ಪ್ಯಾರೀಸ್: ಭಾರತದ ಘಟಾನುಘಟಿಗಳೇ ಫ್ರೆಂಚ್ ಓಪನ್ನಲ್ಲಿ ಸೋಲುಕಂಡು ನಿರಾಶೆ ಮೂಡಿಸಿದರೂ ಯುವ ಜೋಡಿ ಸಾಥ್ವಿಕ್ ಸಾಯಿರಾಜ್- ಚಿರಾಗ್ ಶೆಟ್ಟಿ ಜೋಡಿ ಫೈನಲ್ ತಲುಪುವ ಮೂಲಕ ಇತಿಹಾಸ ನಿರ್ಮಿಸಿದೆ.
ಪ್ಯಾರಿಸ್ನಲ್ಲಿ ನಡೆಯುತ್ತಿರುವ ಪ್ರೆಂಚ್ ಓಪನ್ನಲ್ಲಿ ಭಾರತೀಯ ಜೋಡಿ ಹಿರೊಯುಕಿ ಎಂಡೋ ಮತ್ತು ಯುಟಾ ವಾಟಾನಬೆ ಅವರನ್ನು 21-11, 25-23 ರಲ್ಲಿ ಮಣಿಸಿ ಫೈನಲ್ ಪ್ರವೇಶಿಸಿದೆ. ಈ ಮೂಲಕ ಸೈನಾ ನೆಹ್ವಾಲ್ ಹಾಗೂ ಕಿಡಂಬಿ ಶ್ರೀಕಾಂತ್ ನಂತರ ಫ್ರೆಂಚ್ ಓಪನ್ ಫೈನಲ್ ಪ್ರವೇಶಿಸಿದ ದಾಖಲೆಗೆ ಪಾತ್ರರಾದರು. ಅಲ್ಲದೆ ಸಾಥ್ವಿಕ್ - ಚಿರಾಗ್ ಡಬಲ್ಸ್ ವಿಭಾಗದಲ್ಲಿ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ ಭಾರತದ ಜೋಡಿ ಎನಿಸಿಕೊಂಡರು.