ಕರ್ನಾಟಕ

karnataka

ETV Bharat / sitara

'ಗಾನಬಜಾನ' ಮಾಡಲು ಕಿರುತೆರೆಗೆ ಬರ್ತಿದ್ದಾರೆ ಲೂಸ್ ಮಾದ..! - ಗಾನಬಜಾನ ಕಾರ್ಯಕ್ರಮದಲ್ಲಿ ಯೋಗೀಶ್ ಭಾಗಿ

'ಗಾನಬಜಾನ' ಕಾರ್ಯಕ್ರಮದಲ್ಲಿ ಯೋಗಿ ನಿರೂಪಕರಾ ಅಥವಾ ತೀರ್ಪುಗಾರರಾ ಎಂಬುದು ಇನ್ನೂ ನಿಗೂಢವಾಗಿದೆ.'ತಕಧಿಮಿತ' ಡ್ಯಾನ್ಸಿಂಗ್ ಸ್ಟಾರ್ ಕಾರ್ಯಕ್ರಮದ ಜಡ್ಜ್ ಆಗಿ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದ ಯೋಗಿ ನಂತರ 'ಲೈಫ್ ಸೂಪರ್ ಗುರು' ಎಂಬ ರಿಯಾಲಿಟಿ ಶೋ ಜಡ್ಜ್ ಆಗಿದ್ದರು.

ಲೂಸ್ ಮಾದ ಯೋಗಿ

By

Published : Oct 26, 2019, 5:39 PM IST

'ದುನಿಯಾ' ಚಿತ್ರದ ಮೂಲಕ ಲೂಸ್ ಮಾದನಾಗಿ ಸಿನಿ ಪ್ರಿಯರ ಮನದಲ್ಲಿ ಶಾಶ್ವತ ಸ್ಥಾನ ಪಡೆದಿರುವ ಯೋಗೀಶ್, ಕಿರುತೆರೆಗೆ ಬರುತ್ತಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿರುವ ಹೊಚ್ಚ ಹೊಸ ರಿಯಾಲಿಟಿ ಶೋ 'ಗಾನಬಜಾನ' ದಲ್ಲಿ ನಿಮ್ಮ ಪ್ರೀತಿಯ ಲೂಸ್ ಮಾದ ಕಾಣಿಸಿಕೊಳ್ಳಲಿದ್ದಾರೆ.

ವಾಹಿನಿ ಈಗಾಗಲೇ ಯೋಗಿ ಹಾಗೂ ಇನ್ನಿತರರು ನಟಿಸಿರುವ ಪ್ರೋಮೋ ಒಂದನ್ನು ಬಿಡುಗಡೆ ಮಾಡಿದ್ದು, ಪ್ರೋಮೋ ಬಹಳ ವಿಭಿನ್ನವಾಗಿದೆ. ಆದರೆ ಈ ಕಾರ್ಯಕ್ರಮದಲ್ಲಿ ಯೋಗಿ ಪಾತ್ರ ಏನು ಎಂಬುದು ಇನ್ನೂ ರಿವೀಲ್ ಆಗಿಲ್ಲ. 'ಗಾನಬಜಾನ' ಕಾರ್ಯಕ್ರಮದಲ್ಲಿ ಯೋಗಿ ನಿರೂಪಕರಾ ಅಥವಾ ತೀರ್ಪುಗಾರರಾ ಎಂಬುದು ಇನ್ನೂ ನಿಗೂಢವಾಗಿದೆ. 'ಗಾನಬಜಾನ' ಎಂದರೆ ಇದು ಹಾಡಿಗೆ ಸಂಬಂಧಿಸಿದ ಕಾರ್ಯಕ್ರಮ ಎನ್ನಿಸುತ್ತದೆ. ಆದರೆ ಪ್ರೋಮೋ ಸ್ವಲ್ಪ ವಿಭಿನ್ನವಾಗಿರುವುದರಿಂದ ಇದು ಯಾವ ಕಾರ್ಯಕ್ರಮ ಎಂದು ತಿಳಿಯಲು ಶೋ ಆರಂಭವಾದ ನಂತರ ನೋಡಬೇಕಷ್ಟೇ. 'ತಕಧಿಮಿತ' ಡ್ಯಾನ್ಸಿಂಗ್ ಸ್ಟಾರ್ ಕಾರ್ಯಕ್ರಮದ ಜಡ್ಜ್ ಆಗಿ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದ ಯೋಗಿ ನಂತರ 'ಲೈಫ್ ಸೂಪರ್ ಗುರು' ಎಂಬ ರಿಯಾಲಿಟಿ ಶೋ ಜಡ್ಜ್ ಆಗಿದ್ದರು. ಇದೀಗ 'ಗಾನಾಬಜಾನ' ದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಲೂಸ್ ಮಾದ ಯೋಗೀಶ್​

ABOUT THE AUTHOR

...view details