ಕರ್ನಾಟಕ

karnataka

ETV Bharat / sitara

'ರಾಧಾ ರಮಣ' ಧಾರಾವಾಹಿಯ ಅನ್ವಿತಾ ಈಗೇನು ಮಾಡ್ತಿದ್ದಾರೆ ಗೊತ್ತಾ..? - Raksha busy in Telugu small screen

ಬಯಸದೆ ಬಣ್ಣದ ಲೋಕಕ್ಕೆ ಬಂದಿರುವ ರಕ್ಷಾ ಇದೀಗ ಕಿರುತೆರೆಯಲ್ಲಿ ಬಹಳ ಬ್ಯುಸಿಯಾಗಿದ್ದಾರೆ. ಕನ್ನಡ ಕಿರುತೆರೆ ಮಾತ್ರವಲ್ಲದೆ ಬೆಳ್ಳಿತೆರೆಯಲ್ಲಿ ಕೂಡಾ ನಟಿಸಿದ್ದಾರೆ. ಜೊತೆಗೆ ತೆಲುಗು ಕಿರುತೆರೆಯಲ್ಲೂ ಗುರುತಿಸಿಕೊಂಡಿದ್ದಾರೆ.

Radha ramana fame Anvitha
ಅನ್ವಿತಾ

By

Published : Dec 8, 2020, 1:37 PM IST

ಚಿತ್ರರಂಗದಲ್ಲಿ, ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ಅನೇಕರು ಬಣ್ಣದ ಲೋಕಕ್ಕೆ ಬರುವ ಮುನ್ನ ಬೇರೆಯೇ ಗುರಿ ಹೊಂದಿರುತ್ತಾರೆ. ಆದರೆ ಅವರೆಲ್ಲಾ ಆಕಸ್ಮಿಕವಾಗಿ ಅಂದುಕೊಳ್ಳದೆ ಬಣ್ಣದ ಲೋಕಕ್ಕೆ ಬರುತ್ತಾರೆ. ಕಿರುತೆರೆ ನಟಿ ರಕ್ಷಾಗೆ ಕೂಡಾ ಐಎಎಸ್ ಅಧಿಕಾರಿಯಾಗಬೇಕು ಎಂಬ ಮಹಾದಾಸೆ ಇತ್ತಂತೆ. ಆದರೆ ಬಯಸದೇ ಬಂದ ಅವಕಾಶ ಆಕೆಯನ್ನು ನಟಿಯನ್ನಾಗಿಸಿದೆ.

ಕಿರುತೆರೆ ನಟಿ ರಕ್ಷಾ

ಕಿರುತೆರೆ ಮೂಲಕ ಬಣ್ಣದ ಲೋಕಕ್ಕೆ ಬಂದ ಈಕೆ ಇಂದು ಪರಭಾಷೆಯ ಕಿರುತೆರೆಯಲ್ಲೂ ಗುರುತಿಸಿಕೊಂಡಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಾಧಾ ರಮಣ' ಧಾರಾವಾಹಿಯಲ್ಲಿ ನಾಯಕ ರಮಣನ ತಂಗಿ ಅನ್ವಿತಾ ಆಗಿ ನಟನಾ ಪಯಣ ಆರಂಭಿಸಿದ ರಕ್ಷಾಗೆ ಬಣ್ಣದ ಬದುಕು ತೀರಾ ಅನಿರೀಕ್ಷಿತವಾದುದು. ರಾಧಾ ರಮಣ ಧಾರಾವಾಹಿಯ ಆಡಿಶನ್​ನಲ್ಲಿ ಆಯ್ಕೆಯಾದ ಅನ್ವಿತಾ, ನಂತರ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಪುಟ್ಮಲ್ಲಿ' ಧಾರಾವಾಹಿಯಲ್ಲಿ ನಾಯಕಿ ಪುಟ್ಮಲ್ಲಿ ಪಾತ್ರದಲ್ಲಿ ನಟಿಸಿ ಮೋಡಿ ಮಾಡಿದ್ದರು.

ತೆಲುಗು ಕಿರುತೆರೆಯಲ್ಲಿ ಬ್ಯುಸಿಯಾಗಿರುವ ರಕ್ಷಾ

ರಕ್ಷಾ ತೆಲುಗಿನ 'ಕೃಷ್ಣವೇಣಿ' ಧಾರಾವಾಹಿಯಲ್ಲಿ ಕೂಡಾ ನಾಯಕಿಯಾಗಿ ನಟಿಸಿದ್ದಾರೆ. ಇದರ ಜೊತೆಗೆ ತೆಲುಗಿನ ಸ್ಟಾರ್ ಮಾ ಧಾರಾವಾಹಿಯಲ್ಲಿ ಆರಂಭವಾಗಲಿರುವ ಹೊಸ ಧಾರಾವಾಹಿ 'ಗುಂಡೆಂತ ಮನಸು' ಧಾರಾವಾಹಿಯಲ್ಲಿ ಕೂಡಾ ನಾಯಕಿಯಾಗಿ ರಕ್ಷಾ ಅಭಿನಯಿಸಲಿದ್ದಾರೆ. ಆ ಮೂಲಕ ಪರಭಾಷಾ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ ಈ ಕನ್ನಡತಿ. ರಕ್ಷಾ ಈಗಾಗಲೇ ಬೆಳ್ಳಿತೆರೆಗೂ ಕಾಲಿಟ್ಟಾಗಿದೆ. ಅಶ್ವಿನಿ ಪಲ್ಲಕ್ಕಿ ನಿರ್ದೇಶನದ 'ಫೋಟೋಗ್ರಾಫರ್ ಪಾಂಡು' ಸಿನಿಮಾದಲ್ಲಿ ರಕ್ಷಾ ನಾಯಕಿಯಾಗಿ ನಟಿಸಿದ್ದಾರೆ. ಒಳ್ಳೆ ಅವಕಾಶಗಳು ದೊರೆತರೆ ಈಕೆ ಮತ್ತೆ ಕನ್ನಡಕ್ಕೆ ಬರಲಿದ್ದಾರಂತೆ.

ಬೆಳ್ಳಿತೆರೆಯಲ್ಲೂ ಗುರುತಿಸಿಕೊಂಡಿರುವ ನಟಿ

ABOUT THE AUTHOR

...view details