ಗಾನಗಂಧರ್ವ ಎಸ್.ಪಿ. ಬಾಲಸ್ರುಬ್ರಹ್ಮಣ್ಯಂ ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಸೇರಿ ಭಾರತದ 16 ಭಾಷೆಗಳಲ್ಲಿ ಸುಮಾರು 40 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿ ದಾಖಲೆ ಮಾಡಿರುವ ಖ್ಯಾತ ಗಾಯಕ.
ಅಪ್ಪ..ಸಾರಿ ದಯವಿಟ್ಟು ನನ್ನನ್ನು ಕ್ಷಮಿಸಿ...ಗಾನಗಂಧರ್ವನಿಗೆ ಪುತ್ರ ಹೀಗೆ ಹೇಳಿದ್ದೇಕೆ? - undefined
ತೆಲುಗಿನ ಖ್ಯಾತ ಕಾರ್ಯಕ್ರಮವೊಂದರಲ್ಲಿ ಇತ್ತೀಚೆಗೆ ಭಾಗವಹಿಸಿದ್ದ ಹಿರಿಯ ಗಾಯಕ ಎಸ್.ಪಿ. ಬಾಲಸ್ರುಬ್ರಹ್ಮಣ್ಯಂ ಪುತ್ರ ಎಸ್.ಪಿ.ಬಿ. ಚರಣ್ ಈ ಕಾರ್ಯಕ್ರಮದ ಮೂಲಕ ನಿಮ್ಮಲ್ಲಿ ಕ್ಷಮೆ ಕೇಳಲು ಬಯಸುತ್ತೇನೆ ಎಂದು ತಂದೆಗೆ ಕೇಳಿಕೊಂಡಿದ್ದಾರೆ. ಚರಣ್ ಕೂಡಾ ಹಿನ್ನೆಲೆ ಗಾಯಕರಾಗಿದ್ದು ಇದುವರೆಗೂ ಸುಮಾರು 2500 ಸಿನಿಮಾಗಳಲ್ಲಿ ಹಾಡಿದ್ದಾರೆ.
ಬಾಲು ಅವರ ಪುತ್ರ ಎಸ್.ಪಿ.ಬಿ. ಚರಣ್ ಕೂಡಾ ಹಿನ್ನೆಲೆ ಗಾಯಕ ಹಾಗೂ ನಟ. ಅಷ್ಟೇ ಅಲ್ಲ ಅವರು 8 ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿದ್ದಾರೆ. ಇತ್ತೀಚೆಗೆ ತೆಲುಗು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಚರಣ್, ಈ ಕಾರ್ಯಕ್ರಮದ ಮೂಲಕ ನಾನು ನನ್ನ ತಂದೆಗೆ ಕ್ಷಮೆ ಕೇಳಲು ಬಯಸುತ್ತೇನೆ. ನಿಮಗೆ ಬಹಳ ತೊಂದರೆ ಕೊಟ್ಟಿದ್ದೇನೆ. ಬೇಸರವಾಗುವಂತೆ ಮಾಡಿದ್ದೇನೆ. ಇದೆಲ್ಲದಕ್ಕೂ ನಾನು ಕೇಳುವ ಸಾರಿ ಸರಿಹೋಗುವುದಿಲ್ಲ. ಆದರೆ ನೀವು ಇಲ್ಲ ಎಂದರೆ ನಾನು ಇಲ್ಲ. ಎಂದಾದರೊಂದು ದಿನ ನಿಮಗಿಂತ ಹೆಚ್ಚಿಗೆ ಸಾಧಿಸಬೇಕು ಎಂಬ ಆಸೆ ಇದೆ. ಖಂಡಿತ ಸಾಧಿಸುತ್ತೇನೆ ಅಂದುಕೊಂಡಿದ್ದೇನೆ ಎಂದು ಕೇಳಿಕೊಂಡಿದ್ದಾರೆ.
2011 ರಲ್ಲಿ ನಟಿಯೊಬ್ಬರು ಎಸ್.ಪಿ.ಬಿ. ಚರಣ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್ ದಾಖಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಚರಣ್ಗೆ ಬೇಲ್ ದೊರೆತಿತ್ತು. ತಮ್ಮ ಕರಿಯರ್ ಹಾಗೂ ವೈಯಕ್ತಿಕ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದ ಎಸ್ಪಿಬಿ ಈ ಪ್ರಕರಣದಿಂದ ಬಹಳ ನೊಂದಿದ್ದರು.