ಕರ್ನಾಟಕ

karnataka

ETV Bharat / sports

ತನ್ನ ಪುತ್ರಿ ಲಂಡನ್​ಗೆ ತೆರಳಿದ್ದು ಕೌಟುಂಬಿಕ ಸಮಸ್ಯೆಯಿಂದಲ್ಲ: ಪಿ.ವಿ.ಸಿಂಧು ತಂದೆಯ ಸ್ಪಷ್ಟನೆ! - ಪಿ.ವಿ.ಸಿಂಧು ಟೂರ್ನಮೆಂಟ್​​

ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಲಂಡನ್​​​ಗೆ ತೆರಳಿದ್ದರ ಬಗ್ಗೆ ಕೆಲವೊಂದು ತಪ್ಪುಮಾಹಿತಿ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ಪಿ.ವಿ.ಸಿಂಧು ತಂದೆ ಪಿ.ವಿ ರಮಣ ಈಟಿವಿ ಭಾರತ್​ಗೆ ಸ್ಪಷ್ಟನೆ ನೀಡಿದ್ದಾರೆ.

p.v.sindhu
ಪಿ.ವಿ.ಸಿಂಧು

By

Published : Oct 20, 2020, 3:33 PM IST

ಹೈದರಾಬಾದ್:ಭಾರತೀಯ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ತನ್ನ ತರಬೇತಿಯ ಕಡೆ ಗಮನಹರಿಸುವ ಸಲುವಾಗಿ ಗ್ಯಾಟೋರೇಡ್ ಕ್ರೀಡಾ ವಿಜ್ಞಾನ ಸಂಸ್ಥೆಗೆ ತೆರಳಿದ್ದಾರೆ ಎಂದು ಪಿ.ವಿ.ಸಿಂಧು ತಂದೆ ಪಿ.ವಿ.ರಮಣ ಸ್ಪಷ್ಟನೆ ನೀಡಿದ್ದಾರೆ.

ಕೆಲವು ದಿನಗಳ ಹಿಂದೆ ಕೌಟುಂಬಿಕ ಸಮಸ್ಯೆಯ ಕಾರಣದಿಂದ ಪಿ.ವಿ.ಸಿಂಧು ಲಂಡನ್​ಗೆ ತೆರಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಇದನ್ನು ತಳ್ಳಿಹಾಕಿದ ಪಿ.ವಿ.ರಮಣ ಸಿಂಧು ಲಂಡನ್​ಗೆ ತೆರಳಿರುವ ಉದ್ದೇಶವನ್ನು ಬಹಿರಂಗಪಡಿಸಿದರು.

ಈಟಿವಿ ಭಾರತ್​ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು ''ಇದೆಲ್ಲ ಸುಳ್ಳು. ಲಂಡನ್‌ನಲ್ಲಿ ಸಿಂಧು ಲಂಡನ್‌ನ ಗ್ಯಾಟೋರೇಡ್ ಸ್ಪೋರ್ಟ್ಸ್ ಸೈನ್ಸ್ ಇನ್‌ಸ್ಟಿಟ್ಯೂಟ್‌ಗೆ ಹೋಗಿದ್ದಾರೆ. ಇಂತಹ ಹೇಳಿಕೆ ನೀಡಿದ್ದು ಯಾರು.? ಅವರ ಹೇಳಿಕೆ ಮೂಲವೇನು..? ವಿಶ್ವಾಸಾರ್ಹತೆಯೇನು.?'' ಎಂದು ಪ್ರಶ್ನಿಸಿದ್ದಾರೆ.

ಇನ್ನೂ ಮುಂದುವರಿದಂತೆ ''ನಾನು ಕೆಲವು ದಿನಗಳ ಹಿಂದೆ ಲಂಡನ್​ಗೆ ಬಂದಿದ್ದೇನೆ. ಜಿಎಸ್​ಎಸ್​ಐನಲ್ಲಿ ತರಬೇತಿಗಾಗಿ ನಾನು ಇಲ್ಲಿಗೆ ಬಂದಿದ್ದು, ನನ್ನ ಪೋಷಕರ ಅನುಮತಿಯಂತೆ ಇಲ್ಲಿಗೆ ಬಂದಿದ್ದು, ನನಗೂ ನನ್ನ ಕುಟುಂಬದ ನಡುವೆ ಯಾವುದೇ ಸಮಸ್ಯೆ ಇಲ್ಲ'' ಎಂದು ಪಿ.ವಿ.ಸಿಂಧು ಮಾಡಿದ್ದ ಟ್ವೀಟ್ ಅನ್ನು ಕೂಡಾ ಅವರು ಇದೇ ವೇಳೆ, ಉಲ್ಲೇಖಿಸಿದ್ದಾರೆ.

ನ್ಯಾಷನಲ್ ಕ್ಯಾಂಪ್​ನಲ್ಲಿ ಸರಿಯಾದ ಸೌಲಭ್ಯಗಳು ನೀಡುತ್ತಿಲ್ಲ ಎಂಬ ಹೇಳಿಕೆ ಈ ಮೊದಲು ಪಿ.ವಿ.ಸಿಂಧು ಪ್ರತಿಕ್ರಿಯಿಸಿದ್ದು, ನನಗೆ ತರಬೇತುದಾರ ಗೋಪಿಚಂದ್ ಹಾಗೂ ಅಕಾಡೆಮಿಯ ತರಬೇತಿ ಸೌಲಭ್ಯಗಳ ಬಗ್ಗೆ ಆಕ್ಷೇಪಣೆಯಿಲ್ಲ ಎಂದೂ ಸ್ಪಷ್ಟನೆ ನೀಡಿದ್ದಾರೆ.

ಪಿ.ವಿ.ಸಿಂಧು ಜನವರಿ 12ರಿಂದ 17ರವರೆಗೆ ನಡೆಯಲಿರುವ ಏಷ್ಯಾ ಓಪನ್​ನಲ್ಲಿ 1 ಹಾಗೂ ಜನವರಿ 19ರಿಂದ 24ರವರೆಗೆ ನಡೆಯಲಿರುವ ಏಷ್ಯಾ ಓಪನ್​ನಲ್ಲಿ 2ರಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ABOUT THE AUTHOR

...view details