ಕರ್ನಾಟಕ

karnataka

ETV Bharat / sports

ಇಂಡೋನೇಷ್ಯಾ ಮಾಸ್ಟರ್​ನಲ್ಲಿ ಆರಂಭದಲ್ಲೇ ಆಘಾತ... ಮೊದಲ ಸುತ್ತಿನಲ್ಲಿ ಹೊರಬಿದ್ದ ಸೈನಾ - ಸೈನಾ ನೆಹ್ವಾಲ್​ಗೆ ಮೊದಲ ಸುತ್ತಿನಲ್ಲೇ ಸೋಲು

ಎರಡು ದಿನಗಳ ಹಿಂದೆಯಷ್ಟೇ ಮಲೇಷ್ಯಾ ಮಾಸ್ಟರ್​ನಲ್ಲಿ ಕ್ವಾರ್ಟರ್​ನಲ್ಲಿ ಸೋಲುಕಂಡಿದ್ದ ವಿಶ್ವದ 11 ಶ್ರೇಯಾಂಕದ ಸೈನಾ ನೆಹ್ವಾಲ್​ ಬುಧವಾರ ನಡೆದ ಇಂಡೋನೇಷ್ಯ ಮಾಸ್ಟರ್​ನಲ್ಲಿ ಜಪಾನ್​ನ ಸಯಾಕಾ ತಕಹಶಿ ವಿರುದ್ಧ ಸೋಲುಕಾಣುವ ಮೂಲಕ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದಾರೆ.

Indonesia Masters saina lost
Indonesia Masters saina lost

By

Published : Jan 15, 2020, 6:29 PM IST

ಜಕಾರ್ತ:ಭಾರತದ ಸ್ಟಾರ್​ ಬ್ಯಾಡ್ಮಿಂಟನ್​ ಆಟಗಾರ್ತಿ ಸೈನಾ ನೆಹ್ವಾಲ್​ ವರ್ಷದ ಎರಡನೇ ಬ್ಯಾಡ್ಮಿಂಟನ್​ ಚಾಂಪಿಯನ್​ಶಿಪ್​ನಲ್ಲೂ ಆರಂಭದ ಸುತ್ತಿನಲ್ಲೇ ನಿರ್ಗಮಿಸುವ ಮೂಲಕ ನಿರಾಶೆಯನುಭವಿಸಿದ್ದಾರೆ.

ಎರಡು ದಿನಗಳ ಹಿಂದೆಯಷ್ಟೇ ಮಲೇಷ್ಯಾ ಮಾಸ್ಟರ್​ನಲ್ಲಿ ಕ್ವಾರ್ಟರ್​ನಲ್ಲಿ ಸೋಲುಕಂಡಿದ್ದ ವಿಶ್ವದ 11 ಶ್ರೇಯಾಂಕದ ಸೈನಾ ನೆಹ್ವಾಲ್​ ಬುಧವಾರ ನಡೆದ ಇಂಡೋನೇಷ್ಯ ಮಾಸ್ಟರ್​ನಲ್ಲಿ ಜಪಾನ್​ನ ಸಯಾಕಾ ತಕಹಶಿ ವಿರುದ್ಧ ಸೋಲುಕಾಣುವ ಮೂಲಕ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದಾರೆ.

ಸೈನಾ ನೆಹ್ವಾಲ್​ ಜಪಾನ್​ ಆಟಗಾರ್ತಿ ವಿರುದ್ಧ 21-19, 13-21 ಹಾಗೂ 5-21 ಗೇಮ್​ಗಳ ಅಂತರದಿಂದ ಸೋಲುಕಂಡರು. ಮೊದಲ ಸುತ್ತಿನಲ್ಲಿ ಮೇಲುಗೈ ಸಾಧಿಸಿದ ಸೈನಾ ಎರಡನೇ ಸುತ್ತಿನಲ್ಲಿ ಪೈಪೋಟಿ ನೀಡಲು ಪ್ರಯತ್ನಿಸಿದರು, ಆದರೆ ಮೂರನೇ ಸುತ್ತಿನಲ್ಲಿ ಧಯನೀಯ ವೈಫಲ್ಯ ಅನುಭವಿಸಿ ಟೂರ್ನಿಯಿಂದ ಹೊರಬಿದ್ದರು.

ಇದಕ್ಕು ಮೊದಲು ವಿಶ್ವದ 12 ನೇ ಶ್ರೇಯಾಂಕದ ಕಿಡಂಬಿ ಶ್ರೀಕಾಂತ್ 21-18, 12-21, 14-21 ರಿಂದ ಇಂಡೋನೇಷ್ಯಾದ ರುಸ್ತಾವಿಟೊ ವಿರುದ್ಧ ಸೋಲನಭವಿಸಿದರು. ಮೊದಲ ಸೆಟ್​ನಲ್ಲಿ ಭರವಸೆ ಆಟವಾಡಿದ್ದ ಶ್ರೀಕಾಂತ್​ 21-18 ಪಾಯಿಂಟ್​​ಗಳಿಂದ ​ ಗೆಲವು ಸಾಧಿಸಿದ್ದರು. ಆದರೆ ಎರಡು ಮತ್ತು ಮೂರನೇ ಸೆಟ್​​​ನಲ್ಲಿ ರುಸ್ತಾವಿಟೊ 12-21, 14-21 ಪಾಯಿಂಟ್​​ಗಳಿಂದ ಶ್ರೀಕಾಂತ್​ರನ್ನ ಸುಲಭವಾಗಿ ಸೋಲಿಸಿದರು.

ಮಿಶ್ರ ಡಬಲ್ಸ್‌ನಲ್ಲಿ, ಪ್ರಣವ್ ಜೆರ್ರಿ ಚೋಪ್ರಾ ಮತ್ತು ಸಿಕ್ಕಿ ರೆಡ್ಡಿ, ದಕ್ಷಿಣ ಕೊರಿಯಾದ ಕೊ ಸುಂಗ್ ಹ್ಯುನ್ ಮತ್ತು ಇಒಮ್ ಹೆ ವಿರುದ್ಧ 8-21,14-21 ನೇರ ಸೆಟ್​​ನಿಂದ ಪರಾಭವಗೊಂಡಿದ್ದಾರೆ.

ABOUT THE AUTHOR

...view details