ಕರ್ನಾಟಕ

karnataka

ETV Bharat / sitara

ಬಿಗ್ ಬಾಸ್ ಸೀಸನ್ 8 ಗೆಲ್ಲೋದು ಇವರೇನಾ..? - manju pavagada

ಆಗಸ್ಟ್​ 8ರಂದು ಕನ್ನಡ ಬಿಗ್​ ಬಾಸ್​ ಸೀಸನ್​ 8 ಫಿನಾಲೆ ನಡೆಯುತ್ತಿದೆ. ಯಾರು ಬಿಗ್​ ಬಾಸ್​ ಫಿನಾಲೆ ತಲುಪಲಿದ್ದಾರೆ. ಯಾರು, ಬಿಗ್​ ಬಾಸ್​ ಗೆಲ್ಲಲಿದ್ದಾರೆ ಎನ್ನುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಜೋರಾಗಿದೆ.

ಕನ್ನಡ ಬಿಗ್ ಬಾಸ್ ಸೀಸನ್ 8
Bigg Boss Season 8

By

Published : Jul 31, 2021, 2:28 PM IST

ಬಿಗ್ ಬಾಸ್ ಕನ್ನಡ ಸೀಸನ್ 8 ಗ್ರ್ಯಾಂಡ್‌ ಫಿನಾಲೆಗೆ ದಿನಗಣನೆ ಆರಂಭವಾಗಲಿದ್ದು, ವಿನ್ನರ್ ಯಾರಾಗಲಿದ್ದಾರೆ ಎಂಬ ಲೆಕ್ಕಾಚಾರ ಶುರುವಾಗಿದೆ.‌ ಹೌದು, ಸದ್ಯ ಮನೆಯಲ್ಲಿರುವ ಸ್ಪರ್ಧಿಗಳಾದ ಶಮಂತ್, ಅರವಿಂದ್, ದಿವ್ಯಾ ಉರುಡುಗ, ಶುಭಾ ಪೂಂಜಾ, ಮಂಜು ಪಾವಗಡ, ದಿವ್ಯಾ ಸುರೇಶ್, ವೈಷ್ಣವಿ ಹಾಗೂ ಪ್ರಶಾಂತ್ ಸಂಬರಗಿ ಬಿಗ್ ಬಾಸ್​ ವಿನ್ನರ್ ಆಗಲು ಕಾತುರರಾಗಿದ್ದಾರೆ.

ಬಿಗ್ ಬಾಸ್ ಸೀಸನ್ 8 ರ ಸ್ಪರ್ಧಿಗಳು

ಮೊದಲ ಇನಿಂಗ್ಸ್ ಹಾಗೂ ಸೆಕೆಂಡ್ ಇನಿಂಗ್ಸ್ ಪ್ರಕಾರ ಟಾಸ್ಕ್​ಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವುದು ಮಂಜು ಪಾವಗಡ ಹಾಗೂ ಅರವಿಂದ್ ಕೆ.ಪಿ. ಮನೆಯ ಸ್ಪರ್ಧಿಗಳ ಪ್ರಕಾರವೂ ಈ ಇಬ್ಬರು ಸದಸ್ಯರ ಹೆಸರು ಕೇಳಿಬಂದಿದೆ. ಹೀಗಾಗಿ ಇಬ್ಬರಲ್ಲಿ ನೇರ ಸ್ಪರ್ಧೆ ಏರ್ಪಟ್ಟಿದೆ. ಆದರೆ ಇದು ಟಾಸ್ಕ್ ಪ್ರಕಾರ ಗಣನೆಗೆ ತೆಗೆದುಕೊಂಡಿರುವ ಲೆಕ್ಕಾಚಾರ ಅಷ್ಟೇ. ಆದರೆ, ಶುಭಾ ಪೂಂಜಾ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಇದ್ದಾರೆ. ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಜೊತೆಗೆ ಬಿಗ್​ಬಾಸ್ ಮನೆಯಲ್ಲಿ ತಮ್ಮದೇ ಆದ ಶೈಲಿಯಲ್ಲಿ ಹೊರ ಜಗತ್ತಿಗೆ ಪರಿಚಯಿಸಿಕೊಂಡಿದ್ದಾರೆ. ತಮ್ಮ ತುಂಟತನ ಹಾಗೂ ಮುಗ್ಧತೆಯಿಂದ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ. ಪ್ರತಿ ಬಾರಿ ನಾಮಿನೇಟ್ ಆಗುತ್ತಿದ್ದ ಶುಭಾ ಪೂಂಜಾ ಅವರನ್ನು ಅಭಿಮಾನಿಗಳು ವೋಟ್ ಹಾಕುವ ಮೂಲಕ ಪ್ರತಿವಾರ ಸೇವ್ ಮಾಡುತ್ತಿದ್ದಾರೆ.

ಮಂಜು ಪಾವಗಡ

ಮೊದಲ ಇನ್ನಿಂಗ್ಸ್​ನಲ್ಲಿ ಎಲೆಮರೆ ಕಾಯಿಯಂತಿದ್ದ ವೈಷ್ಣವಿ ಗೌಡ ಕೂಡ ಫೈನಲ್ ಅಭ್ಯರ್ಥಿ ಎಂದರೆ ತಪ್ಪಾಗಲಾರದು. ಸೆಕೆಂಡ್ ಇನ್ನಿಂಗ್ಸ್​ನಲ್ಲಿ ಟಾಸ್ಕ್ ಗಳಲ್ಲಿ ಹಾಗೂ ಮನೆಯ ಸದಸ್ಯರೊಂದಿಗೆ ಭಾಗಿಯಾಗುತ್ತಿರುವ ಬಗ್ಗೆ ವೀಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ. 'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ಸನ್ನಿಧಿ ಪಾತ್ರದಿಂದ ಕನ್ನಡಿಗರ ಮನೆ ಮಾತಾಗಿದ್ದರು. ಹೀಗಾಗಿ ಪ್ರತಿ ವಾರ ವೈಷ್ಣವಿ ಅವರು ಕೂಡ ಹೆಚ್ಚಿನ ಮತಗಳನ್ನು ಪಡೆಯುತ್ತಿದ್ದಾರೆ.

ಇದೆಲ್ಲದರ ನಡುವೆ ಈ ವಾರ ಡಬಲ್ ಎಲಿಮಿನೇಶನ್ ನಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಟಾಪ್ 5 ಹಂತಕ್ಕೆ ತಲುಪುವ ಸ್ಪರ್ಧಿಗಳು ಯಾರು ಎಂದು ಸ್ಪರ್ಧಿಗಳಲ್ಲೇ ಲೆಕ್ಕಾಚಾರ ನಡೆಯುತ್ತಿದೆ. ಆದರೆ ಮಧ್ಯೆ ಬಿಗ್ ಬಾಸ್ ಫಿನಾಲೆ ದಿನ ಸುದೀಪ್ ಜೊತೆ ವೇದಿಕೆ ಹಂಚಿಕೊಳ್ಳುವ ಇಬ್ಬರು ಸ್ಪರ್ಧಿಗಳು ಯಾರು ಎಂಬುದು ಯಕ್ಷಪ್ರಶ್ನೆಯಾಗಿದೆ.

ಅರವಿಂದ್ ಕೆಪಿ

ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಟ್ರೆಂಡಿಂಗ್ ಪ್ರಕಾರ ಅರವಿಂದ್ ಹಾಗೂ ಮಂಜು ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. 'ಮಜಾಭಾರತ' ಮೂಲಕ ಪರಿಚಯವಾಗಿದ್ದ ಮಂಜು ಟಾಸ್ಕ್ ಸೇರಿದಂತೆ ಮನರಂಜನೆ ನೀಡಿದ್ದಾರೆ. ವಿಶ್ವ ಚಾಂಪಿಯನ್ ಬೈಕ್ ರೇಸರ್ ಆಗಿದ್ದರೂ ಕೂಡ ಕೆ ಪಿ ಅರವಿಂದ್ ಯಾರು ಎಂಬುದು ಬಿಗ್ ಬಾಸ್ ಮನೆಯಲ್ಲಿ ಗೊತ್ತಾಗಿದೆ. ಟಾಸ್ಕ್​ಗಳಲ್ಲಿ ಮಾತ್ರ ಉತ್ತಮ ಪ್ರದರ್ಶನ ನೀಡಿರುವ ಅರವಿಂದ್, ದಿವ್ಯಾ ಉರುಡುಗ ಅವರೊಂದಿಗಿನ ಸ್ನೇಹದಿಂದ ಯುವ ಜನತೆಯ ಮನಗೆದ್ದಿದ್ದಾರೆ. ಹೀಗಾಗಿ ಮಂಜು ಪಾವಗಡ ಅಥವಾ ಅರವಿಂದ್ ಕೆಪಿ ಇವರೊಂದಿಗೆ ನಟಿ ಶುಭಾ ಪೂಂಜಾ ಕೂಡ ಬಿಗ್ ಬಾಸ್ ಸೀಸನ್ 8 ಅನ್ನು ಗೆಲ್ಲುವ ಕುದುರೆಗಳು ಎನ್ನಲಾಗುತ್ತಿದೆ.

ABOUT THE AUTHOR

...view details