ಕರ್ನಾಟಕ

karnataka

ETV Bharat / sports

BWF World Championships: ಸಿಂಧು, ಲಕ್ಷ್ಯ ಬೆನ್ನಲ್ಲೇ ಪ್ರೀ ಕ್ವಾರ್ಟರ್​ಗೆ ಲಗ್ಗೆಯಿಟ್ಟ ಕಿಡಂಬಿ ಶ್ರೀಕಾಂತ್​

ಭಾರತದ ಉದಯೋನ್ಮುಖ ಶಟ್ಲರ್ ಲಕ್ಷ್ಯ ಸೇನ್​​ ಪುರುಷರ ವಿಭಾಗದ ಸಿಂಗಲ್ಸ್​ನಲ್ಲಿ ಜಪಾನ್​ನ ವಿಶ್ವದ 17ನೇ ಶ್ರೇಯಾಂಕ ಮತ್ತು ಟೂರ್ನಿಯಲ್ಲಿ 15ನೇ ಶ್ರೇಯಾಂಕ ಪಡೆದಿದ್ದ ಕೆಂಟ ನಿಶಿಮೊಟೊ ವಿರುದ್ಧ ಕಠಿಣ ಸ್ಪರ್ಧೆಯಲ್ಲಿ 22-20, 15-21, 21-18ರಲ್ಲಿ ಗೆದ್ದು ಬೀಗಿದರು.

BWF World Championships
ಪ್ರೀ ಕ್ವಾರ್ಟರ್​ಗೆ ಲಗ್ಗೆಯಿಟ್ಟ ಕಿಡಂಬಿ ಶ್ರೀಕಾಂತ್​

By

Published : Dec 14, 2021, 10:14 PM IST

Updated : Dec 18, 2021, 2:59 PM IST

ವೆಲ್ವಾ(ಸ್ಪೇನ್): ಭಾರತದ ಸ್ಟಾರ್ ಶಟ್ಲರ್​ ಕಿಡಿಂಬಿ ಶ್ರೀಕಾಂತ್​​ ವಿಶ್ವ ಬ್ಯಾಡ್ಮಿಂಟನ್​ ಚಾಂಪಿಯನ್​ಶಿಪ್​ನ ಪುರುಷರ ಸಿಂಗಲ್ಸ್​ ವಿಭಾಗದಲ್ಲಿ 3ನೇ ಸುತ್ತಿಗೆ ಪ್ರವೇಶಿಸಿದ್ದಾರೆ.

ಮಾಜಿ ವಿಶ್ವದ ನಂಬರ್​ 1 ಶಟ್ಲರ್​ ಶ್ರೀಕಾಂತ್ 62ನೇ ಶ್ರೇಯಾಂಕದ ಚೀನಾದ ಲೀ ಶೀಫೆಂಗ್ ವಿರುದ್ಧ 15-21, 21-18,21-17ರ ರೋಚಕ ಕದನದಲ್ಲಿ ಗೆಲುವು ಸಾಧಿಸಿದರು. 70 ನಿಮಿಷಗಳ ಕಾಲ ನಡೆದ ಈ ಕಾಳಗದಲ್ಲಿ ಮೊದಲು 21 ವರ್ಷದ ಆಟಗಾರನ ವಿರುದ್ಧ ಹಿನ್ನಡೆ ಅನುಭವಿಸಿದ ಶ್ರೀಕಾಂತ್ ಮೊದಲ ಗೇಮ್ ಕಳೆದುಕೊಂಡರೂ, ನಂತರದ 2 ಗೇಮ್​ಗಳನ್ನು ಗೆದ್ದು 16ರ ಸುತ್ತಿಗೆ ತೇರ್ಗಡೆಯಾದರು.

ಇದಕ್ಕೂ ಮುನ್ನ ಪಿವಿ ಸಿಂಧು ಸ್ಲೊವಾಕಿಯಾದ ಮಾರ್ಟಿನಾ ರೆಪಿಸ್ಕಾ ವಿರುದ್ಧ 21-7, 21-9ರ ಪ್ರಾಬಲ್ಯಯುತ ಗೆಲುವು ಸಾಧಿಸಿದ್ದರು. ಎರಡು ಒಲಿಂಪಿಕ್ ಪದಕಗಳ ವಿಜೇತೆ ಸಿಂಧು ತಮ್ಮ ಮುಂದಿನ ಪಂದ್ಯದಲ್ಲಿ ಥಾಯ್ಲೆಂಡ್​ನ ಪಾರ್ನ್​ಪಾವೀ ಚೊಚುವಾಂಗ್ ವಿರುದ್ಧ ಸೆಣಸಾಡಲಿದ್ದಾರೆ.

ಜಪಾನ್ ಆಟಗಾರನಿಗೆ ವಿರೋಚಿತ ಸೋಲುಣಿಸಿದ ಲಕ್ಷ್ಯ

ಭಾರತದ ಉದಯೋನ್ಮುಖ ಶಟ್ಲರ್ ಲಕ್ಷ್ಯ ಸೇನ್​​ ಪುರುಷರ ವಿಭಾಗದ ಸಿಂಗಲ್ಸ್​ನಲ್ಲಿ ಜಪಾನ್​ನ ವಿಶ್ವದ 17ನೇ ಶ್ರೇಯಾಂಕ ಮತ್ತು ಟೂರ್ನಿಯಲ್ಲಿ 15ನೇ ಶ್ರೇಯಾಂಕ ಪಡೆದಿದ್ದ ಕೆಂಟ ನಿಶಿಮೊಟೊ ವಿರುದ್ಧ ಕಠಿಣ ಸ್ಪರ್ಧೆಯಲ್ಲಿ 22-20, 15-21, 21-18ರಲ್ಲಿ ಗೆದ್ದು ಬೀಗಿದರು.

​ಡಬಲ್ಸ್​ನಲ್ಲಿ ಸಾತ್ವಿಕ್​ ಸಾಯಿರಾಜ್​ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ ಥಾಯ್ಲೆಂಡ್​ನ ಲೀ ಹ್ಯೂಯ್- ಯಂಗ್ ಪೊ-ಹುಸಾನ್ ವಿರುದ್ಧ 27-25, 21-17ರಲ್ಲಿ ಗೆಲುವು ಸಾಧಿಸಿದರು.

ಇದನ್ನೂ ಓದಿ: World Championship: ಪ್ರೀ ಕ್ವಾರ್ಟರ್ ಫೈನಲ್​ಗೆ ಲಗ್ಗೆಯಿಟ್ಟ ಸಿಂಧು, ಲಕ್ಷ್ಯ ಸೇನ್

Last Updated : Dec 18, 2021, 2:59 PM IST

ABOUT THE AUTHOR

...view details