ಕರ್ನಾಟಕ

karnataka

ತೆಲುಗಿನಿಂದ ಕನ್ನಡ ಕಿರುತೆರೆಗೆ ಬಂದು ಆಸೆ ಈಡೇರಿಸಿಕೊಂಡ ಯಶ್ಮಿಗೌಡ

By

Published : Mar 9, 2021, 3:32 PM IST

ತೆಲುಗು ಕಿರುತೆರೆಯಲ್ಲಿ ಹೆಸರು ಮಾಡಿರುವ ಯಶ್ಮಿಗೌಡ ಇದೀಗ ಕನ್ನಡಕ್ಕೆ ಬರುತ್ತಿದ್ದಾರೆ. 'ನಾಗಭೈರವಿ' ತೆಲುಗು ಧಾರಾವಾಹಿ ಕನ್ನಡಕ್ಕೆ ಡಬ್ ಆಗುತ್ತಿದ್ದು ಈ ಮೂಲಕ ಕನ್ನಡದಲ್ಲಿ ನಟಿಸಬೇಕು ಎಂಬ ಆಸೆಯನ್ನು ಯಶ್ಮಿ ನನಸು ಮಾಡಿಕೊಂಡಿದ್ದಾರೆ.

Yashmi gowda
ಯಶ್ಮಿಗೌಡ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ವಿದ್ಯಾ ವಿನಾಯಕ' ಧಾರಾವಾಹಿಯಲ್ಲಿ ನಾಯಕ ವಿನಾಯಕನ ಅತ್ತೆ ಮಗಳು ರಕ್ಷಾ ಆಗಿ ಅಭಿನಯಿಸಿದ್ದ ಚೆಲುವೆ ಯಶ್ಮಿ ಗೌಡ ಇದೀಗ ಕನ್ನಡ ಕಿರುತೆರೆಗೆ ಮರಳುತ್ತಿದ್ದಾರೆ. ಯಶ್ಮಿ ಈಗ ಭೈರವಿಯಾಗಿ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಲಿದ್ದಾರೆ.

ಕನ್ನಡ ಕಿರುತೆರೆಗೆ ಬಂದ ಯಶ್ಮಿಗೌಡ
ಕಿರುತೆರೆ ನಟಿ ಯಶ್ಮಿಗೌಡ

ಇದನ್ನೂ ಓದಿ:ಬೆಂಗಳೂರು ಅಂ.ಚಿತ್ರೋತ್ಸವ ಆರಂಭಕ್ಕೂ ಮುನ್ನವೇ ಸಂಚಾರಿ ವಿಜಯ್ ಅಸಮಾಧಾನ

ತೆಲುಗಿನ 'ನಾಗಭೈರವಿ' ಧಾರಾವಾಹಿ ಕನ್ನಡಕ್ಕೆ ಡಬ್ ಆಗುತ್ತಿದ್ದು ಅದರಲ್ಲಿ ಭೈರವಿ ಆಗಿ ನಟಿಸಿದ್ದ ಕನ್ನಡತಿ ಯಶ್ಮಿ ಗೌಡ ಇದೀಗ ಆ ಧಾರಾವಾಹಿ ಮೂಲಕ ಮತ್ತೆ ಕನ್ನಡ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. "ಬುದ್ಧಿವಂತ ಹುಡುಗಿ ಭೈರವಿ ಯುಎಸ್​​​​​​​​​​​​​​​​​​​​​​​ನಲ್ಲಿ ಹಾವುಗಳ ಬಗ್ಗೆ ಸಂಶೋಧನೆ ಮಾಡುತ್ತಿರುತ್ತಾಳೆ. ವೈಜ್ಞಾನಿಕ ಮನೋಭಾವ ಹೊಂದಿದ ಭೈರವಿ ನೇರ ನಡೆ ನುಡಿಯ ಹುಡುಗಿ. ದಂತ ಕಥೆಗಳು ಹಾಗೂ ಪುರಾಣದಲ್ಲಿ ಕಿಂಚಿತ್ತೂ ನಂಬಿಕೆ ಇಲ್ಲದ ಈಕೆ ಅಪನಂಬಿಕೆಯಿಂದ ನಂಬಿಕೆಯ ಕಡೆಗೆ ಸಾಗುವುದೇ ಈ ಧಾರಾವಾಹಿಯ ಕಥೆ". ವಿದ್ಯಾ ವಿನಾಯಕ ಧಾರಾವಾಹಿಯಲ್ಲಿ ಖಳನಾಯಕಿಯಾಗಿ ನಟಿಸಿದ್ದ ಯಶ್ಮಿ ಗೌಡ ನಂತರ ತೆಲುಗು ಕಿರುತೆರೆಯಲ್ಲಿ ಅವಕಾಶ ಪಡೆದುಕೊಂಡರು.‌ ಈಟಿವಿ ತೆಲುಗಿನಲ್ಲಿ ಪ್ರಸಾರವಾಗುತ್ತಿರುವ 'ಸ್ವಾತಿ ಚಿನುಕುಲು' ಧಾರಾವಾಹಿಯಲ್ಲಿ ವೆನ್ನಿಲ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದ ಯಶ್ಮಿ ನಂತರ ನಾಗಭೈರವಿಯ ಭೈರವಿ ಆಗಿ ಮೋಡಿ ಮಾಡಿದರು. ಇದೀಗ ಅದೇ ಧಾರಾವಾಹಿಯ ಕನ್ನಡ ಅವತರಣಿಕೆಯ ಮೂಲಕ ಕನ್ನಡ ಕಿರುತೆರೆಗೆ ಮರಳಿರುವ ಯಶ್ಮಿ ಕನ್ನಡ ಕಿರುತೆರೆಯಲ್ಲಿ ನಟಿಸಬೇಕು ಎಂಬ ಬಯಕೆಯನ್ನು ಈಡೇರಿಸಿಕೊಂಡಿದ್ದಾರೆ.

ಕನ್ನಡಕ್ಕೆ ಡಬ್ ಆಗುತ್ತಿರುವ 'ನಾಗಭೈರವಿ'
ತೆಲುಗು ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ಯಶ್ಮಿ

ABOUT THE AUTHOR

...view details