ಕರ್ನಾಟಕ

karnataka

ETV Bharat / sports

ಚೀನಾ ಓಪನ್​: ಮುಂದುವರಿದ ಸೈನಾ ಸೋಲು, 2ನೇ ಸುತ್ತಿಗೆ ಕಶ್ಯಪ್​ - ಪರುಪ್ಪಳ್ಳು ಕಶ್ಯಪ್​ ಗೆಲುವು

ಸೈನಾ ಚೈನಾ ಓಪನ್​ನಲ್ಲಿ ಸೋಲುಕಂಡು ನಿರಾಶೆಯನುಭವಿಸಿದರೆ, ಅವರ ಪತಿ ಪರುಪಳ್ಳಿ ಕಶ್ಯಪ್​ ಥಾಯ್ಲೆಂಡ್​ನ ಸಿತ್ತಿಕೊಮ್​ ಥಮ್ಮಸಿನ್​ ವಿರುದ್ಧ 21-14, 21-13 ರ ನೇರ ಗೇಮ್​ಗಳಲ್ಲಿ ಗೆಲುವು ಪಡೆದು ಎರಡನೇ ಸುತ್ತಿಗೆ ಪ್ರವೇಶಿಸಿದ್ರು.

China Open/ಚೈನಾ ಓಪನ್

By

Published : Nov 6, 2019, 5:10 PM IST

ಫುಜೊ(ಚೀನಾ ಓಪನ್)​: ಚೀನಾ ಓಪನ್​ ಬ್ಯಾಡ್ಮಿಂಟನ್​ ಚಾಂಪಿಯನ್​ಶಿಪ್​ನಲ್ಲಿ ಭಾರತದ ಸ್ಟಾರ್​​ ಬ್ಯಾಡ್ಮಿಂಟನ್​ ಪಟುಗಳಾದ ಸಿಂಧು, ಶ್ರೀಕಾಂತ್​ ಸೋಲಿನ ನಂತರ ಸೈನಾ ನೆಹ್ವಾಲ್​ ಕೂಡ ಮೊದಲ ಸುತ್ತಿನಲ್ಲಿ ಹೊರಬಿದ್ದಿದ್ದಾರೆ. ಕಶ್ಯಪ್​ ಎರಡನೇ ಸುತ್ತಿಗೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ.

29 ವರ್ಷದ ಸೈನಾ ತಮ್ಮ ಮೊದಲ ಸುತ್ತಿನ ಪಂದ್ಯದಲ್ಲಿ ಚೀನಾದ ಚಾಯ್​ ಯಾನ್ ಯಾನ್​ ವಿರುದ್ಧ ​9-21, 12-21 ರಿಂದ ಸೋಲು ಕಂಡರು. ಈ ಪಂದ್ಯವನ್ನು ಚೀನಾದ ಆಟಗಾರ್ತಿ ಕೇವಲ 24 ನಿಮಿಷಗಳಲ್ಲಿ ವಶಪಡಿಸಿಕೊಂಡರು.

ಸೈನಾ ಸೋಲುಕಂಡು ನಿರಾಶೆಯನುಭವಿಸಿದರೆ ಅವರ ಪತಿ ಪರುಪಳ್ಳಿ ಕಶ್ಯಪ್​ ಥಾಯ್ಲೆಂಡ್​ನ ಸಿತ್ತಿಕೊಮ್​ ಥಮ್ಮಸಿನ್​ ವಿರುದ್ಧ 21-14, 21-13 ರ ನೇರ ಗೇಮ್​ಗಳಲ್ಲಿ ಗೆಲುವು ಪಡೆದು ಎರಡನೇ ಸುತ್ತಿಗೆ ಪ್ರವೇಶಿಸಿದರು.

ಕಶ್ಯಪ್ ಎರಡನೇ ಸುತ್ತಿನ ಪಂದ್ಯದಲ್ಲಿ ಏಳನೇ ಶ್ರೇಯಾಂಕದ ಡೆನ್ಮಾರ್ಕ್‌ನ ವಿಕ್ಟರ್ ಅಲೆಕ್ಸನ್ ವಿರುದ್ಧ ಸೆಣಸಲಿದ್ದಾರೆ.

ಇನ್ನು ಭಾರತದ ಸಿಂಗಲ್ಸ್​ ಆಟಗಾರರಾದ ಪಿ ವಿ ಸಿಂಧು, ಕಿಡಂಬಿ ಶ್ರೀಕಾಂತ್​, ಹೆಚ್​ಎಸ್​ ಪ್ರಣಯ್​ ರಾವ್​, ತಮ್ಮ ಮೊದಲ ಸುತ್ತಿನ ಪಂದ್ಯದಲ್ಲೇ ಸೋತು ಚೀನಾ ಓಪನ್​ನಿಂದ ನಿರ್ಗಮಿಸಿದ್ದಾರೆ.

ABOUT THE AUTHOR

...view details