ಜಕಾರ್ತ(ಇಂಡೊನೇಷಿಯಾ): ಭಾರತದ ಶಟ್ಲರ್ ಬಿ ಸಾಯಿ ಪ್ರಣೀತ್ ಗುರುವಾರ ನಡೆದ ಇಂಡೋನೇಷಿಯಾ ಓಪನ್ನ ಫ್ರೀ ಕ್ವಾರ್ಟರ್ ಫೈನಲ್ನಲ್ಲಿ ಫ್ರಾನ್ಸ್ನ ಕ್ರಿಸ್ಟೋ ಪೊಪೊವ್ಗೆ ಸೋಲುಣಿಸಿ 8ರ ಘಟ್ಟಕ್ಕೆ ಪ್ರವೇಶಿಸಿದ್ದಾರೆ.
83 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಪ್ರಣೀತ್ 21-17, 14-21, 21-19ರಲ್ಲಿ ಫ್ರಾನ್ಸ್ ಶಟ್ಲರ್ಗೆ ಸೋಲುಣಿಸಿದರು. ಭಾರತೀಯ ಶಟ್ಲರ್ ಮೊದಲ ಗೇಮ್ನಲ್ಲಿ ಉತ್ತಮ ಸ್ಪರ್ಧೆ ನೀಡಿ ಗೆದ್ದರೂ, 2ನೇ ಗೇಮ್ನಲ್ಲಿ ಪೊಪೊವ್ ಅದ್ಭುತ ಕಮ್ಬ್ಯಾಕ್ ಮಾಡಿ ಪ್ರಣೀತ್ ವಿರುದ್ಧ ಪ್ರಾಬಲ್ಯದ ಗೆಲುವು ಸಾಧಿಸಿದರು. ಆದರೆ ಕೊನೆಯ ಗೇಮ್ನಲ್ಲಿ ಇಬ್ಬರೂ ಪ್ರಬಲ ಪೈಪೋಟಿ ನಡೆಸಿದರಾದರೂ ಪ್ರಣೀತ್ 21-19ರಲ್ಲಿ ರೋಚಕ ಗೆಲುವು ಸಾಧಿಸಿದರು.
ಆದರೆ ಭಾರತದ ಸ್ಟಾರ್ ಶಟ್ಲರ್ ಕಿಡಂಬಿ ಶ್ರೀಕಾಂತ್ 2ನೇ ಶ್ರೇಯಾಂಕದ ಒಲಿಂಪಿಕ್ ಚಾಂಪಿಯನ್ ಆಗಿರುವ ಡೆನ್ಮಾರ್ಕ್ನ ವಿಕ್ಟರ್ ಅಕ್ಸೆಲ್ಸನ್ ವಿರುದ್ಧ 21-14, 21-18ರಲ್ಲಿ ಸೋಲುಂಡು ಟೂರ್ನಿಯಿಂದ ಹೊರಬಿದ್ದರು.