ಬಾಲಿ(ಇಂಡೋನೇಷ್ಯಾ):ಭಾರತದ ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು BWF ವಿಶ್ವ ಟೂರ್ ಫೈನಲ್ಸ್ನ ಎ ಗುಂಪಿನ 2ನೇ ಪಂದ್ಯದಲ್ಲಿ ಜರ್ಮನಿ ಆಟಗಾರ್ತಿ ಇವೋನ್ ಲೀ ವಿರುದ್ಧ ನೇರ ಗೇಮ್ಗಳಿಂದ ಗೆದ್ದು ಉಪಾಂತ್ಯಕ್ಕೆ ಪ್ರವೇಶಿಸಿದ್ದಾರೆ.
ಪಿವಿ ಸಿಂಧು 2018ರಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ, ಪ್ರತಿಷ್ಠಿತ ಪ್ರಶಸ್ತಿಯನ್ನು ಗೆದ್ದಿರುವ ಏಕೈಕ ಭಾರತೀಯ ಶಟ್ಲರ್ ಆಗಿದ್ದಾರೆ. ಅವರು ಇವೋನ್ ಲೀ ವಿರುದ್ಧ 21-10,21-13ರ ವಿರುದ್ಧ ಕೇವಲ 31 ನಿಮಿಷಗಳಲ್ಲಿ ಗೆಲುವು ಸಾಧಿಸಿದರು.
ಹಾಲಿ ವಿಶ್ವ ಚಾಂಪಿಯನ್ ತನ್ನ ಕೊನೆಯ ಗುಂಪಿನ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಥಾಯ್ಲೆಂಡ್‌ನ ಪಾರ್ನ್‌ಪಾವೀ ಚೊಚುವಾಂಗ್ ವಿರುದ್ಧ ಸೆಣಸಲಿದ್ದಾರೆ.
ಆದರೆ ಪುರುಷರ ವಿಭಾಗದಲ್ಲಿ 14ನೇ ಶ್ರೇಯಾಂಕದ ಕಿಡಿಂಬಿ ಶ್ರೀಕಾಂತ್ ಥಾಯ್ಲೆಂಡ್‌ನ 3 ಬಾರಿಯ ಜೂನಿಯರ್ ವಿಶ್ವ ಚಾಂಪಿಯನ್ ಕುನ್ಲವುತ್ ವಿಟಿದ್ಸರ್ನ್ ವಿರುದ್ಧ 18-21,7-21ರಿಂದ ಸೋಲು ಕಂಡು ನಿರಾಸೆಯನುಭವಿಸಿದರು. ಶ್ರೀಕಾಂತ್ 2014ರ ಆವೃತ್ತಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದರು.
ಇದಕ್ಕೂ ಮುನ್ನ ಮಹಿಳೆಯರ ಡಬಲ್ಸ್ನಲ್ಲಿ ಅಶ್ವಿನ್ ಪೊನ್ನಪ್ಪ ಮತ್ತು ಸಿಕ್ಕಿ ರೆಡ್ಡಿ ಜೋಡಿ 2ನೇ ಗುಂಪು ಹಂತದ ಪಂದ್ಯದಲ್ಳೂ ಸೋಲು ಕಂಡರು. ಅವರು 19-21, 20-22 ರಲ್ಲಿ ಬಲ್ಗೇರಿಯಾದ ಗೇಬ್ರಿಯಾಲ ಸ್ಟೋಯೇವಾ ಮತ್ತು ಸ್ಟೇಫಾನಿ ಸ್ಟೋಯೇವಾ ವಿರುದ್ಧ ಸೋಲು ಕಂಡರು.
ಇದನ್ನೂ ಓದಿ:ಅಂಜು ಬಾಬಿ ಜಾರ್ಜ್ಗೆ 'ವರ್ಷದ ಮಹಿಳೆ' ಪ್ರಶಸ್ತಿ ನೀಡಿದ ವಿಶ್ವ ಅಥ್ಲೆಟಿಕ್ಸ್