ಕರ್ನಾಟಕ

karnataka

ETV Bharat / sitara

ಕೆಜಿಎಫ್​ನಿಂದ ಕಾಪಿ ಹೊಡೆದದ್ದು ಸತ್ಯ: ಎದೆತಟ್ಟಿ ಹೇಳಿಕೊಂಡ ಟಾಲಿವುಡ್​ ನಿರ್ದೇಶಕ ​ - etv bharat

ಇತ್ತೀಚೆಗೆ ಸ್ಯಾಂಡಲ್​ವುಡ್​ ಸಿನಿಮಾಗಳಿಗೆ ಭರ್ಜರಿ ಓಪೆನಿಂಗ್​ ಸಿಗುತ್ತಿವೆ. ಸಿನಿ ಜಗತ್ತಿನಲ್ಲಿ ದೊಡ್ಡ ಬಜೆಟ್​ ಚಿತ್ರ ಎಂದು ಗುರುತಿಸಿಕೊಂಡ ಕೆಜಿಎಫ್-1,​ ಸೌಥ್​ ಅಷ್ಟೇ ಅಲ್ಲ, ನಾರ್ತ್​ ಫಿಲ್ಮ್​ ಇಂಡಸ್ಟ್ರಿಯಿಂದಲೂ ಮೆಚ್ಚುಗೆ ಗಳಿಸಿದ್ದು ನಿಮಗೆಲ್ಲ ಗೊತ್ತು. ಇದೀಗ ಈ ಸಿನಿಮಾದ ಕೆಲವು ಸೀನ್​ಗಳನ್ನು ಟಾಲಿವುಡ್​ ಕಾಪಿ ಮಾಡಿದೆಯಂತೆ. ಈ ಬಗ್ಗೆ ಸ್ವತಃ ಚಿತ್ರದ ನಿರ್ದೇಶಕರೇ ಒಪ್ಪಿಕೊಂಡಿದ್ದಾರೆ.

ಯಶ್​

By

Published : Jul 1, 2019, 11:24 AM IST

ಸ್ಯಾಂಡಲ್​ವುಡ್​ನಲ್ಲಿ ಹೈಪ್​ ಕ್ರಿಯೆಟ್​ ಮಾಡಿದ ಕೆಜಿಎಫ್ -ಚಾಪ್ಟರ್​ ಫಸ್ಟ್​​ನಿಂದ ಸ್ಫೂರ್ತಿ ಪಡೆದ ಟಾಲಿವುಡ್​ನ ಕಲ್ಕಿ​​ ಚಿತ್ರ ತಂಡ ಕೆಲವು ಸೀನ್​ಗಳನ್ನು ಕಾಪಿ ಮಾಡಿದೆಯಂತೆ. ಹೀಗೆಂದು ಬೇರಾರು ಹೇಳುತ್ತಿಲ್ಲ, ಸ್ವತಃ ಕಲ್ಕಿ​​ ಚಿತ್ರದ ನಿರ್ದೇಶಕ ಪ್ರಶಾಂತ್ ವರ್ಮಾ ಅವರೇ ಈ ಬಗ್ಗೆ ಬಹಿರಂಗಪಡಿಸಿದ್ದಾರೆ.

ಸಾಮಾನ್ಯವಾಗಿ ತಮಗೆ ಬೇಕಾದ ಸೀನ್​ಗಳನ್ನು ನಕಲು ಮಾಡಿ ಅಸಲಿ ಅನ್ನೋ ಕಾಲದಲ್ಲಿ ಪ್ರಶಾಂತ್ ವರ್ಮಾ ಮಾತ್ರ ಎದೆ ತಟ್ಟಿಕೊಂಡು ಹೇಳಿಕೊಂಡಿದ್ದಾರೆ. ಹೌದು, ನಾನು ಕೆಜಿಎಫ್ -ಚಾಪ್ಟರ್​ ಫಸ್ಟ್​​ನಿಂದ ಕೆಲವು ಸೀನ್​ಗಳನ್ನು ನಕಲು ಮಾಡಿದ್ದೇನೆ. ಅಲ್ಲದೇ ನನ್ನ ಕಲ್ಕಿ​​ ಚಿತ್ರಕ್ಕೆ ಕೆಜಿಎಫ್ ಸಿನಿಮಾನೇ ಸ್ಫೂರ್ತಿ ಎಂದು ಬಣ್ಣಿಸಿದ್ದಾರೆ.

ಕೆಜಿಎಫ್ ಚಿತ್ರ ನಿರ್ದೇಶಕ ಪ್ರಶಾಂತ್​ ನೀಲ್​ (ಸಂಗ್ರಹ ಚಿತ್ರ)

ದೊಡ್ಡಮಟ್ಟದಲ್ಲಿ ಸಕ್ಸಸ್​ ಆದ ಸಿನಿಮಾದಿಂದ ನಾನು ಸಾಕಷ್ಟು ಕಲಿಯುತ್ತಿರುತ್ತೇನೆ. ಇದು ತಪ್ಪಲ್ಲ. ಹಾಗೇ ಇದು ಸಹ. ಕೆಜಿಎಫ್​ ಬಗ್ಗೆ ಸಾಕಷ್ಟು ಕೇಳಿದ್ದೆ. ಹಾಗಾಗಿ ಸಿನಿಮಾವನ್ನು ನೋಡಿದೆ. ಅದೊಂದು ಬಿಗ್​ ಬಜೆಟ್​ ಸಿನಿಮಾ ಅಷ್ಟೇ ಅಲ್ಲ, ಸ್ಯಾಂಡಲ್​ವುಡ್​ನಲ್ಲಿ ಇತಿಹಾಸ ಕಟ್ಟಿಕೊಟ್ಟ ಚಿತ್ರ. ಹಾಗಾಗಿ ಅಂತಹ ಚಿತ್ರಗಳಿಂದ ನಾನು ನನ್ನ ಇತಿಮಿತಿಯೊಳಗೆ ಕೆಲವು ಸೀನ್​ಗಳನ್ನು ನಕಲು ಮಾಡಲು ಮಾಡಿದ್ದೇನೆ ಎಂದಿದ್ದಾರೆ.

ಕಲ್ಕಿ​​ ಚಿತ್ರದ ನಿರ್ದೇಶನದ ಬಗ್ಗೆಯೂ ಕೆಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಕಲ್ಕಿ​​ ಚಿತ್ರ ಕಳೆದ ವಾರ ಬಿಡುಗಡೆಯಾಗಿದ್ದು ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್​ ಸಿಕ್ಕಿದೆ.

ABOUT THE AUTHOR

...view details