ಕರ್ನಾಟಕ

karnataka

ETV Bharat / sports

ಸಿಂಧುಗೆ ಸೋಲು, ಸಮೀರ್​ ನಿವೃತ್ತಿ: ಡೆನ್ಮಾರ್ಕ್​ ಓಪನ್​ನಲ್ಲಿ ಭಾರತದ ಸವಾಲು ಅಂತ್ಯ - ಪಿವಿ ಸಿಂಧುಗೆ ಸೋಲು

ಸಿಂಧು ಅನ್ ಸೇ ಯಂಗ್ ವಿರುದ್ಧ ಎರಡು ವರ್ಷಗಳ ಹಿಂದೆ ಮುಖಾಮುಖಿಯಾಗಿದ್ದರು, ಆ ಪಂದ್ಯದಲ್ಲೂ ಅವರು ನೇರ ಸೆಟ್​ಗಳಿಂದಲೇ ಸೋಲು ಕಂಡಿದ್ದರು.

Denmark Open
Denmark Open

By

Published : Oct 23, 2021, 10:52 AM IST

ಒಡೆನ್ಸ್: ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಪಿ ವಿ ಸಿಂಧು ಡೆನ್ಮಾರ್ಕ್ ಓಪನ್​ ಸೂಪರ್​ 1000 ಟೂರ್ನಿಯ ಕ್ವಾರ್ಟರ್​ ಫೈನಲ್​ನಲ್ಲಿ ದಕ್ಷಿಣ ಕೊರಿಯಾದ ಅನ್​ ಸೆ ಯಂಗ್ ವಿರುದ್ಧ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಒಲಿಂಪಿಕ್ಸ್​ನಲ್ಲಿ ಪದಕ ಗೆದ್ದ ಬಳಿಕ ಸಿಂಧು ಇದೇ ಮೊದಲ ಟೂರ್ನಮೆಂಟ್​ನಲ್ಲಿ ಭಾಗವಹಿಸಿದ್ದರು. ಸಿಂಗಲ್ಸ್​ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದ ಅವರು ಪ್ರಶಸ್ತಿ ಜಯಸುತ್ತಾರೆಂದು ನಿರೀಕ್ಷಿಸಲಾಗಿತ್ತು. ಆದರೆ 8ನೇ ಶ್ರೇಯಾಂಕದ ಸೆ ಯಂಗ್ ವಿರುದ್ಧ 1-21,12-21ರಿಂದ ಕೇವಲ 36 ನಿಮಿಷಗಳಲ್ಲಿ ಸೋಲು ಕಂಡು ನಿರಾಶೆಯನುಭವಿಸಿದರು.

ಸಿಂಧು ಅನ್ ಸೇ ಯಂಗ್ ವಿರುದ್ಧ ಎರಡು ವರ್ಷಗಳ ಹಿಂದೆ ಮುಖಾಮುಖಿಯಾಗಿದ್ದರು. ಆ ಪಂದ್ಯದಲ್ಲೂ ಅವರು ನೇರ ಸೆಟ್​ಗಳಿಂದಲೇ ಸೋಲು ಕಂಡಿದ್ದರು.

ಪುರುಷರ 2ನೇ ಸುತ್ತಿನ ಪಂದ್ಯದಲ್ಲಿ ಡೆನ್ಮಾರ್ಕ್​ನ ಆ್ಯಂಡರ್ಸ್ ಆ್ಯಂಟನ್ಸನ್​ ವಿರುದ್ಧ ಅಚ್ಚರಿಯ ಗೆಲುವು ಸಾಧಿಸಿದ್ದ ಸಮೀರ್ ವರ್ಮಾ ಕ್ವಾರ್ಟರ್​ ಫೈನಲ್ಸ್​ ಪಂದ್ಯದಲ್ಲಿ ಗಾಯದ ಕಾರಣ ಪಂದ್ಯದಿಂದ ಹಿಂದೆ ಸರಿದರು. ಅವರು ಇಂಡೋನೇಷ್ಯಾದ ಟಾಮಿ ಸುಗಿರಿಟೋ ವಿರುದ್ಧ ಮೊದಲ ಗೇಮ್​ನಲ್ಲಿ 17-21ರಿಂದ ಸೋಲು ಕಂಡಿದ್ದರು. ಆದರೆ ಎರಡನೇ ಇನ್ನಿಂಗ್ಸ್​ ವೇಳೆ ಆಟದಿಂದ ಹೊರ ನಡೆದರು.

ಪಿ ವಿ ಸಿಂಧು ಮತ್ತು ಸಮೀರ್​ ವರ್ಮಾ ಸೋಲುಗಳೊಂದಿಗೆ ಭಾರತದ ಸವಾಲು ಡೆನ್ಮಾರ್ಕ್​ ಓಪನ್​ನಲ್ಲಿ ಅಂತ್ಯವಾಯಿತು. ಭಾರತದಿಂದ ಒಟ್ಟು 9 ಸಿಂಗಲ್ಸ್​ ಆಟಗಾರರು, ಪುರುಷರ ಡಬಲ್ಸ್​ನಲ್ಲಿ 3, ಮಹಿಳೆಯರ ಡಬಲ್ಸ್​ನಲ್ಲಿ 2 ಜೋಡಿ ಮತ್ತು ಮಿಕ್ಸಡ್ ಡಬಲ್ಸ್​ನಲ್ಲಿ2 ಜೋಡಿ ಭಾಗವಹಿಸಿದ್ದವು. ಆದರೆ ಯಾರೊಬ್ಬರು ಫೈನಲ್​ ಪ್ರವೇಶಿಸಲು ವಿಫಲರಾಗಿದ್ದಾರೆ.

ಇದನ್ನು ಓದಿ: ಕೊಹ್ಲಿ, ರೋಹಿತ್ ಅಲ್ಲ, ಈ ಆಟಗಾರ ಭಾರತದ ಮ್ಯಾಚ್​ ವಿನ್ನರ್ : ವಾಸಿಂ ಅಕ್ರಮ್

ABOUT THE AUTHOR

...view details