ಓಡೆನ್ಸ್( ಡೆನ್ಮಾರ್ಕ್):ಭಾರತದ ಬ್ಯಾಡ್ಮಿಂಟನ್ ಆಟಗಾರ ಕಿಡಂಬಿ ಶ್ರೀಕಾಂತ್ ಇಂಗ್ಲೆಂಡಿನ ಟೋಬಿ ಪೆಂಟಿ ಅವರನ್ನು ಸೋಲಿಸುವ ಮೂಲಕ ಡೆನ್ಮಾರ್ಕ್ನ ಓಪನ್ ಟೂರ್ನಿಯಲ್ಲಿ ಮುಂದಿನ ಹಂತಕ್ಕೆ ತಲುಪಿದ್ದಾರೆ.
ಕೇವಲ 37 ನಿಮಿಷಗಳಲ್ಲಿ ನಡೆದ ಆಟದಲ್ಲಿ 21-12, 21-18 ಸೆಟ್ಗಳ ಮೂಲಕ ಟೋಬಿ ಪೆಂಟಿ ಅವರನ್ನು ಮಣಿಸಿದ್ದಾರೆ. ಮೂರು ವರ್ಷದ ಹಿಂದೆ ಡೆನ್ಮಾರ್ಕ್ ಓಪನ್ನ ಪ್ರಶಸ್ತಿ ವಿಜೇತರಾಗಿದ್ದ ಅವರು ಮುಂದಿನ ಪಂದ್ಯದಲ್ಲಿ ಭಾರತದ ಶುಭಂಕರ್ ಡೇ ಅಥವಾ ಕೆನಡಾದ ಜಾಸನ್ ಆ್ಯಂಟೋನಿಯನ್ನು ಎದುರಿಸಲಿದ್ದಾರೆ.