ಕರ್ನಾಟಕ

karnataka

ETV Bharat / sitara

ಮನಸಾರೆ ಧಾರಾವಾಹಿ ತಂಡಕ್ಕೆ ಧನ್ಯವಾದ ಹೇಳಿದ ಯಮುನಾ ಶ್ರೀನಿಧಿ: ಯಾಕೆ ಗೊತ್ತಾ? - Manasare serial team

ಮನಸಾರೆ ಧಾರಾವಾಹಿಯಲ್ಲಿ ಯಮುನಾ ಶ್ರೀನಿಧಿ ಅವರು ಕೌಸಲ್ಯ ಹಾಗೂ ವಾಸುಕಿ ಆಗಿ ನಟಿಸುತ್ತಿದ್ದಾರೆ. ಮನಸಾರೆ ಸೆಟ್​ನಲ್ಲಿನ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದು, "ನನ್ನ ಮಕ್ಕಳು ನಾನು ಕೆಲಸ ಮಾಡುವ ಸ್ಥಳಕ್ಕೆ ಬರುವುದನ್ನು ಇಷ್ಟಪಡುತ್ತೇನೆ. ಸೆಟ್​​ಗೆ‌ ಬಂದಾಗ ನನ್ನ ಮಗಳನ್ನು ಪ್ರೀತಿಯಿಂದ ನೋಡಿಕೊಂಡಿದ್ದಕ್ಕೆ ಮನಸಾರೆ ತಂಡಕ್ಕೆ ಧನ್ಯವಾದ ಹೇಳುತ್ತೇನೆ" ಎಂದು ಬರೆದುಕೊಂಡಿದ್ದಾರೆ.

Yamuna Srinidhi
ಮನಸಾರೆ ಧಾರಾವಾಹಿಯಲ್ಲಿ ಯಮುನಾ ಶ್ರೀನಿಧಿ

By

Published : Jan 13, 2021, 3:14 PM IST

ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮನಸಾರೆ ಧಾರಾವಾಹಿಯಲ್ಲಿ ನಟಿಸುತ್ತಿರುವ ಯುಮುನಾ ಶ್ರಿನಿಧಿ ಪೋಷಕ ಪಾತ್ರಗಳ ಮೂಲಕ ಕಿರುತೆರೆ ಲೋಕದಲ್ಲಿ ಮನೆ ಮಾತಾಗಿದ್ದಾರೆ. ಮನಸಾರೆಯಲ್ಲಿ ಕೌಸಲ್ಯ ಹಾಗೂ ವಾಸುಕಿ ಆಗಿ ನಟಿಸುತ್ತಿರುವ ಯಮುನಾ ಶ್ರೀನಿಧಿ ಉತ್ತಮ ನಟಿ ಮಾತ್ರವಲ್ಲದೇ, ಉತ್ತಮ ತಾಯಿ ಕೂಡ ಹೌದು. ಇತ್ತೀಚೆಗಷ್ಟೇ ತಮ್ಮ ಮುದ್ದಿನ ಮಗಳು ಲಾಸ್ಯ ಜೊತೆ ಮನಸಾರೆ ಧಾರಾವಾಹಿ ಸೆಟ್​ನಲ್ಲಿ ಕಾಣಿಸಿಕೊಂಡಿದ್ದಾರೆ.

ಮನಸಾರೆ ಧಾರಾವಾಹಿಯಲ್ಲಿ ಯಮುನಾ ಶ್ರೀನಿಧಿ

ಮನಸಾರೆ ಸೆಟ್​ನಲ್ಲಿರುವ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. "ನನ್ನ ಮಕ್ಕಳು ನಾನು ಕೆಲಸ ಮಾಡುವ ಸ್ಥಳಕ್ಕೆ ಬರುವುದನ್ನು ಇಷ್ಟಪಡುತ್ತೇನೆ. ಸೆಟ್​​ಗೆ‌ ಬಂದಾಗ ನನ್ನ ಮಗಳನ್ನು ಪ್ರೀತಿಯಿಂದ ನೋಡಿಕೊಂಡಿದ್ದಕ್ಕೆ ಮನಸಾರೆ ತಂಡಕ್ಕೆ ಧನ್ಯವಾದ ಹೇಳುತ್ತೇನೆ" ಎಂದು ಬರೆದುಕೊಂಡಿದ್ದಾರೆ.

ಯಮುನಾ ಶ್ರೀನಿಧಿ

ಅಶ್ವಿನಿ ನಕ್ಷತ್ರ ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟ ಯಮುನಾ ಶ್ರೀನಿಧಿ ಸದ್ಯ ಕನ್ನಡ ಕಿರುತೆರೆಯಲ್ಲಿ ತಾಯಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಅರಮನೆ, ಮಾನಸ ಸರೋವರ ಮುಂತಾದ ಧಾರಾವಾಹಿಗಳಲ್ಲಿ ನಟಿಸಿರುವ ಯಮುನಾ ಶ್ರಿನಿಧಿ ಮನಸಾರೆಯಲ್ಲಿ ಕೌಸಲ್ಯ ಹಾಗೂ ವಾಸುಕಿ ಎಂಬ ಎರಡು ಶೇಡ್ ಇರುವ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಂದ ಹಾಗೆ ಕೌಸಲ್ಯ ನಾಯಕಿಯ ಅಮ್ಮನ ಪಾತ್ರವಾಗಿದ್ದರೆ, ವಾಸುಕಿ ನಾಯಕಿಯ ಚಿಕ್ಕಮ್ಮ ನೆಗೆಟಿವ್ ಪಾತ್ರವಾಗಿದೆ.

ಓದಿ:ಡಬ್ಬಿಂಗ್ ಸಿನಿಮಾಗಳು ಹೆಚ್ಚಾದರೆ ಕನ್ನಡ ಚಿತ್ರರಂಗಕ್ಕೆ ನಷ್ಟ:ನಟ ಯೋಗಿ

ABOUT THE AUTHOR

...view details