ಆಡೆನ್ಸ್(ಡೆನ್ಮಾರ್ಕ್): ವಿಶ್ವ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ಗೆದ್ದಿದ್ದ ಭಾರತದ ಬ್ಯಾಡ್ಮಿಂಟನ್ ತಾರೆ ಪಿ ವಿ ಸಿಂಧು ಸತತ ಮೂರನೇ ಟೂರ್ನಿಯಲ್ಲಿ ಗುಂಪು ಹಂತದಲ್ಲೇ ನಿರ್ಗಮಿಸಿ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದ್ದಾರೆ.
ಗುರುವಾರ ನಡೆದ ಪಂದ್ಯದಲ್ಲಿ ದಕ್ಷಿಣ ಕೊರಿಯಾದ 17 ವರ್ಷದ ಅನ್ ಸೆ ಯಂಗ್ ವಿರುದ್ಧ 14-21, 17-21 ರಲ್ಲಿ ಸೋಲುಕಾಣುವ ಮೂಲಕ ಟೂರ್ನಿಯಿಂದ ಹೊರಬಿದ್ದಿದ್ದಾರೆ. ವಿಶ್ವದ 5ನೇ ಶ್ರೇಯಾಂಕದ ಸಿಂಧು ವಿರುದ್ಧ 28 ನೇ ಶ್ರೇಯಾಂಕದ ಕೊರಿಯನ್ ಯುವ ಆಟಗಾರ್ತಿ ಏಕಪಕ್ಷೀಯ ಗೆಲುವು ದಾಖಲಿಸಿದ್ದಾರೆ.