ಒಡೆನ್ಸ್: ಹಾಲಿ ವಿಶ್ವಚಾಂಪಿಯನ್ ಪಿವಿ ಸಿಂಧು ಡೆನ್ಮಾರ್ಕ್ ಓಪನ್ ಸೂಪರ್ 1000 ಟೂರ್ನಮೆಂಟ್ನಲ್ಲಿ ಕ್ವಾರ್ಟರ್ ಫೈನಲ್ಸ್ಗೆ ಲಗ್ಗೆಯಿಟ್ಟಿದ್ದಾರೆ. 16 ಘಟ್ಟದಲ್ಲಿ ಥಾಯ್ಲೆಂಡ್ ಸ್ಟಾರ್ ಬುಸನನ್ ಒಗ್ಬಮ್ರುಂಗ್ಫನ್ ವಿರುದ್ಧ ಜಯ ಸಾಧಿಸಿದ್ದಾರೆ.
ಬುಧವಾರ ನಡೆದ ಫ್ರೀ ಕ್ವಾರ್ಟರ್ ಫೈನಲ್ಸ್ನಲ್ಲಿ ಸಿಂಧು 21-16, 12-21, 21-15 ರ ಅಂತರದಿಂದ ಗೆಲುವು ಸಾಧಿಸಿ 8ರ ಘಟ್ಟಕ್ಕೆ ಲಗ್ಗೆಯಿಟ್ಟರು. ಭಾರತ ಸ್ಟಾರ್ ಶಟ್ಲರ್ ಮುಂದಿನ ಸುತ್ತಿನಲ್ಲಿ ದಕ್ಷಿಣ ಕೊರಿಯಾದ 19 ವರ್ಷದ ಅನ್ ಸೆ ಯಂಗ್ ವಿರುದ್ಧ ಸೆಣಸಾಡಲಿದ್ದಾರೆ.
ಪುರುಷರ ವಿಭಾಗದಲ್ಲಿ ಕಿಡಂಬಿ ಶ್ರೀಕಾಂತ್ 2ನೇ ಸುತ್ತಿನ ಪಂದ್ಯದಲ್ಲಿ ನಂಬರ್ 1 ಶಟ್ಲರ್ ಜಪಾನ್ನ ಕೆಂಟೊ ಮೊಮೊಟ ವಿರುದ್ಧ 23-21, 21-9 ಗೇಮ್ಗಳ ಅಂತರದಲ್ಲಿ ಸೊಲು ಕಂಡು ನಿರಾಸೆ ಅನುಭವಿಸಿದರು.