ಕೋಪನ್ಹ್ಯಾಗನ್(ಡೆನ್ಮಾರ್ಕ್):ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್‌ನ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಹಂತದಲ್ಲಿ ಸೋಲು ಕಂಡ ಕಿಡಂಬಿ ಶ್ರೀಕಾಂತ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.
62 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಶ್ರೀಕಾಂತ್ 22-20, 13-21, 16-21ರಲ್ಲಿ ಚೀನಾದ ಎರಡನೇ ಶ್ರೇಯಾಂಕದ ಆಟಗಾರ ಚೌ ಟಿಯಾನ್ ಚೆನ್ ವಿರುದ್ಧ ಸೋಲು ಕಂಡಿದ್ದಾರೆ.
ಮೊದಲ ಪಂದ್ಯದಲ್ಲಿ ಚೌ 6-2 ಮುನ್ನಡೆ ಸಾಧಿಸಿದರು. ಆದರೆ ಮತ್ತೆ ಕಂಬ್ಯಾಕ್ ಮಾಡಿದ ಶ್ರೀಕಾಂತ್ 10-10 ಸಮಬಲ ಸಾಧಿಸಿದ್ರು. ಆದರೆ ಆಕ್ರಮಣಕಾರಿ ಆಟವಾಡಿದ ಚೌ 22-20ರಿಂದ ಮೇಲುಗೈ ಸಾಧಿಸಿದ್ರು.
ವಿಶ್ವದ ಮಾಜಿ ನಂಬರ್ ಒನ್ ಆಟಗಾರ ಶ್ರೀಕಾಂತ್, ಟಿಯಾನ್ ಚೆನ್ ವಿರುದ್ಧ ಉತ್ತಮವಾಗಿ ಹೋರಾಡಿದರು. ಆದರೆ ಕೊನೆಯಲ್ಲಿ ಮಿಂಚಿದ ಟಿಯಾನ್ ಚೆನ್ ಪಂದ್ಯ ಜಯಿಸುವಲ್ಲಿ ಯಶಸ್ವಿಯಾದ್ರು.