ವೆಲ್ವಾ(ಸ್ಪೇನ್) :ಭಾರತದ ಸ್ಟಾರ್ ಶಟ್ಲರ್ ಶ್ರೀಕಾಂತ್ ಮತ್ತು ಭವಿಷ್ಯದ ಸ್ಟಾರ್ ಲಕ್ಷ್ಯ ಸೇನ್ ಸ್ಪೇನ್ ವೆಲ್ವಾದಲ್ಲಿ ನಡೆಯುತ್ತಿರುವ ಬಿಡಬ್ಲ್ಯೂಎಫ್ ವಿಶ್ವ ಚಾಂಪಿಯನ್ಶಿಪ್ನ ಸೆಮಿಫೈನಲ್ನಲ್ಲಿ ಸೆಣಸಾಡಲಿದ್ದಾರೆ.
ಭಾರತೀಯ ಶಟ್ಲರ್ಗಳು ಮಹತ್ವದ ಟೂರ್ನಾಮೆಂಟ್ನಲ್ಲಿ ಸೆಮಿಫೈನಲ್ಸ್ ಪ್ರವೇಶಿಸಿರುವುದರಿಂದ ಈಗಾಗಲೇ ಭಾರತಕ್ಕೆ ಎರಡು ಪದಕಗಳು ಖಚಿತವಾಗಲಿವೆ. ಇಂದಿನ ಪಂದ್ಯದಲ್ಲಿ ಗೆದ್ದವರೂ ಫೈನಲ್ ಪ್ರವೇಶಿಸುವುದರಿಂದ ಕನಿಷ್ಠ ಬೆಳ್ಳಿ ಪದಕ ಕೂಡ ಖಚಿತವಾಗಲಿದೆ.
ಈ ಮೂಲಕ ಭಾರತದ ಬ್ಯಾಡ್ಮಿಂಟನ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವಿಶ್ವ ಚಾಂಪಿಯನ್ಶಿಪ್ನಲ್ಲಿ ಪುರುಷರ ವಿಭಾಗದಲ್ಲಿ ಬೆಳ್ಳಿ ಪದಕ ದೇಶಕ್ಕೆ ಸಿಗಲಿದೆ. ಅಲ್ಲದೆ ಪುರುಷರ ವಿಭಾಗದಲ್ಲಿ ನಾಲ್ಕನೇ ಪದಕ ಭಾರತಕ್ಕೆ ಸಿಗಲಿದೆ. 1983ರಲ್ಲಿ ಪ್ರಕಾಶ್ ಪಡುಕೋಣೆ ಮತ್ತು 2019ರಲ್ಲಿ ಸಾಯಿ ಪ್ರಣೀತ್ ಮಾತ್ರ ಈ ಟೂರ್ನಿಯಲ್ಲಿ ಕಂಚು ಗೆದ್ದ ಸಾಧನೆ ಮಾಡಿದ್ದಾರೆ.