ಕರ್ನಾಟಕ

karnataka

ETV Bharat / sports

ಡೆನ್ಮಾರ್ಕ್​ ಓಪನ್​ನ ಎರಡನೇ ಸುತ್ತಿನಲ್ಲಿ ಸೋಲು: ಟೂರ್ನಿಯಿಂದ ಹೊರಬಿದ್ದ ಲಕ್ಷ್ಯ ಸೇನ್ - ಶೆಟ್ಲರ್​ ಲಕ್ಷ್ಯ ಸೇನ್

ಡೆನ್ಮಾರ್ಕ್ ಓಪನ್​ನ ಎರಡನೇ ಸುತ್ತಿನಲ್ಲಿ ಸೋಲು ಕಂಡ ಭಾರತೀಯ ಯುವ ಶೆಟ್ಲರ್​ ಲಕ್ಷ್ಯ ಸೇನ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.

Lakshya Sen makes second-round exit from the tournament
ಭಾರತೀಯ ಯುವ ಶೆಟ್ಲರ್​ ಲಕ್ಷ್ಯ ಸೇನ್

By

Published : Oct 16, 2020, 10:52 AM IST

ಒಡೆನ್ಸ್: ಭಾರತೀಯ ಯುವ ಶೆಟ್ಲರ್​ ಲಕ್ಷ್ಯ ಸೇನ್ ಡೆನ್ಮಾರ್ಕ್ ಓಪನ್​ನ ಎರಡನೇ ಸುತ್ತಿನ ಪಂದ್ಯದಲ್ಲಿ ಸೋಲು ಅನುಭವಿಸಿ ಟೂರ್ನಿಯಿಂದ ಹೊರ ಬಿದ್ದಿದ್ದಾರೆ.

55 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಡೆನ್ಮಾರ್ಕ್​ ಬ್ಯಾಡ್ಮಿಂಟನ್ ಆಟಗಾರ ಹ್ಯಾನ್ಸ್-ಕ್ರಿಸ್ಟಿಯನ್ ಸೋಲ್ಬರ್ಗ್ ವಿಟ್ಟಿಂಗ್ಹಸ್ 15-21, 21-7, 21-17ರಿಂದ ಲಕ್ಷ್ಯ ಸೇನ್​ ಅವರನ್ನು ಸೋಲಿಸಿದರು.

ಹಿಂದಿನ ದಿನ, ಭಾರತೀಯ ಶಟ್ಲರ್ ಕಿಡಾಂಬಿ ಶ್ರೀಕಾಂತ್ ಡೆನ್ಮಾರ್ಕ್ ಓಪನ್‌ನಲ್ಲಿ ಕ್ವಾರ್ಟರ್ ಫೈನಲ್​ಗೆ ಪ್ರವೇಶ ಪಡೆದಿದ್ದಾರೆ.

ಕಣದಲ್ಲಿರುವ ಏಕೈಕ ಭಾರತೀಯರಾಗಿರುವ ಶ್ರೀಕಾಂತ್, 33 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಕೆನಡಾದ ಜೇಸನ್ ಆಂಥೋನಿ ಹೋ-ಶು ಅವರನ್ನು 21-15, 21-14 ಸೆಟ್‌ಗಳಿಂದ ಸೋಲಿಸಿದರು.

ABOUT THE AUTHOR

...view details