ಜಕಾರ್ತ: 2016ರ ಒಲಿಂಪಿಂಕ್ನ ಬೆಳ್ಳಿಪದಕ ವಿಜೇತೆ, ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಇಂಡೋನೇಷ್ಯಾ ಓಪನ್ನಲ್ಲಿ ಫೈನಲ್ ತಲುಪಿದ್ದಾರೆ.
ಇಂಡೋನೇಷ್ಯಾ ಓಪನ್: ಚೀನಾದ ಚೆನ್ ಯೂಫಿ ಮಣಿಸಿ ಫೈನಲ್ಗೇರಿದ ಪಿವಿ ಸಿಂಧು - ಪಿವಿ ಸಿಂಧು
ಆಲ್ ಇಂಗ್ಲೆಂಡ್ ಚಾಂಪಿಯನ್ ವಿರುದ್ಧ ಭರ್ಜರಿ ಪ್ರದರ್ಶನ ತೋರಿದ ಸಿಂಧು ಫೈನಲ್ ಪಂದ್ಯದಲ್ಲಿ 21-19 21-10 ರ ನೇರ ಸೆಟ್ಗಳಿಂದ ಮಣಿಸುವ ಮೂಲಕ ಇಂಡೋನೇಷ್ಯಾ ಓಪನ್ನಲ್ಲಿ ಫೈನಲ್ ತಲುಪಿದ್ದಾರೆ.
ಆಲ್ ಇಂಗ್ಲೆಂಡ್ ಚಾಂಪಿಯನ್ ವಿರುದ್ಧ ಭರ್ಜರಿ ಪ್ರದರ್ಶನ ತೋರಿದ ಸಿಂಧು ಫೈನಲ್ ಪಂದ್ಯದಲ್ಲಿ 21-19 21-10 ರ ನೇರ ಗೇಮ್ಗಳಲ್ಲಿ ಮಣಿಸುವ ಮೂಲಕ ಈ ವರ್ಷದ ತಮ್ಮ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದರು.
ಸಿಂಧುಗೆ ಮೊದಲ ಸೆಟ್ನಲ್ಲಿ ವಿಶ್ವದ 3ನೇ ಶ್ರೇಯಾಂಕದ ಚೆನ್ ಪ್ರಬಲ ಪೈಪೋಟಿ ನೀಡಿದರಾದರೂ ದ್ವಿತೀಯ ಸೆಟ್ನಲ್ಲಿ ಸಿಂಧು ವಿರುದ್ಧ ನಿಲ್ಲದಾದರು.
ವಿಶ್ವದ 5ನೇ ಶ್ರೆಯಾಂಕ ಪಡೆದಿರುವ ಸಿಂಧು ಈ ವರ್ಷದ ಸಿಂಗಾಪುರ್ ಹಾಗೂ ಇಂಡಿಯ ಓಪನ್ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದರು. ಫೈನಲ್ ಪಂದ್ಯದಲ್ಲಿ ಜಪಾನ್ನ ಅಕಾನೆ ಯಮಗುಚಿಯನ್ನು ಎದುರಿಸಲಿದ್ದಾರೆ. ಸಿಂಧು ಯಮಗುಚಿ ವಿರುದ್ಧ ಕಳೆದ ನಾಲ್ಕು ಮುಖಾಮುಖಿಯಲ್ಲೂ ಗೆಲುವು ಸಾಧಿಸಿದ್ದಾರೆ. ಒಟ್ಟಾರೆ 10 - 4 ಗೆಲುವಿನ ಅಂತರ ಹೊಂದಿರುವ ಸಿಂಧು ಈ ಬಾರಿ ಚಾಂಪಿಯನ್ ಆಗುವ ನೆಚ್ಚಿನ ಆಟಗಾರ್ತಿಯಾಗಿ ಹೊರ ಹೊಮ್ಮಿದ್ದಾರೆ.