ಕರ್ನಾಟಕ

karnataka

ETV Bharat / sports

ಇರುವ ಒಂದೇ ಕೈಯಲ್ಲೇ ಪ್ಯಾರಾಲಿಂಪಿಕ್ಸ್​ನಲ್ಲಿ ದೇಶಕ್ಕೆ ಪದಕ ತಂದುಕೊಡುವ ಕನಸು ಈ 18ರ ಪೋರಿಯದ್ದು! - ಬ್ಯಾಡ್ಮಿಂಟನ್​ನಲ್ಲಿ ಪದಕ ತಂದುಕೊಡುವ ಕನಸು

ಪದೇ ಪದೆ ಕ್ರೀಡಾ ಸಚಿವಾಲಯಕ್ಕೆ ಮನವಿ ಮಾಡಿದ ನಂತರ ಪಲಕ್​ ಕೊಹ್ಲಿ ಅವರನ್ನು ಟಾರ್ಗೆಟ್​ ಒಲಿಂಪಿಕ್​ ಪೋಡಿಯಂ ಸ್ಕೀಮ್​(TOPS) ಸೇರಿಸಿಕೊಂಡಿದೆ. ಜೊತೆಗೆ ಟೋಕಿಯೋ ಕ್ರೀಡಾಕೂಟದಲ್ಲಿ ಉತ್ತಮ ಅಭ್ಯಾಸ ಮತ್ತು ತಯಾರಿಗಾಗಿ ಅನುದಾನದ ಬಾಗಿಲೂ ಕೂಡ ತೆರೆದಿದೆ.

ಟೋಕಿಯೋ ಪ್ಯಾರಾಲಿಂಪಿಕ್ಸ್​
ಪಲಕ್ ಕೊಹ್ಲಿ

By

Published : Dec 24, 2020, 11:01 PM IST

Updated : Dec 24, 2020, 11:21 PM IST

ಹೈದರಾಬಾದ್​: ಹುಟ್ಟುನಿಂದಲೇ ಎಡಗೈ ಕಳೆದುಕೊಂಡಿರುವ ಶಟ್ಲರ್​ ಪಲಕ್ ಕೊಹ್ಲಿ 2021ರಲ್ಲಿ ಜಪಾನ್​ನ ಟೋಕಿಯೋ ಪ್ಯಾರಲಿಂಪಿಕ್ಸ್​ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಅವರಿಗೆ ತಮ್ಮ ವಿಕಲಚೇತನೆತೆಯನ್ನು ಮೀರಿ ಒಲಿಂಪಿಕ್ಸ್​ ಪೋಡಿಯಂನಲ್ಲಿ ನಿಂತು ರಾಷ್ಟ್ರಗೀತೆ ಹಾಡುವ ಕನಸನ್ನು ಕಾಣುತ್ತಿದ್ದಾರೆ.

ಈ ಯುವತಿ ಪ್ರಸ್ತುತ ಶ್ರೇಯಾಂಕದಲ್ಲಿ 5ನೇ ಸ್ಥಾನ ಹೊಂದಿದ್ದಾರೆ. ಹಾಗಾಗಿ ಒಲಿಂಪಿಕ್ಸ್​ಗೆ ನೇರವಾಗಿ ಅರ್ಹತೆಗಿಟ್ಟಿಸಿಕೊಂಡಿದ್ದಾರೆ. ಆದ್ದರಿಂದ ಭಾರತಕ್ಕಾಗಿ ಪ್ರಶಸ್ತಿ ತಂದುಕೊಡುವ ಇವರ ಕನಸ್ಸು ನನಸಾಗುವುದನ್ನು ತಡೆಯಲು ಯಾರಿಂದಲೂ ತಳ್ಳಲು ಸಾಧ್ಯವಿಲ್ಲ.

ಪದೇ ಪದೆ ಒದೇ ಕ್ರೀಡಾ ಸಚಿವಾಲಯಕ್ಕೆ ಮನವಿ ಮಾಡಿದ ನಂತರ ಪಲಕ್​ ಕೊಹ್ಲಿ ಅವರನ್ನು ಟಾರ್ಗೆಟ್​ ಒಲಿಂಪಿಕ್​ ಪೋಡಿಯಂ ಸ್ಕೀಮ್​(TOPS) ಸೇರಿಸಿಕೊಂಡಿದೆ. ಜೊತೆಗೆ ಟೋಕಿಯೋ ಕ್ರೀಡಾಕೂಟದಲ್ಲಿ ಉತ್ತಮ ಅಭ್ಯಾಸ ಮತ್ತು ತಯಾರಿಗಾಗಿ ಅನುದಾನದ ಬಾಗಿಲೂ ಕೂಡ ತೆರೆದಿದೆ.

18 ವರ್ಷದ ಯುವ ಆಟಗಾರ್ತಿ ತಮ್ಮ ಸಿದ್ಧತೆ ಮತ್ತು ಅವರ ಭಾರತಕ್ಕೆ ಮೆಡಲ್​ ತಂದುಕೊಡುವ ಕನಸುಗಳನ್ನು ಕುರಿತು ಈಟಿವಿ ಭಾರತದ ಜೊತೆಗೆ ನಡೆಸಿದ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

ಪಲಕ್ ಕೊಹ್ಲಿ

ಲಾಕ್ ಡೌನ್ ಸಮಯದಲ್ಲಿ ತಾತ್ಕಾಲಿಕ ಶಿಬಿರದಲ್ಲಿ ನಿಮ್ಮ ತಯಾರಿಕೆಯ ಬಗ್ಗೆ ನಾವೆಲ್ಲರೂ ಕೇಳಿದ್ದೇವೆ. ಪ್ಯಾರಾಲಿಂಪಿಕ್ಸ್​ಗೆ ನಿಮ್ಮ ತಯಾರಿ ಹೇಗಿದೆ?

ಹೌದು, ಲಾಕ್​ಡೌನ್​ ನನಗೆ ಮತ್ತು ಎಲ್ಲರಿಗೂ ಕಠಿಣ ಸಮಯವಾಗಿತ್ತು. ಆದರೆ, ನಮ್ಮ ಕೋಚ್​ ಮೊದಲೇ ಪರಿಸ್ಥಿತಿಯನ್ನು ಅರಿತಿದ್ದರಿಂದ ಎಲ್ಲಾ ಉಪಕರಣಗಳನ್ನು ಸಂಗ್ರಹಿಸಿದ್ದರು. ನಮ್ಮ ತರಬೇತಿಗಾಗಿ ಹೊರಾಂಗಣ ಕೋರ್ಟ್​ಗಳ ವ್ಯವಸ್ಥೆ ಮಾಡಿದ್ದರು.

ಬುದ್ದಿವಂತಿಕೆಯಿಂದ ಅಭ್ಯಾಸವನ್ನು ಮಾಡುವುದು ಒಲಿಸಿಕೊಂಡಿದ್ದೇನೆ. ನಾನು ಕೋಚ್​ಗಳನ್ನು ನನ್ನತ್ತ ಸೆಳೆಯಬಲ್ಲೆ ಮತ್ತು ಅವರಿಂದ ಬ್ಯಾಕ್​ಹ್ಯಾಂಡ್​ನಲ್ಲಿ ಆಡುವುದನ್ನು ಸುಧಾರಿಸಿಕೊಂಡಿದ್ದೇನೆ. ಜೊತೆಗೆ ಡಿಸೆಪ್ಟಿವ್​ ಸ್ಟ್ರೋಕ್ಸ್​ ಪ್ರಯೋಗ ಮಾಡುವುದನ್ನು ಕಲಿಯಲು ಕೋಚ್​ಗಳು ನನಗೆ ಅವಕಾಶ ಮಾಡಿಕೊಟ್ಟಿದ್ದಾರೆ.

ಪ್ರಸ್ತುತ ಲಖನೌದ ಗೌರವ್​ ಖನ್ನಾ ಎಕ್ಸೆಲಿಯಾ ಬ್ಯಾಡ್ಮಿಂಟನ್​ ಅಕಾಡೆಮಿಯಲ್ಲಿ ನನ್ನ ತರಬೇತಿ ಅದ್ಭುತವಾಗಿದೆ. 2017ರಲ್ಲಿ ನಾನು ಬ್ಯಾಡ್ಮಿಂಟನ್​ ಆರಂಭಿಸಿದ ಸಮಯದಿಂದಲೂ ಇಲ್ಲೇ ತರಬೇತಿ ಪಡೆಯುತ್ತಿದ್ದೇನೆ.

ಕ್ರೀಡಾ ಸಚಿವರಿಗೆ ಸಾಕಷ್ಟು ಮನವಿ ಸಲ್ಲಿಸಿದ ನಂತರವೂ, ನಿಮ್ಮನ್ನು ಟಾಪ್ಸ್‌ಗೆ ಸೇರಿಸಲು ವಿಳಂಬವಾಗಿದೆ. ಇದರ ಬಗ್ಗೆ ಏನಾದರೂ ದೂರುಗಳಿವೆಯೇ?

ಇಲ್ಲಿ ಯಾರ ಮೇಲೂ ದೂರುವುದಲ್ಲ. ಪರಿಸ್ಥಿತಿ ಮತ್ತು ಸಂದರ್ಭಗಳು ಹಾಗಿರುತ್ತವೆ. ಒಲಿಂಪಿಕ್ ವರ್ಷದಲ್ಲಿ ನಡೆದ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ನಾನು 5ನೇ ಶ್ರೇಯಾಂಕ ಪಡೆದಿದ್ದೇನೆ. ಆದ್ದರಿಂದ ಟೋಕಿಯೋ ಪ್ಯಾರಾಲಿಂಪಿಕ್ಸ್​ಗೆ ಅರ್ಹತೆ ಪಡೆಯುವ ಎಲ್ಲ ಸಾಮರ್ಥ್ಯವನ್ನು ಪಡೆದಿದ್ದೇನೆ. ಏಪ್ರಿಲ್​ 20ರಂದು ನನ್ನ ಹೆಸರನ್ನು ಬಿಡಬ್ಲ್ಯೂಎಫ್ ಘೋಷಿಸುತ್ತದೆ ಎಂದು ನಾನು ನಿರೀಕ್ಷಿಸುತ್ತಿದ್ದೆ. ಆದರೆ, ದುರದೃಷ್ಟವಶಾತ್, ಕೋವಿಡ್​-19 ಏಕಾಏಕಿ ಸಂಭವಿಸಿದ ಕಾರಣ ಅದು ಸಾಧ್ಯವಾಗಲಿಲ್ಲ. ಆದ್ದರಿಂದ, TOPS ನಲ್ಲಿ ನನ್ನ ಸೇರ್ಪಡೆ ವಿಳಂಬವಾಯಿತು.

ಗೌರವಾನ್ವಿತ ಸಚಿವರು ತುಂಬಾ ಕರುಣಾಮಯಿ, ನನ್ನ ಹೆಸರನ್ನು ಟಾಟ್ಸ್​ಗೆ ಪರಿಗಣಿಸಲು ನೆರವಾದರು. ಹಾಗಾಗಿ ನಾನು ಪಾಸಿಟಿವ್ ಆಗಿರಲು ಬಯಸುತ್ತೇನೆ ಮತ್ತು ಪೂರ್ಣ ಸಮರ್ಪಣೆ ಮತ್ತು ಶ್ರದ್ಧೆಯಿಂದ ತರಬೇತಿಯತ್ತ ಗಮನ ಹರಿಸುತ್ತೇನೆ.

ಟಾಪ್ಸ್​ ಸೇರ್ಪಡೆಯಿಂದ ನಿಮ್ಮ ತಯಾರಿಕೆಯಲ್ಲಿ ಆಗಿರುವ ವ್ಯತ್ಯಾಸವನ್ನು ತಿಳಿಸಿ?

ಸರ್ಕಾರದಿಂದ ಸಿಗುವ ಒಂದು ದೊಡ್ಡ ಬೆಂಬಲ ಮತ್ತು 2021ರ ಪ್ಯಾರಾಲಿಂಪಿಕ್ಸ್​ ಸಿದ್ಧತೆಗಳಿಗಾಗಿ ಎಲ್ಲ ಬೆಂಬಲವನ್ನು ಪಡೆಯುತ್ತೇನೆ ಎಂಬ ದೊಡ್ಡ ಭಾವನೆಯಿದೆ. ಇದು ನನಗೆ ಆತ್ಮವಿಶ್ವಾಸವನ್ನು ನೀಡಿದೆ ಮತ್ತು ಟೋಕಿಯೊದಲ್ಲಿ ಪದಕದ ಮೇಲೆ ನನ್ನ ಕಣ್ಣಿದೆ.

ನನ್ನ ತರಬೇತುದಾರ ಗೌರವ್ ಖನ್ನಾ ಅವರು ನನ್ನ ಎಲ್ಲಾ ತರಬೇತಿ ಮತ್ತು ಸುಧಾರಣೆಯ ಮೇಲೆ ಕೆಲಸ ಮಾಡುತ್ತಿದ್ದಾರೆ. ಪಾರುಲ್ ಪರ್ಮಾರ್ ಸಹೋದರಿಯೊಂದಿಗೆ ಅಭ್ಯಾಸ ಮಾಡುವುದರಿಂದ ನನಗೆ ಅಗತ್ಯವಿರುವ ತೀಕ್ಷ್ಣವಾದ ಹೊಡೆತಗಳು ಮತ್ತು ಬಲವಾದ ಬ್ಯಾಕ್‌ಹ್ಯಾಂಡ್ ಜೊತೆಗೆ ಡಿಸೆಪ್ಟಿವ್ ಸ್ಟ್ರೋಕ್ಸ್​ ಹೊಡೆತಗಳನ್ನು ಕಲಿಯುವಂತೆ ಮಾಡಿದೆ. ಜೊತೆಗೆ ನನ್ನ ಗುರಿ ತುಂಬಾ ಹೆಚ್ಚಾಗಿದೆ. ಟೋಕಿಯೊ ಪ್ಯಾರಾಲಿಂಪಿಕ್ಸ್ 2021ಗೆ ತಯಾರಿ ನಡೆಸಲು ನನಗೆ 7 ತಿಂಗಳಿಗಿಂತ ಹೆಚ್ಚಿನ ಸಮಯವಿದೆ. ಇದೀಗ ನನಗೆ ಈಗ ಸರ್ಕಾರದಿಂದ ಬೆಂಬಲ ಸಿಕ್ಕರುವುದರಿಂದ ಹೆಚ್ಚು ಸಂತಸ ತಂದಿದೆ.

ಅಂಗವಿಕಲತೆಯಿಂದ ನೀವು ಯಾವುದಾದರೂ ಸಮಸ್ಯೆ ಎದುರಿಸುತ್ತಿದ್ದೀರಾ ಅಥವಾ ಹಿಂದೆ ಎದುರಿಸಿದ್ದೀರಾ?

ಇದನ್ನ ಸಮಸ್ಯೆ ಎನ್ನುವುದಕ್ಕಿಂದ ಸವಾಲು ಎಂಬ ಪದಗಳನ್ನು ಬಳಸಲು ನಾನು ಬಯಸುತ್ತೇನೆ. ನಾನೊಬ್ಬ ಅಪ್ರಾಪ್ತ ಹುಡುಗಿ ಮತ್ತು ವಿಭಿನ್ನ ಸಾಮರ್ಥ್ಯವನ್ನು ಹೊಂದಿದ್ದೇನೆ. ಆದರೆ, ನಾನು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾದ ನನ್ನ ದೈಹಿತ ಸಮಸ್ಯೆಗಳಿಂದ ಜನರು ನನ್ನನ್ನು ನಿರುತ್ಸಾಹಗೊಳಿಸಿದರು. ನಾನು ಬ್ಯಾಡ್ಮಿಂಟನ್ ಆಯ್ಕೆ ಮಾಡಿಕೊಂಡಾಗ ನನ್ನ ಮೇಲೆ ಹೆಚ್ಚು ಖರ್ಚು ಮಾಡುವ ಅಗತ್ಯವಿಲ್ಲ ಎಂದು ಹಿರಿಯ ಆಟಗಾರರು ನನ್ನ ತಂದೆಗೆ ಸಲಹೆ ನೀಡಿದ್ದರು. ನನ್ನ ತಂದೆ ಮತ್ತು ಕೋಚ್​ಗಳಿಗೆ ಬಿಟ್ಟರೆ ನಾನು ಟೋಕಿಯೋ ಪ್ಯಾರಾಲಿಂಪಿಕ್ಸ್​ನ ಪ್ರಬಲ ಸ್ಪರ್ಧಿಯಾಗುತ್ತೇನೆಂದು ಯಾರೂ ನಿರೀಕ್ಷಿಸಿರಲಿಲ್ಲ. ಆದರೆ, ಮುಂಬರುವ ಹೊಸ ಸವಾಲುಗಳನ್ನು ಎದುರಿಸಲು ನಾನು ಸಿದ್ಧಳಿದ್ದೇನೆ.

ಟೋಕಿಯೊ ಪ್ಯಾರಾಲಿಂಪಿಕ್ಸ್ ಬಗ್ಗೆ ಮಾತನಾಡೋಣ. ವಿಶ್ವದ ಅತಿದೊಡ್ಡ ಕ್ರೀಡಾಕೂಟಕ್ಕೆ ಹೋಗುವ ನಿಮ್ಮ ಗುರಿ ಮತ್ತು ನಿರೀಕ್ಷೆಗಳೇನು?

ಇದೇ ಮೊದಲ ಬಾರಿಗೆ ಪ್ಯಾರಾಲಿಂಪಿಕ್ಸ್​ನಲ್ಲಿ ಬ್ಯಾಡ್ಮಿಂಟನ್​ ಸೇರಿಸಿರುವುದು ನಮಗೆ ರೋಮಾಂಚನಕಾರಿ ಘಟನೆಯಾಗಿದೆ. ವಿಶ್ವದ ಅಗ್ರ 6 ಆಟಗಾರರು ಈ ಆಟಗಳಿಗೆ ಅರ್ಹತೆ ಗಿಟ್ಟಿಸಿಕೊಳ್ಳುತ್ತಾರೆ. ನಾನು ವಿಶ್ವದ 5ನೇ ಶ್ರೇಯಾಂಕಿತೆಯಾಗಿರುವುದರಿಂದ ನಾನು ಸ್ಪರ್ಧಿಸಲು ಅರ್ಹಳಾಗಿದ್ದೇನೆ. ಟೋಕಿಯೋ ಪ್ಯಾರಾಲಿಂಪಿಕ್ಸ್​ನಲ್ಲಿ ಪದಕ ಗೆಲ್ಲಲು ನನಗೆ ಉತ್ತಮ ಅವಕಾಶವಿದೆ.

ನಿಮ್ಮ ಕ್ರೀಡೆಗೆ ವೆಲ್ಸ್‌ಪನ್ ಹೇಗೆ ಸಹಾಯ ಮಾಡಿದೆ ಎಂಬುದನ್ನ ನಮಗೆ ತಿಳಿಸಿ?

ಬಾಲ್ಯದಿಂದಲೂ ನಾನು ಟಿವಿಯಲ್ಲಿ ವೆಲ್ಸ್‌ಪನ್ ಜಾಹೀರಾತನ್ನ ವಿವಿಧ ಉತ್ಪನ್ನಗಳಲ್ಲಿ ನೋಡುತ್ತಿದ್ದೇನೆ. ಆದರೆ, ಒಂದು ದಿನ ನಾನು ಅದರ ಭಾಗವಾಗುತ್ತೇನೆ ಎಂದು ಭಾವಿಸಿರಲಿಲ್ಲ. ಅವರು ನನಗೆ ನೀಡುತ್ತಿರುವ ಬೆಂಬಲಕ್ಕೆ ನಾನು ವೆಲ್ಸ್‌ಪನ್‌ಗೆ ತುಂಬಾ ಕೃತಜ್ಞನಾಗಿದ್ದೇನೆ. ನಾನು 12ನೇ ತರಗತಿಯಲ್ಲಿದ್ದೇನೆ. ವೆಲ್ಸ್‌ಪನ್ ನನ್ನ ಕ್ರೀಡಾ ತರಬೇತಿಗಾಗಿ ದೊಡ್ಡ ಪಾತ್ರವನ್ನು ವಹಿಸುತ್ತಿರುವುದು ಮಾತ್ರವಲ್ಲದೆ ನನ್ನ ಶಿಕ್ಷಣದಲ್ಲಿ ನನಗೆ ಸಹಕರಿಸುತ್ತಿದೆ.

Last Updated : Dec 24, 2020, 11:21 PM IST

ABOUT THE AUTHOR

...view details