ಕರ್ನಾಟಕ

karnataka

ETV Bharat / sports

ಡೆನ್ಮಾರ್ಕ್​ ಓಪನ್​: ಮೊದಲ ಸುತ್ತಿನಲ್ಲಿ ಶುಭಾರಂಭ ಮಾಡಿದ ವಿಶ್ವಚಾಂಪಿಯನ್​ ಸಿಂಧು - ವಿಶ್ವಚಾಂಪಿಯನ್​ ಸಿಂಧು

ಆಗಸ್ಟ್​ನಲ್ಲಿ ನಡೆದ ವಿಶ್ವ ಬ್ಯಾಡ್ಮಿಂಟನ್​ ಚಾಂಪಿಯನ್​ಶಿಪ್​ನಲ್ಲಿ ಚಿನ್ನ ಗೆದ್ದಿದ್ದ ದೇಶದ ಮನೆಮಾತಾಗಿದ್ದ ಪಿವಿ ಸಿಂಧು ಡೆನ್ಮಾರ್ಕ್​ ಓಪನ್​ನಲ್ಲಿ ಎರಡನೇ ಸುತ್ತು ಪ್ರವೇಶಿಸಿದ್ದಾರೆ.

Denmark Open

By

Published : Oct 15, 2019, 7:48 PM IST

Updated : Oct 16, 2019, 7:01 AM IST

ಆಡೆನ್ಸ್​: ಭಾರತದ ನಂಬರ್​ ಒನ್​ ಶಟ್ಲರ್​ ಪಿ.ವಿ ಸಿಂಧು ಡೆನ್ಮಾರ್ಕ್ ಓಪನ್​ ಬ್ಯಾಡ್ಮಿಂಟನ್​ ಟೂರ್ನಿಯ ಮೊದಲ ಸುತ್ತಿನ ಪಂದ್ಯದಲ್ಲಿ ಗೆಲುವು ಸಾಧಿಸಿದ್ದಾರೆ.

ಆಗಸ್ಟ್​ನಲ್ಲಿ ನಡೆದ ವಿಶ್ವ ಬ್ಯಾಡ್ಮಿಂಟನ್​ ಚಾಂಪಿಯನ್​ಶಿಪ್​ನಲ್ಲಿ ಚಿನ್ನ ಗೆದ್ದಿದ್ದ ದೇಶದ ಮನೆಮಾತಾಗಿದ್ದ ಪಿವಿ ಸಿಂಧು ನಂತರ ನಡೆದ ಚೀನಾ ಓಪನ್​, ಕೊರಿಯಾ ಓಪನ್​ಗಳಲ್ಲಿ ಆರಂಭಿದ ಸುತ್ತುಗಳಲ್ಲೇ ಮುಗ್ಗರಿಸಿದ್ದರು.

ಆದರೆ, ಇಂದು ನಡೆದ ಡೆನ್ಮಾರ್ಕ್​ ಓಪನ್​ ಮೊದಲ ಸುತ್ತಿನ ಪಂದ್ಯದಲ್ಲಿ ಸಿಂಧು ಜಾರ್ಜಿಯಾದ ಮರಿಸ್ಕಾ ತುಂಜುಂಗ್‌ ಎದುರು 22-20, 21-18ರಲ್ಲಿ ಜಯಸಾಧಿಸಿ ಎರಡನೇ ಸುತ್ತು ಪ್ರವೇಶಿಸಿದರು. ಅಲ್ಲದೆ ಅವರ ವಿರುದ್ಧ ಆಡಿರುವ ಆರು ಪಂದ್ಯಗಳಲ್ಲೂ ಸಿಂಧು ಜಯ ಕಾಣುವ ಮೂಲಕ 6-0 ಲೀಡ್​ ಪಡೆದುಕೊಂಡಿದ್ದಾರೆ.

ಇನ್ನು ಪುರುಷರ ವಿಭಾಗದ ಡಬಲ್ಸ್​ನಲ್ಲಿ ಸಾಥ್ವಿಕ್​ ಸಾಯಿರಾಜ್​-ಸಿರಾಗ್​ ಶೆಟ್ಟಿ ಜೋಡಿ ಸೌತ್​ ಕೊರಿಯಾದ ಕಿಮ್​ ಜಿ ಜಂಗ್​-ಲೀ ಯಂಗ್​ ದೆ ಜೋಡಿಯನ್ನು 24-11, 21-11 ನೇರ ಸೆಟ್​ನಲ್ಲಿ ಮಣಿಸಿ 2ನೇ ಸುತ್ತು ಪ್ರವೇಶಿಸಿದ್ದಾರೆ.

Last Updated : Oct 16, 2019, 7:01 AM IST

ABOUT THE AUTHOR

...view details