ನವದೆಹಲಿ: ಭಾರತದ ಭರವಸೆಯ ಬ್ಯಾಟ್ಮಿಂಟನ್ ತಾರೆ ಪಿವಿ ಬಿಡಬ್ಲ್ಯೂಎಫ್ ವರ್ಲ್ಡ್ ಟೂರ್ ಫೈನಲ್ಸ್ನ ಎರಡನೇ ಪಂದ್ಯದಲ್ಲೇ ಸೋಲನುಭವಿಸಿದ್ದಾರೆ.
ವಿಶ್ವ ಬ್ಯಾಡ್ಮಿಂಟನ್ ಶ್ರೇಯಾಂಕದಲ್ಲಿ 2ನೇ ಸ್ಥಾನದಲ್ಲಿರುವ ಚೀನಾದ ಚೆನ್ ಯೂಫೀ ವಿರುದ್ಧ 22-2-,16-21, 12-20 ರಲ್ಲಿ ಸೋಲು ಕಾಣುವ ಮೂಲಕ ನಿರಾಶೆಯನುಭವಿಸಿದ್ದಾರೆ.
ಮೊದಲ ಪಂದ್ಯದಲ್ಲಿ ಸೋಲನುಭವಿಸಿದ್ದ 21-18, 18-21 ಹಾಗೂ 8-21 ಸೆಟ್ಗಳಿಂದ ಜಪಾನ್ನ ಅಕನೆ ಯಮಗುಚಿಗೆ ಶರಣಾಗಿದ್ದ ಸಿಂಧು ಎರಡನೇ ಪಂದ್ಯದ ಆರಂಭದ ಗೇಮ್ ಗೆದ್ದು 2ನೇ ಶ್ರೇಯಾಂಕದ ಆಟಗಾರ್ತಿಗೆ ಶಾಕ್ ನೀಡಿದ್ದರು. ಆದರೆ ತಿರುಗಿಬಿದ್ದ ಚೀನಾದ ಆಟಗಾರ್ತಿ ಎರಡು ಮತ್ತು ಮೂರನೇ ಗೇಮ್ ಗೆದ್ದು ಪಂದ್ಯವನ್ನು 2-1 ಸೆಟ್ಗಳಲ್ಲಿ ವಶಪಡಿಸಿಕೊಂಡರು.
ಸತತ ಎರಡು ಪಂದ್ಯಗಳನ್ನು ಸೋತ ಸಿಂಧು ಸೆಮೀಸ್ನಿಂದ ಹೊರಬಿದ್ದಿದ್ದಾರೆ. ಸಿಂಧು ನಾಳೆ ಚೀನಾದ ಹೇ ಬಿಂಗ್ ಜಿಯಾವೊ ವಿರುದ್ಧ ಔಪಚಾರಿಕ ಪಂದ್ಯವನ್ನಾಡಲಿದ್ದಾರೆ.