ಬಾಲಿ(ಇಂಡೋನೇಷ್ಯಾ): ಭಾರತದ ಡಬಲ್ ಒಲಿಂಪಿಕ್ ಪದಕ ವಿಜೇತೆ ಪಿ ವಿ ಸಿಂಧು ಇಂಡೋನೇಷಿಯನ್ ಓಪನ್ ಸೂಪರ್ 1000ನ ಮೊದಲ ಸುತ್ತಿನ ಪಂದ್ಯದಲ್ಲಿ ಜಪಾನ್ ಆಯಾ ಒಹೋರಿ ವಿರುದ್ಧ ಪ್ರಯಾಸದ ಗೆಲುವು ಸಾಧಿಸಿ 2ನೇ ಸುತ್ತು ಪ್ರವೇಶಿಸಿದ್ದಾರೆ.
ಬುಧವಾರ ನಡೆದ ಆರಂಭಿಕ ಸುತ್ತಿನ ಪಂದ್ಯದಲ್ಲಿ ಹಾಲಿ ವಿಶ್ವ ಚಾಂಪಿಯನ್ ಒಂದು ಗಂಟೆ 10 ನಿಮಿಷಗಳ ಕಾಲ ನಡೆದ ಕಠಿಣ ಹೋರಾಟದಲ್ಲಿ ಜಪಾನ್ ಶಟ್ಲರ್ ವಿರುದ್ಧ 17-21, 21-17 ,21-17ರ ಅಂತರದಲ್ಲಿ ಗೆಲುವು ಸಾಧಿಸಿ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.
ಈ ಗೆಲುವಿನ ಮೂಲಕ 25 ವರ್ಷದ ಒಹೋರಿ ವಿರುದ್ಧ 11-0 ಯಲ್ಲಿ ಗೆಲುವಿನ ಅಂತರವನ್ನು ವೃದ್ಧಿಸಿಕೊಂಡರು. ವಿಶ್ವದ 7ನೇ ಶ್ರೇಯಾಂಕದ ಶಟ್ಲರ್ ಕಳೆದ ವಾರ ನಡೆದ ಇಂಡೋನೇಷಿಯನ್ ಮಾಸ್ಟರ್ಸ್ನಲ್ಲಿ ಜಪಾನ್ನ ಅಕಾನೆ ಯಮಗುಚಿ ವಿರುದ್ಧ ಸೆಮಿಫೈನಲ್ನಲ್ಲಿ ಸೋಲು ಕಂಡು ನಿರಾಶೆಯನುಭವಿಸಿದ್ದರು.
ತಮ್ಮ 2ನೇ ಸುತ್ತಿನ ಪಂದ್ಯದಲ್ಲಿ ಟೂರ್ನಿಯಲ್ಲಿ 3ನೇ ಶ್ರೇಯಾಂಕದ ಪಡೆದಿರುವ ಸಿಂಧು ಜರ್ಮನ್ನ 23 ವರ್ಷದ ಇವಾನ್ ಲೀ ವಿರುದ್ಧ ಸೆಣಸಾಡಲಿದ್ದಾರೆ. ಇವರಿಬ್ಬರ ನಡುವೆ ಇದು ಮೊದಲ ಮುಖಾಮುಖಿಯಾಗಲಿದೆ.
ಪುರುಷರ ಸಿಂಗಲ್ಸ್ನಲ್ಲಿ ಸಾಯಿ ಪ್ರಣೀತ್ ಫ್ರಾನ್ಸ್ನ ತೋಮಾ ಜೂನಿಯರ್ ಪೊಪೊವ್ 21-19, 21-18 ರ ರೋಚಕ ಹೋರಾಟದಲ್ಲಿ ಗೆಲುವು ಸಾಧಿಸಿ 2ನೇ ಸುತ್ತು ಪ್ರವೇಶಿಸಿದರು. ಪ್ರಣೀತ್ ಮುಂದಿನ ಸುತ್ತಿನಲ್ಲಿ ಫ್ರಾನ್ಸ್ನ ಕ್ರಿಸ್ಟೋ ಪೊಪೊವ್ ಮತ್ತು ಇಂಡೋನೇಷಿಯಾದ ಆಂಟೋನ ಸಿನಿಸುಕಾರ ನಡುವಿನ ಸ್ಪರ್ಧೆಯಲ್ಲಿ ಗೆದ್ದವರನ್ನು ಎದುರಿಸಲಿದ್ದಾರೆ.
ಆದರೆ ಯುವ ಶಟ್ಲರ್ ಲಕ್ಷ್ಯಾ ಸೇನ್ ಅಗ್ರ ಶ್ರೇಯಾಂಕದ ಜಪಾನ್ ಸ್ಟಾರ್ ಕೆಂಟೊ ಮೊಮೊಟ ವಿರುದ್ಧ 21-23, 15-21 ಮತ್ತು ಪರುಪಳ್ಳಿ ಕಶ್ಯಪ್ 11-21, 14-21 ರಲ್ಲಿ ಸಿಂಗಾಪುರ್ನ ಲೋಹ್ ಕೀನ್ ವಿರುದ್ಧ ಸೋಲು ಕಂಡು ಹೊರಬಿದ್ದರು.
ಇದನ್ನೂ ಓದಿ:IPL-2022 Schedule : 15ನೇ ಆವೃತ್ತಿಯ ಸರಣಿಗೆ ಸರ್ವಸಿದ್ಧತೆ ; ಎಲ್ಲಿ? ಯಾವಾಗ? ಮೊದಲ ಪಂದ್ಯ ಯಾವುದು?