ಕರ್ನಾಟಕ

karnataka

ETV Bharat / sports

36 ವರ್ಷದ ಬಳಿದ ಬಂದ 'ಸುವರ್ಣಾ'ವಕಾಶ ಜಸ್ಟ್ ಮಿಸ್...! - ಫ್ರಂಚ್ ಓಪನ್​​ ಫೈನಲ್

ವಿಶ್ವದ ನಂ.1 ಬ್ಯಾಡ್ಮಿಂಟನ್ ಜೋಡಿ ಇಂಡೋನೇಷ್ಯಾದ ಮಾರ್ಕಸ್ ಫರ್ನಾಲ್ಡಿ- ಕೆವಿನ್ ಸುಕಮಲ್ಜೊ ಉಪಾಂತ್ಯ ಪಂದ್ಯದಲ್ಲಿ ಭಾರತೀಯ ಜೋಡಿಯನ್ನು ಮಣಿಸಿದೆ.

ಫ್ರೆಂಚ್ ಓಪನ್​​ ಫೈನಲ್

By

Published : Oct 28, 2019, 9:41 AM IST

ಪ್ಯಾರಿಸ್: ಭಾರತದ ಅಗ್ರ ಶ್ರೇಯಾಂಕದ ಬ್ಯಾಡ್ಮಿಂಟನ್​ ಜೋಡಿ ಸಾತ್ವಿಕ್​ಸಾಯಿರಾಜ್ ರಂಕಿರೆಡ್ಡಿ-ಚಿರಾಗ್ ಶೆಟ್ಟಿ ಫ್ರೆಂಚ್ ಓಪನ್​​ ಫೈನಲ್ ಪಂದ್ಯದಲ್ಲಿ ಸೋಲನುಭವಿಸಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

ವಿಶ್ವದ ನಂ.1 ಬ್ಯಾಡ್ಮಿಂಟನ್ ಜೋಡಿ ಇಂಡೋನೇಷ್ಯಾದ ಮಾರ್ಕಸ್ ಫರ್ನಾಲ್ಡಿ- ಕೆವಿನ್ ಸುಕಮಲ್ಜೊ ಉಪಾಂತ್ಯ ಪಂದ್ಯದಲ್ಲಿ ಭಾರತೀಯ ಜೋಡಿಯನ್ನು ಮಣಿಸಿ ಚಿನ್ನದ ಪದಕ ತನ್ನದಾಗಿಸಿಕೊಂಡಿದೆ.

ಫೈನಲ್ ಪಂದ್ಯ ಗೆದ್ದ ಮಾರ್ಕಸ್ ಫರ್ನಾಲ್ಡಿ- ಕೆವಿನ್ ಸುಕಮಲ್ಜೊ

35 ನಿಮಿಷಗಳ ಕಾಲ ನಡೆದ ಫೈನಲ್ ಪಂದ್ಯದಲ್ಲಿ ಇಂಡೋನೇಷ್ಯಾದ ಜೋಡಿ 21-18, 21-16 ಸೆಟ್​​ಗಳಿಂದ ಭಾರತೀಯ ಜೋಡಿಯನ್ನು ಪರಾಭವಗೊಳಿಸಿದೆ. ವಿಶೇಷವೆಂದರೆ ಮಾರ್ಕಸ್ ಫರ್ನಾಲ್ಡಿ- ಕೆವಿನ್ ಸುಕಮಲ್ಜೊ ಜೋಡಿ ವಿರುದ್ಧ ಈ ಹಿಂದಿನ ಆರೂ ಪಂದ್ಯವನ್ನೂ ಸಾತ್ವಿಕ್​ಸಾಯಿರಾಜ್ ರಂಕಿರೆಡ್ಡಿ-ಚಿರಾಗ್ ಶೆಟ್ಟಿ ಸೋತಿದ್ದಾರೆ.

1983ರಲ್ಲಿ ಪಾರ್ಥೋ ಗಂಗೂಲಿ-ವಿಕ್ರಮ್ ಸಿಂಗ್​ ಜೋಡಿ ಫ್ರೆಂಚ್ ಓಪನ್​ನಲ್ಲಿ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿತ್ತು. 36 ವರ್ಷದ ಬಳಿಕ ಒಲಿದು ಬಂದಿದ್ದ ಸುವರ್ಣಾವಕಾಶ ಸ್ವಲ್ಪದರಲ್ಲೇ ತಪ್ಪಿದೆ.

ಸಾತ್ವಿಕ್​ಸಾಯಿರಾಜ್ ರಂಕಿರೆಡ್ಡಿ-ಚಿರಾಗ್ ಶೆಟ್ಟಿ ಈ ವರ್ಷದಲ್ಲಿ ಥಾಯ್ಲೆಂಡ್ ಓಪನ್​ ಟೂರ್ನಿಯಲ್ಲಿ ಚಿನ್ನದ ಪದಕ ಜಯಿಸಿದ್ದರು.

ABOUT THE AUTHOR

...view details