ಬಾಲಿ(ಇಂಡೋನೇಷಿಯಾ):ವಿಶ್ವ ಟೂರ್ ಫೈಲ್ಸ್ನಲ್ಲಿ ಭಾರತದ ಯುವ ಶಟ್ಲರ್ ಲಕ್ಷ್ಯ ಸೇನ್ ಅವರ ಹೋರಾಟ ಸೆಮಿಫೈನಲ್ಗೆ ಅಂತ್ಯವಾಗಿದೆ. ಶನಿವಾರ ನಡೆದ ನಾಲ್ಕರ ಘಟ್ಟದ ಹೋರಾಟದಲ್ಲಿ ಡೆನ್ಮಾರ್ಕ್ನ ವಿಕ್ಟರ್ ಅಕ್ಸೆಲ್ಸೆನ್ ವಿರುದ್ಧ ಸೋಲು ಕಂಡು ನಿರಾಸೆ ಅನುಭವಿಸಿದರು.
ಲಕ್ಷ್ಯ ಸೇನ್ ವಿಶ್ವದ ನಂಬರ್ 1 ಮತ್ತು ಒಲಿಂಪಿಕ್ ಚಾಂಪಿಯನ್ ಆಗಿರುವ ಡ್ಯಾನಿಸ್ ಪ್ಲೇಯರ್ ವಿರುದ್ಧ 13-21, 11-21ರ ನೇರ ಗೇಮ್ಗಳ ಅಂತರದಲ್ಲಿ ಸೋಲು ಕಂಡರು. ಯುವ ಶಟ್ಲರ್ ವಿಕ್ಟರ್ ವಿರುದ್ಧ ಸತತ 4ನೇ ಮುಖಾಮುಖಿಯಲ್ಲೂ ಸೋಲು ಕಂಡಂತಾಯಿತು. ಗುಂಪು ಹಂತದ ಪಂದ್ಯದಲ್ಲೂ ವಿಕ್ಟರ್ ವಿರುದ್ಧ ಲಕ್ಷ್ಯ ಸೋಲು ಕಂಡಿದ್ದರು.