ವೆಲ್ವಾ(ಸ್ಪೇನ್):ಭಾರತದ ಹೆಚ್ ಎಸ್ ಪ್ರಣಯ್ ಮತ್ತು ಮಹಿಳಾ ಡಬಲ್ಸ್ನಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ಎನ್ ಸಿಕ್ಕಿರೆಡ್ಡಿ ಜೋಡಿ ಬಿಡಬ್ಲ್ಯೂಎಫ್ ವಿಶ್ವಚಾಂಪಿಯನ್ಶಿಪ್ನಲ್ಲಿ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಸ್ಪೇನ್ನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಬುಧವಾರ ನಡೆದ 2ನೇ ಸುತ್ತಿನ ಪಂದ್ಯದಲ್ಲಿ ಪ್ರಣಯ್ ಮಲೇಷ್ಯಾದ ಡರೇನ್ ಲೀವ್ ವಿರುದ್ಧ 21-7, 21-17ರ ನೇರ ಗೇಮ್ಗಳ ಅಂತರದಲ್ಲಿ ಕೇವಲ 42 ನಿಮಿಷಗಳಲ್ಲಿ ಪಂದ್ಯವನ್ನು ಗೆದ್ದು 16ರ ಹಂತಕ್ಕೆ ಪ್ರವೇಶ ಪಡೆದರು.
ಡಬಲ್ಸ್ನಲ್ಲಿ ಅಶ್ವಿನ್- ಸಿಕ್ಕಿರೆಡ್ಡಿ ಜೋಡಿಗೆ ಗೆಲುವು
ಮಹಿಳಾ ಡಬಲ್ಸ್ನಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ಸಿಕ್ಕಿರೆಡ್ಡಿ 14ನೇ ಶ್ರೇಯಾಂಕದ ಲಿಯು ಕ್ಸುವಾನ್ ಮತ್ತು ಕ್ಸಿಯಾ ಯು ಟಿಂಗ್ ಅವರನ್ನು 51 ನಿಮಿಷಗಳಲ್ಲಿ ಕದನದಲ್ಲಿ 21-11, 9-21, 21-13 ಗೇಮ್ಗಳಿಂದ ಸೋಲಿಸಿದರು.
ಆದರೆ, ಪುರುಷರ ಡಬಲ್ಸ್ನಲ್ಲಿ ಎಂಆರ್ ಅರ್ಜುನ್ ಮತ್ತು ಧ್ರುವ್ ಕಪಿಲಾ ರಷ್ಯಾದ ವ್ಲಾಡಿಮಿರ್ ಇವನೊವ್ ಮತ್ತು ಇವಾನ್ ಸೊಜೊನೊವ್ ವಿರುದ್ಧ 11-21, 16-21ರ ಅಂತರದಲ್ಲಿ ಸೋಲು ಕಂಡರು.
ಮಂಗಳವಾರ ಎರಡು ಬಾರಿ ಒಲಿಂಪಿಕ್ ವಿಜೇತೆ ಪಿವಿ ಸಿಂಧು ಹಾಗೂ ಪುರುಷರ ವಿಭಾಗದಲ್ಲಿ ಕಿಡಂಬಿ ಶ್ರೀಕಾಂತ್, ಲಕ್ಷ್ಯ ಸೇನ್ ಮತ್ತು ಡಬಲ್ಸ್ನಲ್ಲಿ ಚಿರಾಗ್ ಶೆಟ್ಟಿ- ಸಾತ್ವಿಕ್ ಸಾಯಿರಾಜ್ ಜೋಡಿ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿತ್ತು.
ಇದನ್ನೂ ಓದಿ:ಟೆಸ್ಟ್ ತಂಡದ ಆಯ್ಕೆ ವೇಳೆ ನನ್ನ ODI ನಾಯಕತ್ವ ನಿರ್ಧರಿಸಿದ್ರು, ಟಿ-20 ನಾಯಕತ್ವ ಬಿಡ್ಬೇಡ ಅಂತಾ ಯಾರೂ ಹೇಳಿಲ್ಲ: ಕೊಹ್ಲಿ ಸ್ಪಷ್ಟನೆ