ಲಂಡನ್: ಕೊರಿಯಾದ ಸಂಗ್ ಜಿ ಹ್ಯುನ್ರನ್ನು ಮಣಿಸುವ ಮೂಲಕ ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್ ಫೈನಲ್ಗೆ ಲಗ್ಗೆ ಇಟ್ಟಿದ್ದಾರೆ.
49 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ವಿಶ್ವಚಾಂಪಿಯನ್ ಸಿಂಧು, 21-09, 21-15ರಿಂದ ಹ್ಯುನ್ರಿಗೆ ಸೋಲುಣಿಸಿದರು. ಮೊದಲ ಗೇಮ್ನಲ್ಲಿ ತೀವ್ರ ಪೈಪೋಟಿ ನೀಡಿದ ಹ್ಯುನ್ 2ನೇ ಗೇಮ್ನಲ್ಲಿ ಪುಟಿದೇಳುವಲ್ಲಿ ವಿಫಲರಾದರು. ಸಿಂಧು ಮುಂದಿನ ಪಂದ್ಯದಲ್ಲಿ ಜಪಾನ್ನ 4ನೇ ಶ್ರೇಯಾಂಕದ ಆಟಗಾರ್ತಿ ನೊಜೊಮಿ ಒಕುಹಾರಾ ಇಲ್ಲವೆ ಡೆನ್ಮಾರ್ಕ್ನ ಲಿನ್ ಹೊಜ್ಮಾರ್ಕ್ ಜೆರ್ಸ್ಫೆಲ್ಡ್ಟ್ ವಿರುದ್ಧ ಸೆಣೆಸಾಡಲಿದ್ದಾರೆ.