ಕರ್ನಾಟಕ

karnataka

ETV Bharat / sitara

ಅಮೂಲ್ಯ, ಶರ್ಮಿಳಾ ಮಾಂಡ್ರೆ ಜೊತೆ ಈ ಬಾರಿ ಬಿಗ್​​ಮನೆಗೆ ಹೋಗುವವರು ಯಾರು...? - ನಿರೂಪಕ ಅಗ್ನಿ

ಬಿಗ್​​​ಬಾಸ್​​​​​​​​​​​​​​​ ಸೀಸನ್ 7 ರ ಹವಾ ಶುರುವಾಗಿದೆ. ಇದರ ಬೆನ್ನಲ್ಲೇ ಈ ಬಾರಿ ಯಾವ್ಯಾವ ಸೆಲಬ್ರಿಟಿಗಳು ಬಿಗ್​​ಬಾಸ್​ ಮನೆಗೆ ಎಂಟ್ರಿ ನೀಡುತ್ತಾರೆ ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಬಾರಿ 15 ಸ್ಪರ್ಧಿಗಳು ಬಿಗ್​​​​​​​​​​​​ಬಾಸ್ ಮನೆ ಪ್ರವೇಶಿಸಲಿದ್ದಾರೆ. ಆ ಸ್ಪರ್ಧಿಗಳ ಹೆಸರು ಕೂಡಾ ಹರಿದಾಡುತ್ತಿದೆ.

ಅಮೂಲ್ಯ, ಶರ್ಮಿಳಾ ಮಾಂಡ್ರೆ

By

Published : Sep 20, 2019, 10:01 PM IST

ಬಿಗ್​​​ಬಾಸ್ ಆವೃತ್ತಿ 7 ರಲ್ಲಿ ಸಾಮಾನ್ಯ ಜನರಿಗೆ ಅವಕಾಶ ನೀಡದ ಬಿಗ್​​​​​​​​​​​​​​ಬಾಸ್ ಕೇವಲ ಸೆಲಬ್ರಿಟಿಗಳಿಗೆ ಮಾತ್ರ ಮಣೆ ಹಾಕಲು ನಿರ್ಧರಿಸಿದ್ದಾರೆ. ಹೀಗಾಗಿ, ಸೆಲಬ್ರಿಟಿಗಳ ಆಯ್ಕೆ ಆರಂಭವಾಗಿದೆ. ಮೂಲಗಳ ಪ್ರಕಾರ ಶರ್ಮಿಳಾ ಮಾಂಡ್ರೆ, ಅಮೂಲ್ಯ, ನೇಹಾ ಪಾಟೀಲ್, ನಟ ಮತ್ತು ನಿರೂಪಕ ಅಗ್ನಿ ಹಾಗೂ ಕುರಿ ಪ್ರತಾಪ್ ಅವರ ಹೆಸರು ಕೇಳಿಬರುತ್ತಿದೆ.

ಅಮೂಲ್ಯ

'ಸಜನಿ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದ ಬೆಡಗಿ ಶರ್ಮಿಳಾ ಮಾಂಡ್ರೆ ಈಗ ಸಿನಿಮಾ ನಿರ್ಮಾಣ ಮಾಡಲು ಕೂಡಾ ಮುಂದಾಗಿದ್ದಾರೆ. ಇವರಿಗೂ ಕೂಡಾ ಬದಲಾವಣೆ ಬೇಕಿರುವುದರಿಂದ ಬಿಗ್​ಬಾಸ್ ಮನೆಗೆ ಹೋಗಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಇನ್ನು ಮದುವೆ ನಂತರ ಸಿನಿಮಾಗಳಿಂದ ದೂರವೇ ಉಳಿದಿರುವ ಅಮೂಲ್ಯ ಕೂಡಾ ಬಿಗ್​​ಬಾಸ್​ ಮನೆಗೆ ಹೋಗಲು ರೆಡಿ ಇದ್ದಾರೆ ಎನ್ನಲಾಗುತ್ತಿದೆ. ಚಿಕ್ಕ ವಯಸ್ಸಿನಲ್ಲೇ ಚಿತ್ರರಂಗ ಪ್ರವೇಶಿಸಿದ ಅಮೂಲ್ಯ ನಾಯಕಿಯಾಗಿ ಕೂಡಾ ನಟಿಸಿ ಸಾಕಷ್ಟು ಅಭಿಮಾನಿಗಳನ್ನು ಪಡೆದಿದ್ದಾರೆ.

ಶರ್ಮಿಳಾ ಮಾಂಡ್ರೆ

ಇವರೊಂದಿಗೆ ನೇಹಾ ಪಾಟೀಲ್ ಈಗಾಗಲೇ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಹಾಗೆಯೇ, ಪ್ರಣವ್ ಎಂಬುವರನ್ನು ಕೈ ಹಿಡಿದಿದ್ದಾರೆ. ನೇಹಾ ಹಿರಿತೆರೆ, ಕಿರುತೆರೆ ಎರಡರಲ್ಲೂ ಅಭಿನಯಿಸಿದ್ದು ಬ್ರೇಕ್​​​ಗಾಗಿ ಬಿಗ್​​​​​​ ಮನೆಗೆ ಹೋಗಲಿದ್ದಾರೆ ಎನ್ನಲಾಗುತ್ತಿದೆ. ಇನ್ನು ಮಾಡೆಲ್ ಹಾಗೂ ನಿರೂಪಕ ಅಗ್ನಿ ಬಗ್ಗೆ ವೀಕ್ಷಕರಿಗೆ ಅಷ್ಟಾಗಿ ತಿಳಿದಿಲ್ಲ. ಆದರೂ, ಬಿಗ್​​​​​​​​​​​​​​​​​​​​ಬಾಸ್ ಮನೆ ಪ್ರವೇಶಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಇವರು 2016 ಮಿಸ್ಟರ್ ಬೆಂಗಳೂರು, 2017 ಸೂಪರ್ ಮಾಡೆಲ್ ಬೆಂಗಳೂರು, 2018 ಪರ್ಫಾಮರ್ ಆಫ್ ದಿ ಇಯರ್ ಪಟ್ಟಗಳನ್ನು ಪಡೆದಿದ್ದು ಇವರ ಹೆಸರು ಕೂಡಾ ಬಿಗ್ ಬಾಸ್ ನಲ್ಲಿ ಕೇಳಿ ಬರುತ್ತಿದೆ.

ನೇಹಾ ಪಾಟೀಲ್

ಇನ್ನು ಕುರಿ ಪ್ರತಾಪ್ ಬಹುತೇಕ ಎಲ್ಲರಿಗೂ ಗೊತ್ತು. ಹಲವು ಸಿನಿಮಾ ಹಾಗೂ ಕಿರುತೆರೆಗಳಲ್ಲಿ ಹಾಸ್ಯನಟರಾಗಿ ಅಭಿಮಾನಿಗಳನ್ನು ಪಡೆದಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ 'ಯುವರತ್ನ' ಸಿನಿಮಾದಲ್ಲಿ ಕೂಡಾ ಅಭಿನಯಿಸಿದ್ದಾರೆ. ಸೃಜನ್ ಲೋಕೇಶ್ ನಡೆಸಿಕೊಡುತ್ತಿರುವ ಮಜಾ ಟಾಕೀಸ್​​​​​​​​​​​​​​​​​​​​​​​​ನಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದರು. ಇದೀಗ ಮಜಾ ಟಾಕೀಸ್ ಕೂಡಾ ಮುಗಿಯುತ್ತಿದ್ದು ಬಿಗ್​​​​​​​​​​​​​​ಬಾಸ್ ಮನೆ ಪ್ರವೇಶಿಸುವುದು ಸುಲಭದ ಹಾದಿಯಾಗಿದೆ ಎಂಬ ಮಾತು ಕೇಳಿಬರುತ್ತಿದೆ.

ನಿರೂಪಕ ಅಗ್ನಿ
ಕುರಿ ಪ್ರತಾಪ್

ABOUT THE AUTHOR

...view details