ನವದೆಹಲಿ: ಡೆನ್ಮಾರ್ಕ್ನ ಮಾಜಿ ಡಬಲ್ಸ್ ಸ್ಟಾರ್ ಹಾಗೂ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಮಥಿಯಾಸ್ ಬೋ ಅವರನ್ನು ಡಬಲ್ಸ್ ಕೋಚ್ ಆಗಿ ನೇಮಕ ಮಾಡಲಾಗಿದೆ ಎಂದು ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾ ಕಾರ್ಯದರ್ಶಿ ಅಜಯ್ ಸಿಂಘಾನಿಯಾ ತಿಳಿಸಿದ್ದಾರೆ.
ಡಬಲ್ಸ್ ವಿಭಾಗದಲ್ಲಿ 10ನೇ ಶ್ರೇಯಾಂಕದಲ್ಲಿರುವ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಅವರ ಬಹುದಿನದ ಬೇಡಿಕೆ ಮನ್ನಿಸಿರುವ ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಮ್(TOPS) ಶುಕ್ರವಾರ ಡ್ಯಾನೀಸ್ ಆಟಗಾರನನ್ನು ಒಲಿಂಪಿಕ್ಸ್ಗಾಗಿ ಕೋಚ್ ಸ್ಥಾನಕ್ಕೆ ಆಯ್ಕೆ ಮಾಡಿದೆ.
ಭಾರತದ ಡಬಲ್ಸ್ ತಂಡದ ನೂತನ ಕೋಚ್ ಸ್ಥಾನಕ್ಕೆ ಒಲಿಂಪಿಕ್ ಬೆಳ್ಳಿ ಪದಕ ವಿಜೇತ ಮಥಿಯಾಸ್ ಬೋ ಅವರನ್ನು ಸ್ವಾಗತಿಸುತ್ತಿದ್ದೇವೆ. ಅವರೊಬ್ಬ ಚಾಂಪಿಯನ್ ಆಟಗಾರ ಮತ್ತು ತಾವೂ ಆಡುತ್ತಿದ್ದ ವೇಳೆ ಹಲವಾರು ಡೆನ್ಮಾರ್ಕ್ ಆಟಗಾರರಿಗೆ ಮಾರ್ಗದರ್ಶನ ನೀಡಿದ್ದಾರೆ. ಜೊತೆಗೆ ಅವರು ಇಂಡಿಯನ್ ಬ್ಯಾಡ್ಮಿಂಟನ್ ಲೀಗ್ನಲ್ಲಿ ಆಡಿರುವುದರಿಂದ ಭಾರತೀಯ ಆಟಗಾರರಿಗೆ ತುಂಬಾ ಹತ್ತಿರವಾಗಿದ್ದಾರೆ. ಮಥಿಯಾಸ್ ಅವರ ಮೌಲ್ಯಯುತ ಅನುಭವ ಮತ್ತು ಮಾರ್ಗದರ್ಶನ ನಮ್ಮ ಆಟಗಾರರಿಗೆ ತುಂಬಾ ಅನುಕೂಲವಾಗಲಿದೆ ಎಂದು ನಾವು ಭಾವಿಸಿದ್ದೇವೆ ಎಂದು ಸಿಂಘಾನಿಯ ತಿಳಿಸಿದ್ದಾರೆ.