ಕರ್ನಾಟಕ

karnataka

ETV Bharat / sitara

ಸುಂದರವಾದ ನೇಲ್ ಆರ್ಟ್​ ಬಿಡಿಸಿಕೊಂಡು ಪೋಸ್ ನೀಡಿರುವ ಈ ನಟಿ ಯಾರು? - ನೇಲ್ ಆರ್ಟ್

'ನಾಗಿಣಿ' ಧಾರಾವಾಹಿ ಖ್ಯಾತಿಯ ದೀಪಿಕಾ ದಾಸ್ ತಮ್ಮ ನೇಲ್ ಆರ್ಟ್ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಷೇರ್ ಮಾಡಿಕೊಂಡಿದ್ದಾರೆ. ಅಂದವಾದ ಉಗುರುಗಳ ಮೇಲೆ ಮತ್ತಷ್ಟು ಚೆಂದದ ನಾನಾ ನಮೂನೆಯ ವಿನ್ಯಾಸದ ನೇಲ್ ಆರ್ಟ್​ಗಳನ್ನು ಬಿಡಿಸಿಕೊಂಡಿದ್ದಾರೆ ದೀಪಿಕಾ.

ದೀಪಿಕಾ ದಾಸ್

By

Published : Sep 19, 2019, 11:08 PM IST

ಫ್ಯಾಷನ್ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಅದರಲ್ಲೂ ಹೆಣ್ಣು ಮಕ್ಕಳೆಂದ ಮೇಲೆ ಕೇಳಬೇಕೆ.. ದಿನಕ್ಕೊಂದು ನಾನಾ ನಮೂನೆಯ ಫ್ಯಾಷನ್ ಹೆಣ್ಣು ಮಕ್ಕಳ ಮನಸೂರೆಗೊಳಿಸುವುದಂತೂ ನಿಜ. ಖಾಸಗಿ ವಾಹಿನಿಯ 'ನಾಗಿಣಿ' ಧಾರಾವಾಹಿಯ ಪ್ರಮುಖ ಪಾತ್ರಧಾರಿ ಅಮೃತಾ ಇತ್ತೀಚೆಗೆ ಹೊಸ ಪೋಟೋಶೂಟ್ ಮಾಡಿಸಿ ಅದನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಪ್​ಲೋಡ್ ಮಾಡಿದ್ದರು.

'ನಾಗಿಣಿ' ಧಾರಾವಾಹಿ ಖ್ಯಾತಿಯ ದೀಪಿಕಾ ದಾಸ್

ಹೊಸ ನಮೂನೆಯ ಫೋಟೋಶೂಟ್ ಮೂಲಕ ತಮ್ಮದೇ ಆದಾ ಹವಾ ಕ್ರಿಯೇಟ್ ಮಾಡಿರುವ ದೀಪಿಕಾ ದಾಸ್ ಇದೀಗ ಮತ್ತೆ ತಮ್ಮ ಹೊಸ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಪ್​​ಲೋಡ್ ಮಾಡಿದ್ದಾರೆ. ಅದೂ ಕೂಡಾ ಹೊಸ ನೇಲ್ ಆರ್ಟ್ ಜೊತೆಗೆ. ತಮ್ಮ ಅಂದವಾದ ಉಗುರುಗಳ ಮೇಲೆ ಮತ್ತಷ್ಟು ಅಂದವಾದ ನಾನಾ ನಮೂನೆಯ ವಿನ್ಯಾಸದ ನೇಲ್ ಆರ್ಟ್​ಗಳನ್ನು ಬಿಡಿಸಿಕೊಂಡಿದ್ದಾರೆ ದೀಪಿಕಾ. ಕೆಂಪು, ಬಿಳಿ ಮತ್ತು ಕಪ್ಪು ಬಣ್ಣದ ನೇಲ್ ಪಾಲಿಶ್ ಮೇಲೆ ಬಿಡಿಸಿರುವಂತಹ ಕಲೆ​ ನೋಡಿದರೆ ಯಾವ ಮಹಿಳೆಯಾದರೂ ವಾವ್ ಎಂಬ ಉದ್ಘಾರ ಮಾಡುವುದು ಗ್ಯಾರಂಟಿ. ನೇಲ್ ಆರ್ಟ್ ಇತ್ತೀಚೆಗೆ ಬಂದಿದ್ದಲ್ಲ. ಬಹಳ ವರ್ಷಗಳಿಂದ ನೇಲ್​ ಆರ್ಟ್ ಬಳಕೆಯಲ್ಲಿದೆ. ಸುಂದರವಾದ ಈ ನೈಲ್ ಆರ್ಟ್ ಕೇವಲ ಕೈ ಬೆರಳುಗಳಿಗೆ ಮಾತ್ರ ಸೀಮಿತವಲ್ಲ. ಕಾಲಿನ ಬೆರಳುಗಳಿಗೂ ಬಿಡಿಸಿಕೊಳ್ಳಬಹುದು. ನಾಗಿಣಿಯ ಈ ನೇಲ್ ಆರ್ಟ್ ಪೋಟೋಗಳು ನಿಮಗೂ ಇಷ್ಟವಾಗುವುದು ಗ್ಯಾರಂಟಿ.

ನೇಲ್​ ಆರ್ಟ್​ಗೆ ಮನಸೋತ ನಾಗಿಣಿ

ABOUT THE AUTHOR

...view details