ಮುಂಬೈ: ಬಾಲಿವುಡ್ ಸ್ಟಾರ್ ದೀಪಿಕಾ ಪಡುಕೋಣೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಶ್ವಚಾಂಪಿಯನ್ ಪಿ.ವಿ.ಸಿಂಧು ಅವರ ಜೊತೆ ಬ್ಯಾಡ್ಮಿಂಟನ್ ಆಡಿದ್ದಾರೆ. ನೆಟ್ಟಿಗರಲ್ಲಿ ಸಿಂಧು ಬಯೋಪಿಕ್ ಬರಬಹುದೇ? ಎಂಬ ಚರ್ಚೆ ನಡೆಸುತ್ತಿದ್ದಾರೆ.
ಪಿ.ವಿ.ಸಿಂಧು ವಿಶ್ವಚಾಂಪಿಯನ್ಶಿಪ್ ಗೆದ್ದಿರುವ ಜೊತೆಗೆ ಸತತ ಎರಡು ಒಲಿಂಪಿಕ್ಸ್ನಲ್ಲಿ ಪದಕ ಗೆದ್ದು ದೇಶಕ್ಕೆ ಹೆಮ್ಮೆ ತಂದಿದ್ದಾರೆ. ರಿಯೋದಲ್ಲಿ ಬೆಳ್ಳಿ ಗೆದ್ದರೆ, ಕಳೆದ ತಿಂಗಳು ಟೋಕಿಯೋದಲ್ಲಿ ನಡೆದ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಸಾಧನೆ ತೋರಿದ್ದರು.
ಪಿ.ವಿ.ಸಿಂಧೂ ದೀಪಿಕಾ ಪಡುಕೋಣೆ ಜೊತೆಗೆ ಕೆಲವು ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಲ್ಲಿ ಕೂತೂಹಲ ಮೂಡಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕ್ರೀಡಾಪಟುಗಳ ಬಯೋಪಿಕ್ಗಳು ಬಾಲಿವುಡ್ನಲ್ಲಿ ಯಶಸ್ವಿಯಾಗುತ್ತಿದ್ದು ದೇಶದ ಬ್ಯಾಡ್ಮಿಂಟನ್ ಸ್ಟಾರ್ ಸಿಂಧು ಬಯೋಪಿಕ್ಗೆ ದೀಪಿಕಾ ಸದ್ದಿಲ್ಲದೇ ಸಿದ್ಧತೆ ನಡೆಯುತ್ತಿದ್ದಾರೆಯೇ? ಎಂಬ ಕೂತೂಹಲ ಹೆಚ್ಚಾಗಿದೆ.