ಬಾರ್ಸಿಲೋನಾ :ಭಾರತದ ಅನುಭವಿ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಕಾರ್ಟರ್ ಫೈನಲ್ನಲ್ಲಿ ಥಾಯ್ಲೆಂಡ್‌ನ ಆಟಗಾರ್ತಿ ವಿರುದ್ಧ ಸೋಲು ಕಾಣುವ ಮೂಲಕ ಬಾರ್ಸಿಲೋನಾ ಸ್ಪೇನ್ ಮಾಸ್ಟರ್ಸ್‌ನಿಂದ ಹೊರ ಬಿದ್ದಿದ್ದಾರೆ.
ಸೈನಾ ನೆಹ್ವಾಲ್ ಕ್ವಾರ್ಟರ್ ಫೈನಲ್ನಲ್ಲಿ ಥಾಯ್ಲೆಂಡ್‌ನ ಬುಸನನ್ ಒಂಗ್‌ಬಮ್ರುಂಗ್‌ಫಾನ್ ವಿರುದ್ಧ 20-22, 19-21 ಅಂತರದಲ್ಲಿ ರೋಚಕ ಸೋಲು ಕಂಡಿದ್ದಾರೆ. ಸೈನಾ ಥಾಯ್ ಆಟಗಾರ್ತಿಯ ವಿರುದ್ಧ 3-2ರಲ್ಲಿ ಮುನ್ನಡೆ ಇದ್ದರೂ ಈ ಪಂದ್ಯದಲ್ಲಿ ಬುಸನೆನ್ ವಿರುದ್ಧ ಗೆಲ್ಲಲಾಗಲಿಲ್ಲ. ಈ ಮೂಲಕ ಪ್ರಶಸ್ತಿ ಬರ ಮುಂದುವರಿಸುವಂತಾಯಿತು. ಮೊದಲ ಮೂರು ಕಾದಾಟದಲ್ಲಿ ಬುಸನನ್ ವಿರುದ್ಧ ಗೆಲುವು ಸಾಧಿಸಿದ್ದ ಸೈನಾ, ಇದೀಗ ಕೊನೆಯ ಮೂರೂ ಪಂದ್ಯಗಳಲ್ಲಿ ಸೋಲು ಕಂಡಂತಾಗಿದೆ.