ಹಾಂಗ್ಕಾಂಗ್: ಭಾರತದ ಭರವಸೆಯ ಆಟಗಾರ್ತಿ ಪಿವಿ ಸಿಂಧು ಹಾಂಕ್ ಕಾಂಗ್ ಓಪನ್ನಲ್ಲಿ ವಿಶ್ವ ಚಾಂಪಿಯನ್ ಸಿಂಧು ಥಾಯ್ಲೆಂಡ್ನ ಆಟಗಾರ್ತಿಗೆ ಶರಣಾಗುವ ಮೂಲಕ ಟೂರ್ನಿಯಿಂದ ಹೊರಬಿದ್ದಿದ್ದಾರೆ.
ವಿಶ್ವ ಚಾಂಪಿಯನ್ 6ನೇ ಶ್ರೇಯಾಂಕದ ಸಿಂಧು ಥಾಯ್ಲೆಂಡ್ನ 18 ಶ್ರೇಯಾಂಕದ ಬುಸನಾನ್ ಆಂಗ್‌ಬುಮ್ರುಂಗ್‌ಫಾನ್ ವಿರುದ್ಧ 2-1 ಸೆಟ್ಗಳಲ್ಲಿ ಸೋಲನುಭವಿಸಿದ್ದಾರೆ.
ಮೊದಲ ಗೇಮ್ನಲ್ಲಿ 21-18ರಲ್ಲಿ ಸೋಲನುಭವಿಸಿದ ಸಿಂಧು ಎರಡನೇ ಗೇಮ್ನಲ್ಲಿ ತಿರುಗಿ ಬಿದ್ದು 21-11ರಲ್ಲಿ ಗೆದ್ದುಕೊಂಡರು. ಆದರೆ ರೋಚಕವಾಗಿ ಕೂಡಿದ್ದ ಮೂರನೇ ಗೇಮ್ನಲ್ಲಿ ಸಿಂಧು ವಿರುದ್ಧ 21-16ರಲ್ಲಿ ಸೋಲುಕಂಡರು.