ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಕಂಚು ಗೆದ್ದು ದೇಶಕ್ಕೆ ಹಿರಿಮೆ ತಂದುಕೊಟ್ಟಿದ್ದಾರೆ. ಈ ಮೂಲಕ ಸಿಂಧುಗೆ ದೇಶಾದ್ಯಂತ ಅಭಿನಂದನೆಗಳು ಸುರಿಮಳೆ ಹರಿದು ಬರುತ್ತಿದೆ. ಸಾಧನೆಗೈದ ಸಿಂಧು ಬಗೆಗೆ ನಿಮಗೆ ತಿಳಿದಿರದ ಆಸಕ್ತದಾಯಕ ಸಂಗತಿಗಳು ಇಂತಿವೆ.
ಪಿವಿ ರಮಣ, ಪಿ.ವಿಜಯ ಸಿಂಧು ಪೋಷಕರು. ಇಬ್ಬರೂ ಕ್ರೀಡಾಪಟುಗಳು. ಅವರು ರಾಷ್ಟ್ರೀಯ ವಾಲಿಬಾಲ್ ತಂಡವನ್ನು ಪ್ರತಿನಿಧಿಸಿದ್ದರು. 2000ರಲ್ಲಿ ಪಿವಿ ರಮಣ ಅರ್ಜುನ ಪ್ರಶಸ್ತಿಯನ್ನೂ ಗೆದಿದ್ದಾರೆ. ತಂದೆ-ತಾಯಿಯಂತೆ ಸಿಂಧು ಕೂಡ ಬಾಲ್ಯದಿಂದಲೇ ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಂಡು ಬಂದರು.
ಸಿಂಧು ಚಿಕ್ಕ ವಯಸ್ಸಿನಲ್ಲಿಯೇ ಬ್ಯಾಡ್ಮಿಂಟನ್ ಕಡೆಗೆ ಹೆಚ್ಚು ಒಲವು ಹೊಂದಿದ್ದರು. ಇದನ್ನರಿತ ತಂದೆ ರಮಣ ಮುಂಜಾನೆ 3 ಗಂಟೆಗೆ ಮಗಳನ್ನು 120 ಕಿ.ಮೀ ದೂರದಲ್ಲಿದ್ದ ಪುಲ್ಲೇಲ ಗೋಪಿಚಂದ್ ಅಕಾಡೆಮಿಗೆ ಕರೆದುಕೊಂಡು ಹೋಗುತ್ತಿದ್ದರು. ಸುಮಾರು 12 ವರ್ಷಗಳ ಕಾಲ ತರಬೇತಿ ಕೊಡಿಸಿದರು.
ಪಿವಿ ಸಿಂಧು ಮತ್ತು ಸಹೋದರಿ ಪಿ ದಿವ್ಯಾ ಸಿಂಧು ಸಹೋದರಿ ಪಿ ದಿವ್ಯಾ 2012ರಲ್ಲಿ ಹೈದರಾಬಾದ್ನಲ್ಲಿ ವಿವಾಹವಾದರು. ಈ ವೇಳೆ ಸೈಯದ್ ಮೋದಿ ಇಂಟರ್ನ್ಯಾಷನಲ್ ಇಂಡಿಯಾ ಗ್ರ್ಯಾಂಡ್ ಫ್ರಿ ಗೋಲ್ಡ್ ಟೂರ್ನಮೆಂಟ್ ಲಖನೌದಲ್ಲಿ ನಡೆಯುತ್ತಿತ್ತು. ಫೈನಲ್ ತಲುಪಿದ 17 ವರ್ಷದ ಸಿಂಧು ತನ್ನ ಸಹೋದರಿಯ ಮದುವೆಗೆ ಹಾಜರಾಗಿರಲಿಲ್ಲ.
2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಸಿಂಧು ಬೆಳ್ಳಿ ಗೆದ್ದಿದ್ದರು. ಈ ಮೂಲಕ ಸಾಧನೆ ಮಾಡಿದ ಮೊದಲ ಭಾರತೀಯ ಬ್ಯಾಡ್ಮಿಂಟನ್ ಆಟಗಾರ್ತಿ ಎನಿಸಿಕೊಂಡರು. ಸಾಧನೆ ಮಾಡಲು ಸಿಂಧು ಕಠಿಣ ಪರಿಶ್ರಮ ಪಟ್ಟಿದ್ದು, ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವವರೆಗೂ ಮೊಬೈಲ್ ಫೋನ್ ಮುಟ್ಟಿದ್ದಿಲ್ಲ.
ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದ ಸಿಂಧು ಹಲವಾರು ಪ್ರಶಸ್ತಿ, ಬಹುಮಾನಗಳನ್ನು ಪಡೆದಿದ್ದಾರೆ. ಅದರಲ್ಲಿ ಭಾರತದ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ನೀಡಿದ ಉಡುಗೊರೆ ಪ್ರಾಮುಖ್ಯತೆ ಪಡೆದಿದೆ. ಸಚಿನ್ ಸಿಂಧುಗೆ BMW ಕಾರನ್ನು ಉಡುಗೊರೆಯಾಗಿ ನೀಡಿದ್ದರು.
ಪಿವಿ ಸಿಂಧು ತರಬೇತಿಯಲ್ಲಿ ಇಲ್ಲದಿದ್ದಾಗ ಸ್ವಿಮಿಂಗ್‌ಪೂಲ್‌ನಲ್ಲಿ ಈಜುತ್ತಾರೆ. ಮನಸ್ಸಿನ ಶಾಂತತೆಗಾಗಿ ಯೋಗ,ಧ್ಯಾನವನ್ನು ಮಾಡುತ್ತಾರೆ.