ಆರ್ಹಸ್ (ಡೆನ್ಮಾರ್ಕ್): ಭಾರತದ ಪುರುಷರ ಬ್ಯಾಡ್ಮಿಂಟನ್ ತಂಡವು ತಾಹಿತಿಯನ್ನು 5-0 ಅಂತರದಿಂದ ಸೋಲಿಸಿ, 2010ರ ನಂತರ ಇದೇ ಮೊದಲ ಬಾರಿಗೆ ಥಾಮಸ್ ಕಪ್‌ನ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿತು.
ಥಾಮಸ್ ಕಪ್ ಫೈನಲ್ ಟೂರ್ನ್ಮೆಂಟ್ನಲ್ಲಿ ಭಾರತ ಬ್ಯಾಡ್ಮಿಂಟನ್ ತಂಡ ಉತ್ತಮ ಪ್ರದಶರ್ನ ನೀಡುತ್ತಿದೆ. ಎರಡನೇ ಪಂದ್ಯವನ್ನು ಭಾರತ 5-0 ಅಂತರದಲ್ಲಿ ಗೆದ್ದುಕೊಂಡಿತು. ಭಾನುವಾರವೂ ಅವರು ಅದೇ ಅಂತರದಿಂದ ನೆದರ್‌ಲ್ಯಾಂಡ್ ಅನ್ನು ಸೋಲಿಸಿದ್ದರು.