ಲೆಂಡ್ ಮಾಸ್ಟರ್ಸ್ನ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದಿದ್ದಾರೆ.
ಕಿಡಂಬಿ ಶ್ರೀಕಾಂತ್ ಇಂಡೋನೇಷ್ಯಾದ ರುಸ್ತವಿಟೋ ವಿರುದ್ಧ, ಸಮೀರ್ ವರ್ಮಾ ಮಲೇಷ್ಯಾದ ಲೀ ಜೀ ಜಿಯಾ ವಿರುದ್ಧ ಸೋಲುಕಂಡಿದ್ದಾರೆ.

ಟೂರ್ನಿಯಲ್ಲಿ 5ನೇ ಶ್ರೇಯಾಂಕ ಪಡೆದಿದ್ದ ಶ್ರೀಕಾಂತ್ 21-12, 14-21, 11-21 ರಲ್ಲಿ ಪರಾಜಯಗೊಂಡರು. ಈ ಮೂಲಕ ಈ ವರ್ಷದ ಮೂರನೇ ಟೂರ್ನಿಯಲ್ಲಿ ಮೊದಲ ಸುತ್ತಿನಲ್ಲಿಯೇ ಸೋತು ಹೊರಬಿದ್ದಿದ್ದಾರೆ. ಈ ಸೋಲು ಅವರ ಟೋಕಿಯೋ ಒಲಿಂಪಿಕ್ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.
ಶ್ರೀಕಾಂತ್ ಈ ಮೊದಲು ಇಂಡೋನೇಷ್ಯಾ ಓಪನ್ಸ್ ಹಾಗೂ ಮಲೇಷ್ಯಾ ಮಾಸ್ಟರ್ಸ್ನಲ್ಲೂ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದರು. ಇದೀಗ ಸತತ ಮೂರನೇ ಅಂತಾರಾಷ್ಟ್ರೀಯ ಟೂರ್ನಾಮೆಂಟ್ನಲ್ಲಿ ಮೊದಲ ಸುತ್ತಿನಲ್ಲೇ ನಿರ್ಗಮಿಸಿದ್ದಾರೆ.
ಮತ್ತೋರ್ವ ಭಾರತೀಯ ಬ್ಯಾಡ್ಮಿಂಟನ್ ತಾರೆ ಸಮೀರ್ ವರ್ಮಾ 16-21, 15-21 ರಲ್ಲಿ ಮಲೇಷ್ಯಾದ ಲೀ ಜೀ ಜಿಯಾ ವಿರುದ್ಧ 38 ನಿಮಿಷಗಳ ಕಾದಾಟದಲ್ಲಿ ಸೋಲುಂಡರು.