ಹೈದರಾಬಾದ್: ಭಾರತದ ಬ್ಯಾಡ್ಮಿಂಟನ್ ತಾರೆ, ರಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿ.ವಿ. ಸಿಂಧು ಅವರು ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ವಿಶ್ವ ಮಟ್ಟದಲ್ಲಿ ಭಾರತದ ಬ್ಯಾಡ್ಮಿಂಟನ್ ಶಕ್ತಿಯಾಗಿರುವ ಆಂಧ್ರ ಪ್ರದೇಶ ಮೂಲದ ಆಟಗಾರ್ತಿ ಸಿಂಧು 26ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.
ಕ್ರೀಡಾ ಜಗತ್ತಿನ ಶ್ರೇಷ್ಠ ಸಾಧಕಿ ಪುಸರ್ಲಾ ವೆಂಕಟ ಸಿಂಧು ಆಂಧ್ರ ಪ್ರದೇಶದ ಪಿ.ವಿ. ರಮಣ್ ಹಾಗೂ ಪಿ.ವಿಜಯ ಅವರ ಪುತ್ರಿ. ಈ ಇಬ್ಬರು ಮಾಜಿ ವಾಲಿಬಾಲ್ ಆಟಗಾರರ ಕನಸಿನ ಕೂಸು ಸಿಂಧು. ವಾಲಿಬಾಲ್ ಆಟಗಾರರ ಪುತ್ರಿಯಾದರೂ ಕೂಡ ಸಿಂಧು ಮಾತ್ರ ಬ್ಯಾಡ್ಮಿಂಟನ್ ಜಗತ್ತಿನಲ್ಲಿ ಮಿಂಚುತ್ತಿದ್ದಾರೆ. ಸಿಂಧು ಸಾಧನೆಗೆ ಬ್ಯಾಡ್ಮಿಂಟನ್ ದಿಗ್ಗಜ ಗೋಪಿಚಂದ್ ಮಾರ್ಗದರ್ಶನ ಪ್ರಮುಖ ಪಾತ್ರ ವಹಿಸಿದೆ.
2016ರ ರಿಯೊ ಡಿ ಜನೈರೊ ಒಲಿಂಪಿಕ್ಸ್ ಮಹಿಳೆಯರ ಸಿಂಗಲ್ಸ್ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ಸಿಂಧು, 2017ರ ಏಪ್ರಿಲ್ನಲ್ಲಿ 2ನೇ ಬಿಡಬ್ಲ್ಯೂಎಫ್ ವಿಶ್ವ ಬ್ಯಾಡ್ಮಿಂಟನ್ ಶ್ರೇಯಾಂಕದಲ್ಲಿ 2ನೇ ಸ್ಥಾನಕ್ಕೇರಿದರೆ, ಸದ್ಯ 7ನೇ ಸ್ಥಾನದಲ್ಲಿದ್ದಾರೆ. ಸಿಂಧು 2019ರಲ್ಲಿ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ಬರೆದಿದ್ದರು. ಈ ಸಾಧನೆಗೆ ಪಾತ್ರರಾದ ಭಾರತದ ಮೊದಲ ಆಟಗಾರ್ತಿಯಾಗಿದ್ದಾರೆ.
ಇದನ್ನೂ ಓದಿ:ಏರಿದ Petrol-ಸ್ಥಿರತೆ ಕಾಪಾಡಿಕೊಂಡ Diesel: ಬೆಂಗಳೂರಲ್ಲಿ ಇಂಧನ ದರ ಎಷ್ಟು ಗೊತ್ತಾ?