ಟೋಕಿಯೋ: ಇಂಡೋನೇಷ್ಯಾ ಓಪನ್ನಲ್ಲಿ ರನ್ನರ್ ಆಪ್ಗೆ ತೃಪ್ತಿ ಪಟ್ಟಿದ್ದ ಭಾರತದ ಪಿವಿ ಸಿಂಧು ಜಪಾನ್ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಟೋಕಿಯೋದಲ್ಲಿ ಗುರುವಾರ ನಡೆದ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಪಿವಿ ಸಿಂಧು ಶ್ರೇಯಾಂಕ ರಹಿತ ಜಪಾನ್ ಆಟಗಾರ್ತಿ ಅಯಾ ಓಹೋರಿ ವಿರುದ್ಧ 11-21, 21-10, 21-13ರ ಗೆಲುವು ದಾಖಲಿಸಿದರು.
ವಿಶ್ವದ 5ನೇ ಶ್ರೇಯಾಂಕದ ಸಿಂಧು ಮೊದಲ ಸೆಟ್ನಲ್ಲಿ ಸೋಲನುಭವಿಸಿದರು. ನಂತರದ ಎರಡು ಗೇಮ್ಗಳಲ್ಲಿ ತಿರುಗಿಬಿದ್ದು ಪಂದ್ಯ ಗೆದ್ದುಕೊಂಡರು. ಈ ಗೆಲುವಿನ ಮೂಲಕ ಓಹೋರಿ ವಿರುದ್ಧ 8-0 ಮುನ್ನಡೆ ಕಾಯ್ದುಕೊಂಡರು.
ಸಾಯಿ ಪ್ರಣೀತ್ಗೆ ಗೆಲುವು, ಪ್ರಣಯ್ಗೆ ಸೋಲು
ಪುರುಷರ ಸಿಂಗಲ್ಸ್‌ನಲ್ಲಿ ಸಾಯಿ ಪ್ರಣೀತ್ ಸ್ಥಳೀಯ ಶೆಟ್ಲರ್ ಕಂಟ ಸುನೇಯಮಾ ಎದುರು 21-13, 21-16ರ ನೇರ ಗೇಮ್ಗಳಿಂದ ನಿಂದ ಮಣಿಸಿದರು. ಭಾರತದ ಮತ್ತೊಬ್ಬ ಆಟಗಾರ ಪ್ರಣಯ್, ಡೆನ್ಮಾರ್ಕ್‌ನ ರಾಸ್ಮಸ್ ಜೆಮ್ಕೆ ಎದುರು 9-21, 15-21ರಿಂದ ಸೋಲನುಭವಿಸಿದರು.