ಕರ್ನಾಟಕ

karnataka

ETV Bharat / sports

ಬ್ಯಾಡ್ಮಿಂಟನ್ ದಂತಕತೆ ಪ್ರಕಾಶ್ ಪಡುಕೋಣೆಗೆ ಕೊರೊನಾ,ಆಸ್ಪತ್ರೆಗೆ ದಾಖಲು - ಬ್ಯಾಡ್ಮಿಂಟನ್ ಸುದ್ದಿ

ಅವರ ಎಲ್ಲಾ ಪ್ಯಾರಾಮೀಟರ್‌ಗಳೂ ಸರಿಯಾಗಿವೆ. ಅವರ ಪತ್ನಿ ಮತ್ತು ಪುತ್ರಿ ಸದ್ಯ ಮನೆಯಲ್ಲಿದ್ದಾರೆ. ಪ್ರಕಾಶ್ ಕೂಡ 2-3 ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ..

ಬ್ಯಾಡ್ಮಿಂಟನ್ ದಂತಕತೆ ಪ್ರಕಾಶ್ ಪಡುಕೋಣೆಗೆ ಕೊರೊನಾ
ಬ್ಯಾಡ್ಮಿಂಟನ್ ದಂತಕತೆ ಪ್ರಕಾಶ್ ಪಡುಕೋಣೆಗೆ ಕೊರೊನಾ

By

Published : May 4, 2021, 4:39 PM IST

ಬೆಂಗಳೂರು : ಲೆಜೆಂಡರಿ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಅವರಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿರುವುದರಿಂದ ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದು, ಸೋಂಕಿನಿಂದ ಚೇತರಿಸಿಕೊಳ್ಳುತ್ತಿದ್ದಾರೆಂದು ತಿಳಿದು ಬಂದಿದೆ.

65 ವರ್ಷದ ಪಡುಕೋಣೆ ಕೋವಿಡ್-19ನಿಂದ ಚೇತರಿಸಿಕೊಂಡಿದ್ದಾರೆ. ಅವರು ಈ ವಾರದಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಎಂದು ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿಯ ಡೈರೆಕ್ಟರ್​ ವಿಮಲ್ ಕುಮಾರ್​ ಹೇಳಿದ್ದಾರೆ.

"ಸುಮಾರು 10 ದಿನಗಳ ಹಿಂದೆ ಪ್ರಕಾಶ್ ಪಡುಕೋಣೆ, ಅವರ ಪತ್ನಿ (ಉಜ್ವಲಾ) ಮತ್ತು ದ್ವಿತೀಯ ಪುತ್ರಿಗೆ (ಅನಿಶಾ) ಕೊರೊನಾ ವೈರಸ್ ಸೋಂಕಿನ ಲಕ್ಷಣ ಕಾಣಿಸಿದ್ದವು. ನಂತರ ಪರೀಕ್ಷೆಗೊಳಗಾದಾದ ಅವರಿಗೆ ಪಾಸಿಟಿವ್ ಕಂಡು ಬಂದಿತ್ತು" ಎಂದು ವಿಮಲ್ ಕುಮಾರ್ ಪಿಟಿಐಗೆ ಮಾಹಿತಿ ನೀಡಿದ್ದಾರೆ.

ಅವರು ತಾವಾಗಿಯೇ ಮನೆಯಲ್ಲಿ ಐಸೊಲೇಟ್​ ಆಗಿದ್ದರು. ಆದರೆ, ಪ್ರಕಾಶ್‌ ಅವರಿಗೆ ಜ್ವರ ಮಕಡಿಮೆಯಾಗಲಿಲ್ಲ. ಹಾಗಾಗಿ, ಕಳೆದ ಶನಿವಾರ ಅವರನ್ನು ಬೆಂಗಳೂರಿನಲ್ಲಿರುವ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದಾರೆ. ಅವರು ಪ್ರಸ್ತುತ ಹುಷಾರಾಗಿದ್ದಾರೆ.

ಅವರ ಎಲ್ಲಾ ಪ್ಯಾರಾಮೀಟರ್‌ಗಳೂ ಸರಿಯಾಗಿವೆ. ಅವರ ಪತ್ನಿ ಮತ್ತು ಪುತ್ರಿ ಸದ್ಯ ಮನೆಯಲ್ಲಿದ್ದಾರೆ. ಪ್ರಕಾಶ್ ಕೂಡ 2-3 ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ" ಎಂದು ಅವರು ಹೇಳಿದ್ದಾರೆ.

ಇದನ್ನು ಓದಿ:ಸನ್‌ರೈಸರ್ಸ್ ಹೈದರಾಬಾದ್ ತಂಡದ ಆಟಗಾರ ವೃದ್ಧಿಮಾನ್ ಸಹಾಗೆ ಕೊರೊನಾ ದೃಢ

ABOUT THE AUTHOR

...view details