ಕೇಪ್ ಟೌನ್ (ದಕ್ಷಿಣ ಆಫ್ರಿಕಾ):ದಕ್ಷಿಣ ಆಫ್ರಿಕಾ ಮತ್ತು ಭಾರತ ನಡುವಿನ ಎರಡನೇ ಮತ್ತು ಅಂತಿಮ ಟೆಸ್ಟ್ ಎರಡೇ ದಿನದಲ್ಲಿ ಮುಕ್ತಾಯವಾಗಿದೆ. ಎರಡೂ ತಂಡಗಳ ಬೌಲರ್ಗಳು ಪ್ರಾಬಲ್ಯ ಮೆರೆದಿದ್ದರಿಂದ ಇನ್ನೂ ಮೂರು ದಿನಗಳ ಬಾಕಿ ಇರುವಾಗಲೇ ಟೆಸ್ಟ್ ಅಂತ್ಯಗೊಂಡಿದೆ. ಈ ಪಂದ್ಯವನ್ನು ಗೆದ್ದ ರೋಹಿತ್ ಶರ್ಮಾ ಪಡೆ ಸರಣಿಯನ್ನು1-1 ಅಂತರದಿಂದ ಸಮಬಲ ಮಾಡಿಕೊಂಡಿದೆ.
ಕೇಪ್ ಟೌನ್ನಲ್ಲಿ ನಡೆದ ಪಂದ್ಯದಲ್ಲಿ ಬುಧವಾರ ಟಾಸ್ ಗೆದ್ದು ದಕ್ಷಿಣ ಆಫ್ರಿಕಾ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 55 ರನ್ಗಳಿಗೆ ಆಲೌಟ್ ಆಗಿದ್ದರು. ಭಾರತ ತಂಡ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 153 ರನ್ಗಳನ್ನು ಮಾತ್ರ ಕಲೆ ಹಾಕಿ 98 ರನ್ಗಳ ಮುನ್ನಡೆ ಸಾಧಿಸಿತ್ತು. ಇಂದು ತನ್ನ ಎರಡನೇ ಇನ್ನಿಂಗ್ಸ್ನಲ್ಲಿ 176 ರನ್ಗಳಿಗೆ ಹರಿಣಗಳು ಸರ್ವಪತನ ಕಂಡು ರೋಹಿತ್ ಪಡೆ ಗೆಲುವಿಗೆ 79 ರನ್ಗಳ ಗುರಿ ನೀಡಿತ್ತು. ಇದನ್ನು ಬೆನ್ನಟ್ಟಿದ್ದ ಟೀಂ ಇಂಡಿಯಾ 12 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 80 ರನ್ಗಳನ್ನು ಗಳಿಸಿ ಗೆಲುವು ಸಾಧಿಸಿದೆ.
ಎರಡೂ ದಿನವೂ ಬೌಲರ್ಗಳ ಮೆರೆದಾಟ:ಎರಡು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಮೊದಲ ಪಂದ್ಯವನ್ನುದಕ್ಷಿಣ ಆಫ್ರಿಕಾ ಗೆದ್ದು ಸರಣಿಯಲ್ಲಿ 1-0 ಮುನ್ನಡೆಯಲ್ಲಿತ್ತು. ಹೀಗಾಗಿ ರೋಹಿತ್ ಬಳಗ ಎರಡನೇ ಪಂದ್ಯವನ್ನು ಗೆಲ್ಲುವ ಒತ್ತಡದೊಂದಿಗೆ ಗುರಿಯನ್ನು ಹೊಂದಿತ್ತು. ಇದಕ್ಕೆ ಮೊದಲ ದಿನವೇ ಬೌಲರ್ಗಳು ಉತ್ತಮ ಸಾಥ್ ನೀಡಿತು. ಅದರಲ್ಲೂ, ಮೊಹಮ್ಮದ್ ಸಿರಾಜ್ ಮಾರಕ ಬೌಲಿಂಗ್ ಮೂಲಕ 6 ವಿಕೆಟ್ ಕಿತ್ತು ಹರಿಣಗಳನ್ನು ಕಾಡಿದರು.
ಪರಿಣಾಮ ಎಂಬಂತೆ ದಕ್ಷಿಣ ಆಫ್ರಿಕಾ ತನ್ನ ಮೊದಲ ಇನ್ನಿಂಗ್ಸ್ಅನ್ನು 55 ರನ್ಗಳಿಗೆ ಮುಗಿಸಿತ್ತು. ಆದರೆ, ಎದುರಾಳಿ ತಂಡವನ್ನು ಅತ್ಯಲ್ಪ ಮೊತ್ತವನ್ನು ಕಟ್ಟಿಹಾಕುವಲ್ಲಿ ಯಶಸ್ಸಿಯಾಗಿದ್ದ ರೋಹಿತ್ ಪಡೆ ಕೂಡ ಬ್ಯಾಟಿಂಗ್ ವೈಫಲ್ಯ ಅನುಭವಿಸಿತ್ತು. ಹರಿಣಗಳ ಬೌಲರ್ಗಳ ಸಹ ಮೇಲುಗೈ ಸಾಧಿಸಿದರು. ಇದರಿಂದ ರೋಹಿತ್ ಶರ್ಮಾ, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್ ಹೊರತುಪಡಿಸಿ ಉಳಿದ ಏಳು ಆಟಗಾರರು ರನ್ಗಳ ಖಾತೆಯನ್ನೇ ತೆರೆಯಲಿಲ್ಲ. ಹೀಗಾಗಿ 153 ರನ್ಗಳಿಗೆ ಭಾರತ ಕೂಡ ಸರ್ವಪತನ ಕಂಡಿತ್ತು. ಆದರೂ, ಎರಡನೇ ಇನ್ನಿಂಗ್ಸ್ಗೆ 98 ರನ್ಗಳ ಮುನ್ನಡೆ ಪಡೆದಿತ್ತು.