ಕರ್ನಾಟಕ

karnataka

ETV Bharat / sports

Indonesia Masters: ಜಪಾನ್‌ನ ಅಕಾನೆ ಯಮಗುಚಿ ವಿರುದ್ಧ ಸೆಮಿಫೈನಲ್​ನಲ್ಲಿ ಪಿವಿ ಸಿಂಧುಗೆ ಸೋಲು - ಫ್ರೆಂಚ್ ಓಪನ್

ಇಂದು ನಡೆದ ಇಂಡೋನೇಷ್ಯಾ ಮಾಸ್ಟರ್ಸ್‌ನ ಸೆಮಿಫೈನಲ್‌ನಲ್ಲಿ ಪಿವಿ ಸಿಂಧು, ಜಪಾನ್‌ನ ಅಕಾನೆ ಯಮಗುಚಿ ವಿರುದ್ಧ ಪರಾಜಿತಗೊಂಡರು.

ಪಿವಿ ಸಿಂಧು
ಪಿವಿ ಸಿಂಧು

By

Published : Nov 20, 2021, 2:14 PM IST

ಇಂಡೋನೇಷ್ಯಾ: ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು (PV Sindhu) ಇಂದು ನಡೆದ ಇಂಡೋನೇಷ್ಯಾ ಮಾಸ್ಟರ್ಸ್ (Indonesia Masters) ಸೆಮಿಫೈನಲ್‌ ಬ್ಯಾಡ್ಮಿಂಟನ್ ಪಂದ್ಯದಲ್ಲಿ ಜಪಾನ್‌ನ ಅಕಾನೆ ಯಮಗುಚಿ (Japan's Akane Yamaguchi) ಅವರ ಕೈಯಲ್ಲಿ ಹೀನಾಯ ಸೋಲು ಕಂಡರು.

ಪಿವಿ ಸಿಂಧು ಮತ್ತು ಜಪಾನ್‌ನ ಅಕಾನೆ ಯಮಗುಚಿ ನಡುವಿನ ಸೆಮಿಫೈನಲ್‌ ಪಂದ್ಯ 32 ನಿಮಿಷಗಳ ಕಾಲ ನಡೆದಿದ್ದು, ಈ ಪಂದ್ಯದಲ್ಲಿ ಅಕಾನೆ ಯಮಗುಚಿ 21-13, 21-9 ಅಂತರದಿಂದ ಗೆಲುವು ಸಾಧಿಸಿದರು.

ಇದನ್ನೂ ಓದಿ:Australian Open: ಆಸ್ಟ್ರೇಲಿಯನ್ ಓಪನ್​ನಲ್ಲಿ ಆಡಲು ಲಸಿಕೆ ಕಡ್ಡಾಯ..!

ಕಳೆದ ತಿಂಗಳು ನಡೆದ ಫ್ರೆಂಚ್ ಓಪನ್ (BWF World Tour ) ನಂತರ ಬಿಡಬ್ಲ್ಯೂಎಫ್ ವರ್ಲ್ಡ್ ಟೂರ್‌ನಲ್ಲಿ ಸಿಂಧು ಸತತ ಎರಡನೇ ಬಾರಿ ಸೆಮಿ ಫೈನಲ್ ಪ್ರವೇಶಿಸಿದ್ದರು. ಇದಕ್ಕೂ ಮುನ್ನ ಶುಕ್ರವಾರ ನಡೆದ ಪಂದ್ಯದಲ್ಲಿ ಟರ್ಕಿಯ ನೆಸ್ಲಿನ್ ಯಿಗಿಟ್ ಅವರನ್ನು 35 ನಿಮಿಷಗಳಲ್ಲಿ 21-13, 21-10 ಅಂತರದಿಂದ ಸಿಂಧು ಸೋಲಿಸಿದ್ದರು.

ಇದನ್ನೂ ಓದಿ:ATP Finals semis: ಆಂಡ್ರೆ ರುಬ್ಲೆವ್ ಮಣಿಸಿ ಸೆಮಿಫೈನಲ್​ಗೆ ಲಗ್ಗೆಯಿಟ್ಟ​ ಕಾಸ್ಪರ್​ ರೂಡ್

ABOUT THE AUTHOR

...view details