ಬಾಲಿ(ಇಂಡೋನೇಷ್ಯಾ): ಭಾರತದ ಉದಯೋನ್ಮುಖ ಶಟ್ಲರ್ ಲಕ್ಷ್ಯ ಸೇನ್ ಗುರುವಾರ ನಡೆದ ವಿಶ್ವ ಟೂರ್ ಫೈನಲ್ಸ್ನ ಎ ಗುಂಪಿನ ಕೊನೆ ಪಂದ್ಯದಲ್ಲಿ ಸೋಲು ಕಂಡಿದ್ದಾರೆ. ಆದರೂ ಸೆಮಿಫೈನಲ್ ಪ್ರವೇಶಿಸುವಲ್ಲಿ ಸಫಲರಾಗಿದ್ದಾರೆ.
ಲಕ್ಷ್ಯ ಗುರುವಾರ ನಡೆದ ಒಲಿಂಪಿಕ್ ಚಾಂಪಿಯನ್ ಡೆನ್ಮಾರ್ಕ್ನ ವಿಕ್ಟರ್ ಅಕ್ಸೆಲ್ಸನ್ ವಿರುದ್ಧ 14-21, 15-21 ರ ನೇರ ಸೆಟ್ಗಳಲ್ಲಿ ಸೋಲು ಕಂಡರು. ಎ ಗುಂಪಿನಲ್ಲಿದ್ದ ಕೆಂಟೊ ಮೊಮೊಟ ಮತ್ತು ರಾಸ್ಮಸ್ ಗೆಮ್ಕೆ ಗಾಯದ ಕಾರಣ ಟೂರ್ನಿಯಿಂದ ಹಿಂದೆ ಸರಿದ ಕಾರಣ ಭಾರತೀಯ ಯುವ ಶಟ್ಲರ್ ಸೆಮಿಫೈನಲ್ ಪ್ರವೇಶಿಸಿದ್ದಾರೆ.