ಬ್ಯಾಂಕಾಕ್: ಮಿಶ್ರ ಡಬಲ್ಸ್ನಲ್ಲಿ ಸಾತ್ವಿಕ್ ಮತ್ತು ಅಶ್ವಿನಿ ಪೊನ್ನಪ್ಪ ಅವರು ಹಾಂಗ್ಕಾಂಗ್ನ ಚಂಗ್ ತಾಕ್ ಚಿಂಗ್ ಮತ್ತು ಎನ್ಜಿ ವಿಂಗ್ ಯುಂಗ್ ಜೋಡಿಯ ವಿರುದ್ಧ 2ನೇ ಸುತ್ತಿನ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ಟೂರ್ನಿಯಲ್ಲಿ ಭಾರತೀಯರ ಸವಾಲು ಮುಗಿಯಿತು.
ಭಾರತದ ಪರ ಕೊನೆಯ ಸ್ಪರ್ಧಿಯಾಗಿದ್ದ ಸಾತ್ವಿಕ್ ಮತ್ತು ಪೊನ್ನಪ್ಪ ಜೋಡಿ 12-21, 17-21ರಲ್ಲಿ ಹಾಂಗ್ ಕಾಂಗ್ ಜೋಡಿ ವಿರುದ್ಧ ನೇರ ಗೇಮ್ಗಳ ಸೋಲು ಕಂಡು 10 ತಿಂಗಳ ಬಳಿಕ ನಡೆದ ಅಂತಾರಾಷ್ಟ್ರೀಯ ಟೂರ್ನಿಯಿಂದ ಹೊರಬಿದ್ದರು.
ಇದಕ್ಕೂ ಮುನ್ನ ಗುರುವಾರ ಕಿಡಂಬಿ ಶ್ರೀಕಾಂತ್ ಗಾಯದ ಸಮಸ್ಯೆಯಿಂದ ಟೂರ್ನಿಯಿಂದ ಹೊರಬಂದರೆ ಒಲಿಂಪಿಕ್ ಪದಕ ವಿಜೇತೆ ಸೈನಾ ನೆಹ್ವಾಲ್ ಥಾಯ್ಲೆಂಡ್ನ ಬುಸಾನನ್ ಒಂಗ್ ಬಮ್ರಂಗ್ಫಾನ್ ವಿರುದ್ಧದ 23-21, 14-21, 16-21ರ ರೋಚಕ ಕದನದಲ್ಲಿ ಸೋಲು ಕಂಡರು.