ಕರ್ನಾಟಕ

karnataka

ETV Bharat / sitara

'ಯಾರಿವಳು' ಪ್ರಸಾರ ಆರಂಭ...ತನ್ನ ಪಾತ್ರದ ಬಗ್ಗೆ ಪುಟಾಣಿ ಆರಾಧ್ಯ ಏನಂತಾಳೆ...? - Small screen actress

ಆರಾಧ್ಯ, ಸ್ವಾತಿಕೊಂಡೆ, ಆರವ್ ಸೂರ್ಯ, ಅಶೋಕ್ ಹೆಗ್ಡೆ, ವಾಣಿಶ್ರೀ ಹಾಗೂ ಇನ್ನಿತರರು ನಟಿಸುತ್ತಿರುವ ಹೊಸ ಧಾರಾವಾಹಿ 'ಯಾರಿವಳು' ನಿನ್ನೆಯಿಂದ ಪ್ರಸಾರ ಆರಂಭಿಸಿದೆ. ಬಾಲನಟಿ ಆರಾಧ್ಯ, ಧಾರಾವಾಹಿಯ ತನ್ನ ಪಾತ್ರದ ಬಗ್ಗೆ ಮಾತನಾಡಿದ್ದಾಳೆ.

Yarivalu child artist
ಆರಾಧ್ಯ

By

Published : Sep 1, 2020, 7:34 AM IST

Updated : Sep 1, 2020, 9:01 AM IST

ವೀಕ್ಷಕರಿಗೆ ವಿಭಿನ್ನ ಧಾರಾವಾಹಿ ಹಾಗೂ ಕಾರ್ಯಕ್ರಮಗಳ ಮೂಲಕ ಮನರಂಜನೆ ನೀಡುತ್ತಿರುವ ಉದಯ ವಾಹಿನಿಯಲ್ಲಿ ನಿನ್ನೆಯಿಂದ ಹೊಸ ಧಾರಾವಾಹಿ ಆರಂಭವಾಗಿದೆ. 'ಯಾರಿವಳು' ಹೊಸ ಧಾರಾವಾಹಿಯನ್ನು ನೋಡಲು ವೀಕ್ಷಕರು ಕುತೂಹಲದಿಂದ ಕಾಯುತ್ತಿದ್ದರು. ನಿನ್ನೆಯಿಂದ ಈ ಧಾರಾವಾಹಿ ಪ್ರಸಾರ ಆರಂಭಿಸಿದೆ.

ಶ್ರೀಮಂತ ಮನೆತನಕ್ಕೆ ಸೇರಿದ ಶ್ರೇಷ್ಟ, ಸ್ವಂತ ಅಪ್ಪ ಅಮ್ಮನ ಪ್ರೀತಿಯಿಂದ ವಂಚಿತಳಾದ ಮಗು. ಅಪ್ಪನಿಗೆ ಶ್ರೇಷ್ಟಳ ಹೆಸರಿನಲ್ಲಿರುವ ಆಸ್ತಿ ಮೇಲೆ ಪ್ರೀತಿ. ಜೊತೆಗೆ ಸ್ವಂತ ಅಮ್ಮನನ್ನು ಮರೆ ಮಾಚಿ ಯಾರನ್ನೋ ತಂದು ಇವಳೇ ನಿನ್ನ ಅಮ್ಮ ಎಂದು ನಂಬಿಸಲು ಯತ್ನಿಸುತ್ತಿರುತ್ತಾನೆ. ಶ್ರೇಷ್ಟಳನ್ನು ಈ ಕಷ್ಟದಿಂದ ಪಾರು ಮಾಡಲು ಧಾರಾವಾಹಿ ನಾಯಕಿ ಬರುತ್ತಾಳೆ ಮುಂದೆ ಏನು ನಡೆಯಲಿದೆ ಎಂಬುದು ಚಿತ್ರದ ಕಥೆ.

ಬಾಲನಟಿ ಆರಾಧ್ಯ

ಧಾರಾವಾಹಿಯ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಬಾಲನಟಿ ಶ್ರೇಷ್ಟ ಅಲಿಯಾಸ್ ಆರಾಧ್ಯ ತನ್ನ ಪಾತ್ರ ಹಾಗೂ ಧಾರಾವಾಹಿ ತಂಡದ ಬಗ್ಗೆ ಮಾತನಾಡಿದ್ದಾಳೆ. 'ಈ ಧಾರಾವಾಹಿಯಲ್ಲಿ ನಾನು ಶ್ರೇಷ್ಟ ಪಾತ್ರ ಮಾಡುತ್ತಿದ್ದೇನೆ. ಶ್ರೇಷ್ಟ ಬಹಳ ಮುಗ್ಧೆ ಹಾಗೂ ಎಮೋಷನಲ್, ನನ್ನ ಪಾತ್ರಕ್ಕೆ ಬಹಳ ಪ್ರಾಮುಖ್ಯತೆ ಇದೆ. ಧಾರಾವಾಹಿಯಲ್ಲಿ ತಂತ್ರಜ್ಞರು ಮಾಸ್ಕ್​​ ಹಾಕಿ ಕೆಲಸ ಮಾಡುತ್ತಿದ್ದಾರೆ. ಏನೇ ಸಾಮಗ್ರಿ ತಂದರು ಸ್ಯಾನಿಟೈಸ್ ಮಾಡಿ ತರುತ್ತಾರೆ' ಎಂದು ಹೇಳಿರುವುದಲ್ಲದೆ ಜನರಿಗೆ ಕೊರೊನಾ ಬಗ್ಗೆ ಮುಂಜಾಗ್ರತೆ ವಹಿಸುವಂತೆ ಕೂಡಾ ಮನವಿ ಮಾಡಿದ್ದಾಳೆ.

ಈ ಮುದ್ದು ಪುಟಾಣಿಯ ಮಾತು ಕೇಳುತ್ತಿದ್ದರೆ, ಇಷ್ಟು ಚಿಕ್ಕ ವಯಸ್ಸಿಗೆ ಎಷ್ಟು ತಿಳುವಳಿಕೆ ಇದೆಯಪ್ಪಾ ಎನ್ನಿಸುತ್ತದೆ. ಅಷ್ಟೇ ಅಲ್ಲ, ಪಟಪಟನೆ ಅರಳು ಹುರಿದಂತೆ ಮಾತಾಡುವ ಈ ಬಾಲಪ್ರತಿಭೆ ಧಾರಾವಾಹಿಯಲ್ಲಿ ಹೇಗೆ ನಟಿಸಿದ್ದಾಳೆ ಎಂಬುದನ್ನು ನೋಡಬೇಕು ಎನ್ನಿಸುತ್ತದೆ.

Last Updated : Sep 1, 2020, 9:01 AM IST

ABOUT THE AUTHOR

...view details