ಕರ್ನಾಟಕ

karnataka

ETV Bharat / sports

Indonesia Open Badminton: ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ ಪಿ.ವಿ.ಸಿಂಧು - ಭಾರತೀಯ ಬ್ಯಾಡ್ಮಿಂಟನ್​ ಸ್ಟಾರ್

26ನೇ ಶ್ರೇಯಾಂಕದ ಜರ್ಮನ್​ ಯುವ ಆಟಗಾರ್ತಿಯ ವಿರುದ್ಧ ಇದೇ ಮೊದಲ ಬಾರಿಗೆ ಮುಖಾಮುಖಿಯಾಗಿದ್ದ ವಿಶ್ವಚಾಂಪಿಯನ್ ಪಿ.ವಿ.ಸಿಂಧು ಕೇವಲ 37 ನಿಮಿಷಗಳಲ್ಲಿ ಪಂದ್ಯವನ್ನು 21-12, 21-18ರಲ್ಲಿ ಮುಗಿಸಿ 8ರ ಘಟ್ಟಕ್ಕೆ ತೇರ್ಗಡೆಯಾದರು.

ಕ್ವಾರ್ಟರ್​ ಫೈನಲ್ ಪ್ರವೇಶಿಸಿದ ಪಿವಿ ಸಿಂಧು

By

Published : Nov 25, 2021, 3:28 PM IST

ಜಕಾರ್ತ(ಇಂಡೋನೇಷಿಯಾ):2 ಬಾರಿಯ ಒಲಿಂಪಿಕ್​ ಮೆಡಲಿಸ್ಟ್​ ಭಾರತದ ಪಿ.ವಿ.ಸಿಂಧು ಗುರುವಾರ ತಮ್ಮ 2ನೇ ಸುತ್ತಿನ ಪಂದ್ಯದಲ್ಲಿ ಜರ್ಮನಿಯ ಇವೋನ್​ ಲೀ ವಿರುದ್ಧ ಗೆಲುವು ಸಾಧಿಸುವ ಮೂಲಕ ಇಂಡೋನೇಷಿಯಾ ಓಪನ್​ನಲ್ಲಿ ಕ್ವಾರ್ಟರ್​ ಫೈನಲ್​ಗೆ ಲಗ್ಗೆಯಿಟ್ಟರು.

26ನೇ ಶ್ರೇಯಾಂಕದ ಜರ್ಮನ್​ ಯುವ ಆಟಗಾರ್ತಿಯ ವಿರುದ್ಧ ಇದೇ ಮೊದಲ ಬಾರಿಗೆ ಮುಖಾಮುಖಿಯಾಗಿದ್ದ ವಿಶ್ವಚಾಂಪಿಯನ್ ಸಿಂಧು, ಕೇವಲ 37 ನಿಮಿಷಗಳಲ್ಲಿ ಪಂದ್ಯವನ್ನು 21-12, 21-18ರಲ್ಲಿ ಮುಗಿಸಿ 8ರ ಘಟ್ಟ ತಲುಪಿದರು.

ಆಕ್ರಮಣಕಾರಿ ಆಟದ ಮೊರೆ ಹೋದ ಸಿಂಧು, ಆರಂಭದ ಗೇಮ್​ ಅನ್ನು 21-12ರಲ್ಲಿ ನಿರಾಯಾಸವಾಗಿ ಗೆದ್ದರು. ಇದೇ ಆತ್ಮವಿಶ್ವಾಸದಲ್ಲಿ 2ನೇ ಗೇಮ್​ನಲ್ಲಿ 7-4ರಲ್ಲಿ ಮುನ್ನಡೆ ಪಡೆದುಕೊಂಡರು. 2ನೇ ಗೇಮ್​ನ ಮಧ್ಯದಲ್ಲಿ ಸಿಂಧುಗೆ ಲೀ ಪ್ರತಿರೋಧ ತೋರಿದರಾದರೂ ಅಂತಿಮವಾಗಿ 21-18ರಲ್ಲಿ ಶರಣಾದರು.

ಬುಧವಾರ ನಡೆದಿದ್ದ ಮೊದಲ ಸುತ್ತಿನ ಪಂದ್ಯದಲ್ಲಿ ಜಪಾನ್​ನ ಆಯಾ ಒಹೋರಿ ವಿರುದ್ದ 7ನೇ ಶ್ರೇಯಾಂಕದ ಭಾರತೀಯ ಸ್ಟಾರ್ ಶಟ್ಲರ್‌​ ಕಠಿಣ ಹೋರಾಟದಿಂದ 17-21, 21-17,21-17 ರಲ್ಲಿ ಗೆಲುವು ಸಾಧಿಸಿದ್ದರು. ಈ ಪಂದ್ಯ ಒಂದು ಗಂಟೆ 10 ನಿಮಿಷಗಳ ಕಾಲ ನಡೆದಿತ್ತು.

ಪುರುಷರ ವಿಭಾಗದಲ್ಲಿ ಸಾಯಿ ಪ್ರಣೀತ್​ ಮತ್ತು ಕಿಡಂಬಿ ಶ್ರೀಕಾಂತ್​ ಕೂಡ ಫ್ರೀ ಕ್ವಾರ್ಟರ್​ ಫೈನಲ್​ ತಲುಪಿತ್ತು. ಇಂದು ತಮ್ಮ 2ನೇ ಸುತ್ತನಲ್ಲಿ ಪ್ರತ್ಯೇಕವಾಗಿ ಕಾದಾಡಲಿದ್ದಾರೆ. ಡಬಲ್ಸ್​ನಲ್ಲಿ ಸಾತ್ವಿಕ್​ ಮತ್ತು ಚಿರಾಗ್​ ಶೆಟ್ಟಿ ತಮ್ಮ ಮೊದಲ ಸುತ್ತಿನ ಪಂದ್ಯವನ್ನಾಡಲಿದ್ದಾರೆ.

ABOUT THE AUTHOR

...view details